ಬುಧವಾರ, ಆಗಸ್ಟ್ 5, 2020
23 °C

ಚೀನಾ ಪರ ಗೂಢಚಾರ: ಮಾಜಿ ಅಧಿಕಾರಿಗೆ 20 ವರ್ಷ ಜೈಲು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

 ವಾಷಿಂಗ್ಟನ್: ಚೀನಾ ಪರ ಬೇಹುಗಾರಿಕೆ ನಡೆಸಿದ ಆರೋಪ ಎದುರಿಸುತ್ತಿದ್ದ ಅಮೆರಿಕದ ಸೆಂಟ್ರಲ್ ಇಂಟೆಲಿಜೆನ್ಸ್ ಏಜೆನ್ಸಿಯ(ಸಿಐಎ) ಮಾಜಿ ಅಧಿಕಾರಿಗೆ 20 ವರ್ಷ ಜೈಲುಶಿಕ್ಷೆ ವಿಧಿಸಲಾಗಿದೆ.

 ಸಿಐಎ ಮಾಜಿ ಅಧಿಕಾರಿ ಕೇವಿನ್ ಮಾಲೋರೈ ಶಿಕ್ಷೆಗೆ ಗುರಿಯಾದವರು. ಚೀನಾದ ಗುಪ್ತಚರ ಏಜೆಂಟ್‌ಗೆ ಅಮೆರಿಕದ ರಕ್ಷಣಾ ವ್ಯವಸ್ಥೆಗೆ ಸಂಬಂಧಿಸಿದ ಮಾಹಿತಿಯನ್ನು 25 ಸಾವಿರ ಡಾಲರ್‌ಗೆ ಮಾರಾಟ ಮಾಡಿದ ಆರೋಪವನ್ನು ಕೇವಿನ್‌ ಎದುರಿಸಿದ್ದರು.

ದೇಶದ ಭದ್ರತೆಗೆ ಸಂಬಂಧಿಸಿದ ಮಾಹಿತಿಯನ್ನು ಶತ್ರು ರಾಷ್ಟ್ರದ ಗುಪ್ತಚರ ಅಧಿಕಾರಿಗೆ ನೀಡಿದ್ದ ಆರೋಪ ಸಾಬೀತಾಗಿದ್ದರಿಂದ ಕೇವಿನ್ ಗೆ 20 ವರ್ಷಗಳ ಜೈಲುಶಿಕ್ಷೆಯನ್ನು ವಿಧಿಸಲಾಗಿದೆ ಎಂದು ಅಸಿಸ್ಟೆಂಟ್ ಅಟಾರ್ನಿ ಜನರಲ್ ಜಾನ್ ಡೇಮೆರ್ಸ್ ತಿಳಿಸಿದ್ದಾರೆ.

ಸಿಐಎನ ಮಾಜಿ ಅಧಿಕಾರಿಗಳನ್ನು ಚೀನಾ ಗುರಿಯಾಗಿರಿಸಿಕೊಂಡು ಈ ರೀತಿ ಮಾಹಿತಿ ಕಳವು ಮಾಡುತ್ತಿರುವ ಟ್ರೆಂಡ್ ಎಚ್ಚರಿಕೆ ಕರೆಗಂಟೆಯಾಗಿದೆ. ಇದು ದೇಶದ್ರೋಹದ ಕೃತ್ಯವಾಗಿದೆ ಎಂದು ಅಮೆರಿಕ ಹೇಳಿದೆ.

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು