ಕೆಪಿಎಸ್‌ಸಿ: ಏಳು ಅಭ್ಯರ್ಥಿಗಳಿಗೆ ಸಂದರ್ಶನ

ಗುರುವಾರ , ಮೇ 23, 2019
24 °C

ಫಲಿತಾಂಶ (ಮುನ್ನಡೆ+ಗೆಲುವು) 0/542LIVE

ಕೆಪಿಎಸ್‌ಸಿ: ಏಳು ಅಭ್ಯರ್ಥಿಗಳಿಗೆ ಸಂದರ್ಶನ

Published:
Updated:

ಬೆಂಗಳೂರು: ಹೈಕೋರ್ಟ್‌ ತೀರ್ಪಿನ ಅನ್ವಯ 1998ನೇ ಸಾಲಿನ ಗೆಜೆಟೆಡ್‌ ಪ್ರೊಬೇಷನರಿ ಆಯ್ಕೆ ಪಟ್ಟಿಯನ್ನು ಮತ್ತೊಮ್ಮೆ ಪರಿಷ್ಕರಿಸಲು ಮುಂದಾಗಿರುವ ಕರ್ನಾಟಕ ಲೋಕ ಸೇವಾ ಆಯೋಗ (ಕೆಪಿಎಸ್‌ಸಿ) ಏಳು ಅಭ್ಯರ್ಥಿಗಳಿಗೆ ಗುರುವಾರ ವ್ಯಕ್ತಿತ್ವ ಪರೀಕ್ಷೆ (ಸಂದರ್ಶನ) ನಡೆಸಿದೆ.

ಕೋರ್ಟ್‌ ತೀರ್ಪಿನಲ್ಲಿ ತಿಳಿಸಿದಂತೆ, 91 ಅಭ್ಯರ್ಥಿಗಳ ಮರು ಮೌಲ್ಯಮಾಪನ ಅಂಕಗಳನ್ನು ಪರಿಗಣಿಸಿ ಕೆಪಿಎಸ್‌ಸಿ ಮತ್ತೆ ಪಟ್ಟಿ ಪರಿಷ್ಕರಿಸಬೇಕಿದೆ. ಆದರೆ, ಈ 91 ಅಭ್ಯರ್ಥಿಗಳ ಪೈಕಿ, ಒಂಬತ್ತು ಮಂದಿಗೆ ಈ ಹಿಂದೆ ಸಂದರ್ಶನ ನಡೆಸಿಲ್ಲ ಎಂಬ ಕಾರಣಕ್ಕೆ 14 ವರ್ಷಗಳ ಬಳಿಕ ಸಂದರ್ಶನ ನಡೆಸುವುದಾಗಿ ಕೆಪಿಎಸ್‌ಸಿ ಪ್ರಕಟಿಸಿತ್ತು.

ಆದರೆ, ಈ ಒಂಬತ್ತು ಮಂದಿಗಳ ಪೈಕಿ ಒಬ್ಬ ಅಭ್ಯರ್ಥಿ ಈಗಾಗಲೇ ಮೃತ
ಪಟ್ಟಿದ್ದು, ಇನ್ನೊಬ್ಬ ಅಭ್ಯರ್ಥಿ ನಿವೃತ್ತಿ ವಯಸ್ಸು ದಾಟಿದ್ದಾರೆ. ಉಳಿದ ಏಳು ಅಭ್ಯರ್ಥಿಗಳಿಗೆ ಕೆಪಿಎಸ್‌ಸಿ ಕಚೇರಿಯಲ್ಲಿ ಗುರುವಾರ ಸಂದರ್ಶನ ನಡೆಯಿತು. ಈ ಎಲ್ಲ ಏಳೂ ಅಭ್ಯರ್ಥಿಗಳು ಈ ಹಿಂದೆಯೇ ಸಂದರ್ಶನ ಎದುರಿಸಿರುವ ಬಗ್ಗೆ ಸಂದರ್ಶನ ನಡೆಸಿದ ಪರಿಣತರ ತಂಡ ಎದುರು ಹೇಳಿಕೊಂಡಿದ್ದಾರೆ.

ಇರ್ತಾರಾ ಮೋದಿ? ಬರ್ತಾರಾ ರಾಹುಲ್?

ಲೋಕಸಭೆ ಫಲಿತಾಂಶಕ್ಕಾಗಿ ವಿಶ್ವವೇ ಬೆರಗುಗಣ್ಣಿನಿಂದ ಕಾಯುತ್ತಿದೆ. ನರೇಂದ್ರ ಮೋದಿ ಗೆಲ್ತಾರಾ? ರಾಹುಲ್‌ ಗಾಂಧಿ ಬರ್ತಾರಾ? ರಾಜಕಾರಣದ ಕ್ಷಣಕ್ಷಣದ ಮಾಹಿತಿ, ತಾಜಾ ಅಪ್‌ಡೇಟ್‌ಗಳಿಗಾಗಿ www.prajavani.net/prajamatha ನೋಡಿ.

ಫೇಸ್‌ಬುಕ್‌ನಲ್ಲಿ ನಮ್ಮನ್ನು ಲೈಕ್ ಮಾಡಿ ಅಥವಾ ಟ್ವಿಟರ್, ಯೂಟ್ಯೂಬ್, ಇನ್‌ಸ್ಟಾಗ್ರಾಂನಲ್ಲಿ ಫಾಲೊ ಮಾಡಿ.

ತ್ವರಿತ ಸುದ್ದಿ, ನಿಖರ ವಿಶ್ಲೇಷಣೆಗೆ www.prajavani.net ಓದಿ. 'ಪ್ರಜಾವಾಣಿ' ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !