ಶನಿವಾರ, ಜೂಲೈ 11, 2020
22 °C

ಸೋಮವಾರ, 19–5–1969

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಅಪೋಲೋ 10ರ ಸಾಹಸಮಯ ಚಂದ್ರಯಾನ ಆರಂಭ

ಕೇಪ್ ಕೆನಡಿ, ಮೇ 18– ಮಾನವನ ಅತ್ಯಂತ ಸಾಹಸಮಯ ಅಂತರಿಕ್ಷ ಯಾನಕ್ಕಾಗಿ ಅಪೋಲೋ–10 ಗಗನನೌಕೆ ಇಂದು
ರಾತ್ರಿ 10–19 ಗಂಟೆಗೆ (ಭಾರತೀಯ ಕಾಲಮಾನ) ವಿಶ್ವದ ಅತಿ ಪ್ರಬಲ ಸಾಟರ್ನ್–5 ರಾಕೆಟ್ ಶಕ್ತಿಯಿಂದ ಉಡಾಯಿಸಲ್ಟಟ್ಟಿತು.

ಜುಲೈನಲ್ಲಿ ಚಂದ್ರನ ಮೇಲೆ ಇಬ್ಬರು ಅಮೆರಿಕನರು ಇಳಿಯಲು ಈ ಗಗನ ನೌಕೆಯು ಹಾದಿ ಸುಗಮಗೊಳಿಸುವುದೆಂದು ನಿರೀಕ್ಷೆ.

ಅಪೋಲೋ–10 ಚಂದ್ರ ಪ್ರದಕ್ಷಿಣೆ
ಗಾಗಿ ನಿಯೋಜಿತವಾಗಿದೆ. ವಿಮಾನ ಪಡೆಯ ಕ. ಥಾಮಸ್ ಪಿ. ಸ್ಟಾಫರ್ಡ್ (38 ವರ್ಷ) ನೌಕಾ ಪಡೆಯ ಜಾನ್ ಡಬ್ಲ್ಯು ಯಂಗ್ (38 ವರ್ಷ) ಹಾಗೂ ಯೂಜನ್ ಎ. ಸೆರ್ಮನ್ 35 ವರ್ಷ ಅವರು ಗಗನಗಾಮಿಗಳಾಗಿರುವ ಈ ನೌಕೆ ಉಡಾಯಿಸಲ್ಪಡುವುದಕ್ಕೆ ಮೊದಲು ತಲೆದೋರಿದ್ದ ಸಣ್ಣ ಸಮಸ್ಯೆಯನ್ನು ಎಂಜಿನಿಯರುಗಳು ನಿವಾರಿಸಿದರು.

ಮತ್ತೆ ಬಂತು ಯೌವ್ವನ....

ಬೆಂಗಳೂರು, ಮೇ 18– ‘ಕಾಯಕಲ್ಪ ನನಗೆ ನೂರಕ್ಕೆ ನೂರರಷ್ಟು ತೃಪ್ತಿಕರ ಫಲಿತಾಂಶ ತಂದಿದೆ. ಸ್ನಾಯುಗಳು ಬಲವಾಗಿವೆ. ಕಣ್ಣು ದೃಷ್ಟಿ ತೀಕ್ಷ್ಣವಾಗಿದೆ. 17ರ ಹರೆಯದ ಹುಮ್ಮಸ್ಸು ಬೆಳೆದಿದೆ. ಇನ್ನೂ 25 ವರ್ಷಗಳ ಕಾಲ ನಿರಾಯಾಸವಾಗಿ ಬದುಕಬಲ್ಲೆನೆಂಬ ಆರೋಗ್ಯ ಬಂದಿದೆ’

ರಾಜಾಜಿನಗರದಲ್ಲಿರುವ ತಮ್ಮ ಮನೆಯ ಕತ್ತಲೆಯ ಕೋಣೆಯಲ್ಲಿ 44 ದಿನಗಳ ಕಾಯಕಲ್ಪ ಚಿಕಿತ್ಸೆ ಮುಗಿಸಿಕೊಂಡು, ಇಂದು ಸ್ನೇಹಿತರ ಮುಂದುಗಡೆ ಹಾಜರಾದ 60ರ ಹರೆಯದ ಹಿರಿಯ ಕಲಾವಿದ ಶ್ರೀ ರುಮಾಲೆ ಚನ್ನಬಸವಯ್ಯ
ನವರು ತಮ್ಮ ಆರೋಗ್ಯ ಸ್ಥಿತಿಯಲ್ಲಾದ ಪರಿವರ್ತನೆಯನ್ನು ವಿವರಿಸಿದರು.

ಎರಡು ತಿಂಗಳುಗಳ ಹಿಂದೆ ಅವರನ್ನು ನೋಡುತ್ತಿದ್ದ ಸ್ನೇಹಿತರಿಗೂ ಹಾಗೇ ಅನ್ನಿಸಿತು. ಮುಖ ಕೈಗಳ ಮೇಲಿರುವ ಸುಕ್ಕು ಮಾಯವಾಗಿದೆ. ಚರ್ಮದಲ್ಲಿ ಹೊಸತನದ ಕಾಂತಿ ಮೂಡಿದೆ. ಕಟ್ಟುನಿಟ್ಟಿನ  ವ್ರತದಿಂದಾಗಿ ಕ್ಷೀಣ ದೇಹ ಮೊದಲಿನಂತೆಯೇ ಇದೆಯಾದರೂ, ಸ್ನಾಯುಗಳಲ್ಲಿ ಬಿಗು ಮೂಡಿದಂತಿದೆ. ಸ್ವಲ್ಪ ಮಟ್ಟಿಗೆ ತಲೆಗೂದಲು ಕಪ್ಪಾಗಿದೆ.

ಮೈಸೂರು–ಮಹಾರಾಷ್ಟ್ರ ಗಡಿ ವಿವಾದಕ್ಕೆ ಪಾಟಸ್ಕರ್ ಮಸೂದೆ

ಪುಣೆ, ಮೇ 17– ರಾಜ್ಯಗಳ ನಡುವಣ ಗಡಿ ವಿವಾದಗಳನ್ನು ಇತ್ಯರ್ಥಪಡಿಸುವುದಕ್ಕಾಗಿ ರೂಪಿಸಲಾದ ಪಾಟಸ್ಕರ್ ಸೂತ್ರದ ಕರ್ತೃವಾದ ಕೇಂದ್ರದ ಮಾಜಿ ಕಾನೂನು ಸಚಿವ ಎಚ್.ವಿ. ಪಾಟಸ್ಕರ್ ಅವರು ಮೈಸೂರು – ಮಹಾರಾಷ್ಟ್ರ ರಾಜ್ಯಗಳ ಗಡಿಯಲ್ಲಿ ಮಾರ್ಪಾಟು ಮಾಡುವುದಕ್ಕೆ ಅವಕಾಶ ನೀಡುವ ಹಾಗೂ ಅದಕ್ಕೆ ಸಂಬಂಧಿಸಿದ ವಿಷಯಗಳ ಬಗ್ಗೆ ಕರಡು ಮಸೂದೆಯೊಂದನ್ನು ಸಿದ್ಧಪಡಿಸಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.