ಸೋಮವಾರ, ಸೆಪ್ಟೆಂಬರ್ 16, 2019
22 °C
ಡೆಮಾಕ್ರಟಿಕ್‌ ಪಕ್ಷದ ವಿರೋಧ * ಮಹಿಳೆಯರ ಹಕ್ಕುಗಳಿಗೆ ಚ್ಯುತಿ– ಆಕ್ರೋಶ

ಗರ್ಭಪಾತ ನಿಷೇಧ ಮಸೂದೆಗೆ ಅಂಗೀಕಾರ

Published:
Updated:

ವಾಷಿಂಗ್ಟನ್‌: ಯಾವುದೇ ಪ್ರಕರಣದಲ್ಲೂ ಅಥವಾ ಯಾವುದೇ ಬಗೆಯ ಸಂದರ್ಭದಲ್ಲೂ ಗರ್ಭಪಾತವನ್ನು ನಿಷೇಧಿಸುವ ಕಠಿಣ ಮಸೂದೆಗೆ ಅಮೆರಿಕದ ಅಲಬಾಮ ರಾಜ್ಯದ ಗವರ್ನರ್‌ ಬುಧವಾರ ಅಂಗೀಕಾರ ನೀಡಿದ್ದಾರೆ.

ಕಳೆದ ಏಪ್ರಿಲ್‌ನಲ್ಲಿ ಇಂಡಿಯಾನ ರಾಜ್ಯವು ಗರ್ಭಪಾತ ಸಂಪೂರ್ಣವಾಗಿ ನಿಷೇಧಿಸಿತ್ತು. ನಂತರ, ಒಹಿಯೊ ರಾಜ್ಯದ ಸೆನೆಟ್‌ ಕೂಡ ಈ ಕುರಿತ ಮಸೂದೆಗೆ ಒಪ್ಪಿಗೆ ಮಾಡಿತ್ತು. ಈಗ, ಅಲಬಾಮ ರಾಜ್ಯದ ಕೇ ಇವೆಯ್‌ ಮಸೂದೆಗೆ ಸಹಿ ಹಾಕಿದ್ದಾರೆ.

‘ಗರ್ಭಪಾತ ವಿಷಯದಲ್ಲಿ ಸುಪ್ರೀಂ ಕೋರ್ಟ್‌ ತೀರ್ಪಿನ ಮರುಪರಿಶೀಲನೆ ಅಗತ್ಯವೆಂಬುದು ಹಲವು ರಾಜ್ಯಗಳ ಅಭಿಪ್ರಾಯವಾಗಿದೆ.

Post Comments (+)