ಶನಿವಾರ, ಆಗಸ್ಟ್ 15, 2020
26 °C

ಮರುಮತದಾನವಿರೋಧಿಸಿ ಟಿಡಿಪಿ ಪ್ರತಿಭಟನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಅಮರಾವತಿ: ಚಿತ್ತೂರು ಜಿಲ್ಲೆಯ ಚಂದ್ರಗಿರಿ ವಿಧಾನಸಭಾ ಕ್ಷೇತ್ರದ ಐದು ಮತಗಟ್ಟೆಗಳಲ್ಲಿ ಮರು ಮತದಾನ ನಡೆಸುವ ಚುನಾವಣಾ ಆಯೋಗದ ನಿರ್ಧಾರದ ವಿರುದ್ಧ ತೆಲುಗುದೇಶಂ ಪಕ್ಷವು (ಟಿಡಿಪಿ) ಗುರುವಾರ ಪ್ರತಿಭಟನೆ ನಡೆಸಿದೆ. ಮತದಾನ ನಡೆದು ಒಂದು ತಿಂಗಳ ಬಳಿಕ ಮರುಮತದಾನಕ್ಕೆ ಆದೇಶ ನೀಡಿರುವುದು ಟಿಡಿಪಿಯ ಆಕ್ರೋಶಕ್ಕೆ ಕಾರಣ. 

ಮುಕ್ತ ಮತ್ತು ನ್ಯಾಯಸಮ್ಮತ ಮತ ಚಲಾವಣೆ ನಡೆದಿಲ್ಲ ಎಂದು ವೈಎಸ್‌ಆರ್ ಕಾಂಗ್ರೆಸ್‌ ಪಕ್ಷ ಆಯೋಗಕ್ಕೆ ದೂರು ನೀಡಿತ್ತು. ಹಾಗಾಗಿ ಇಲ್ಲಿ ಮರು ಮತದಾನಕ್ಕೆ ಆಯೋಗ ನಿರ್ಧರಿಸಿದೆ. 

‘ಎಂಟು ಮತಗಟ್ಟೆಗಳಲ್ಲಿ ಮರುಮತದಾನ ನಡೆಸಬೇಕು ಎಂಬ ಮನವಿಯನ್ನು ಟಿಡಿಪಿ ನೀಡಿತ್ತು. ಆದರೆ, ಈ ಮನವಿಯ ಬಗ್ಗೆ ಆಯೋಗ ಯಾಕೆ ಕ್ರಮ ಕೈಗೊಂಡಿಲ್ಲ’ ಎಂದು ಟಿಡಿಪಿ ಅಭ್ಯರ್ಥಿ ಪುಲಿವರ್ತಿ ನಾಣಿ ಪ್ರಶ್ನಿಸಿದ್ದಾರೆ. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು