ಸಾರ್ವಜನಿಕರಿಗೆ ಉಚಿತವಾಗಿ ನೀರುಣಿಸುವ ಸೇವೆಗೆ ಎರಡು ದಶಕ!

ಗುರುವಾರ , ಜೂನ್ 27, 2019
29 °C

ಸಾರ್ವಜನಿಕರಿಗೆ ಉಚಿತವಾಗಿ ನೀರುಣಿಸುವ ಸೇವೆಗೆ ಎರಡು ದಶಕ!

Published:
Updated:
Prajavani

ಬಾಗಲಕೋಟೆ: ರಬಕವಿ ಬನಹಟ್ಟಿ ನಗರದಲ್ಲಿ ಯಾವುದೇ ಓಣಿಯಲ್ಲಿ ನೀರಿನ ತೊಂದರೆ ಕಂಡು ಬಂದರೆ ತಕ್ಷಣ ನೆನಪಾಗುವುದು ರೈತ ಯಲ್ಲಪ್ಪ ಕೊಡಗಾನೂರ ಅವರ ಜಮೀನಿನ ಕೊಳವೆ ಬಾವಿ.

ಎರಡು ದಶಕಗಳಿಂದ ನಿರಂತರವಾಗಿ ಸಾರ್ವಜನಿಕರಿಗೆ ಉಚಿತವಾಗಿ ನೀರು ಒದಗಿಸಿದ ಶ್ರೇಯ ಅವರದ್ದು. 24 ಎಕರೆ ಜಮೀನು ಹೊಂದಿರುವ ಯಲ್ಲಪ್ಪ, ಕಬ್ಬು, ಮತ್ತಿತರ ಬೆಳೆ ಬೆಳೆಯುತ್ತಾರೆ. ಸುತ್ತಲಿನ ಯಲ್ಲಟ್ಟಿ, ಹನಗಂಡಿ, ಚಿಮ್ಮಡ, ಹೊಸೂರ ಗ್ರಾಮಗಳ ಜನರೂ ಬೇಸಿಗೆಯಲ್ಲಿ ಇಲ್ಲಿಂದಲೇ ನೀರು ಒಯ್ಯುತ್ತಾರೆ. ಅಗ್ನಿ ಶಾಮಕ ವಾಹನಗಳಿಗೂ ಇಲ್ಲಿಂದಲೇ ನೀರು ತುಂಬಿಸಲಾಗುತ್ತದೆ.

ಮೊದಲಿದ್ದ ಕೊಳವೆ ಬಾವಿಯಲ್ಲಿ ಮೂರು ವರ್ಷಗಳ ಹಿಂದೆ ನೀರು ಕಡಿಮೆಯಾಗಿತ್ತು. ಮತ್ತೊಂದು ಕೊಳವೆಬಾವಿ ಕೊರೆಸಿ ಜನರಿಗೆ ಅನುಕೂಲ ಮಾಡಿಕೊಟ್ಟಿದ್ದಾರೆ.

‘ಯಲ್ಲಪ್ಪ ಜನರಿಗೆ ದೊಡ್ಡ ಉಪಕಾರ ಮಾಡುತ್ತಿದ್ದಾರೆ. ಅದಕ್ಕೆ ಬೆಲೆ ಕಟ್ಟಲು ಸಾಧ್ಯವಿಲ್ಲ. ನಮ್ಮ ಟ್ಯಾಂಕರ್‌ಗಳು ಹಗಲು–ರಾತ್ರಿ ನೀರು ಒಯ್ಯುತ್ತವೆ. ಹಾಗಾಗಿ ನೀರು ಉಚಿತವಾಗಿ ಪಡೆದು ಕೊಳವೆ ಬಾವಿಯ ಕರೆಂಟ್ ಬಿಲ್ ಕಟ್ಟುತ್ತೇವೆ’ ಎನ್ನುತ್ತಾರೆ ಪೌರಾಯುಕ್ತ ಆರ್‌.ಎಂ.ಕೊಡುಗೆ.

‘ಭೂತಾಯಿ ಕೊಟ್ಟಿದ್ದನ್ನು ಜನರಿಗೆ ಕೊಡುತ್ತಿದ್ದೇನೆ. ಜನರ ಬಾಯಾರಿಕೆ ನೀಗಿಸಿದ ಸಂತೃಪ್ತಿ ನನಗೆ ಇದೆ’ ಎಂದು ಯಲ್ಲಪ್ಪ ಪ್ರತಿಕ್ರಿಯಿಸುತ್ತಾರೆ.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !