ವಿಶ್ವಕಪ್‌ಗೆ ಕನ್ನಡ ವೀಕ್ಷಕ ವಿವರಣೆ

ಬುಧವಾರ, ಜೂನ್ 26, 2019
28 °C

ವಿಶ್ವಕಪ್‌ಗೆ ಕನ್ನಡ ವೀಕ್ಷಕ ವಿವರಣೆ

Published:
Updated:

ಬೆಂಗಳೂರು: ಸ್ಟಾರ್‌ ಸ್ಪೋರ್ಟ್ಸ್‌ ಕನ್ನಡ ವಾಹಿನಿಯಲ್ಲಿ ಕರ್ನಾಟಕದ ಹಿರಿಯ ಕ್ರಿಕೆಟಿಗರು ವಿಶ್ವಕಪ್ ವೀಕ್ಷಕ ವಿವರಣೆಯನ್ನು ನೀಡಲಿದ್ದಾರೆ.

ಹಿರಿಯ ಕ್ರಿಕೆಟಿಗರಾದ ಜಿ.ಆರ್. ವಿಶ್ವನಾಥ್, ವೆಂಕಟೇಶ್ ಪ್ರಸಾದ್, ಜಿ.ಕೆ. ಅನಿಲಕುಮಾರ್, ವಿಜಯ ಭಾರದ್ವಾಜ್ ಅವರು ವೀಕ್ಷಕ ವಿವರಣೆ ನೀಡಲಿದ್ದಾರೆಂದು ಎಂದು ಸ್ಟಾರ್ ಸಂಸ್ಥೆಯ ಮೂಲಗಳು ತಿಳಿಸಿವೆ.

ಬಹುಭಾಷೆಯಲ್ಲಿ ಕಾಮೆಂಟ್ರಿ: ಸ್ಟಾರ್ ಸ್ಪೋರ್ಟ್ಸ್‌ ವಾಹಿನಿಯು ಭಾರತದಲ್ಲಿ  ಏಳು ಪ್ರಾದೇಶಿಕ ಭಾಷೆಗಳಲ್ಲಿ ವೀಕ್ಷಕ ವಿವರಣೆ ಪ್ರಸಾರವಾಗಲಿದೆ. ಹಿಂದಿ, ತಮಿಳು, ತೆಲುಗು, ಬಾಂಗ್ಲಾ ಮತ್ತು ಮರಾಠಿಯಲ್ಲಿಯೂ ಇರಲಿದೆ.

ಇಂಗ್ಲೆಂಡ್, ಐರ್ಲೆಂಡ್ (ಸ್ಕೈ ಸ್ಪೋರ್ಟ್ಸ್‌), ದಕ್ಷಿಣ ಆಫ್ರಿಕಾ (ಸೂಪರ್‌ಸ್ಪೋರ್ಟ್ಸ್‌), ಮಧ್ಯಪ್ರಾಚ್ಯ ಮತ್ತು ಉತ್ತರ ಅಮೆರಿಕ (ಒಎಸ್‌ಎನ್), ಆಸ್ಟ್ರೇಲಿಯಾ (ಫಾಕ್ಸ್‌ ಸ್ಪೋರ್ಟ್ಸ್‌ ಮತ್ತು ಚಾನೆಲ್ ನೈನ್), ಅಮೆರಿಕ (ವಿಲ್ಲೊ ಟಿವಿ), ನ್ಯೂಜಿಲೆಂಡ್ (ಸ್ಕೈ ಟಿವಿ ಮತ್ತು ಪ್ರೈಮ್ ), ಪಾಕಿಸ್ತಾನ (ಟೆನ್ ಸ್ಪೋರ್ಟ್ಸ್‌, ಪಿಟಿವಿ), ಕೆರಿಬಿಯನ್ (ಇಎಸ್‌ಪಿಎನ್), ಬಾಂಗ್ಲಾದೇಶ (ಗಾಜಿ ಟಿವಿ, ಮಾಸರಂಗಾ, ಬಿಟಿವಿ), ಶ್ರೀಲಂಕಾ (ಎಸ್‌ಎಲ್‌ಆರ್‌ಸಿ), ಚೀನಾ ಮತ್ತು ದಕ್ಷಿಣ ಪೂರ್ವ ಏಷ್ಯಾ (ಫಾಕ್ಸ್‌ ನೆಟ್‌ವರ್ಕ್), ಏಷ್ಯಾ ಪೆಸಿಫಿಕ್ (ಡಿಜಿಸೆಲ್), ಅಫ್ಗಾನಿಸ್ತಾನ (ರೇಡಿಯೊ ಟೆಲಿವಿಷನ್ ಅಫ್ಗಾನಿಸ್ತಾನ) ಮತ್ತು ಯುರೋಪ್, ಮಧ್ಯ ಏಷ್ಯಾ (ಯುಪ್ ಟಿ.ವಿ) ದೇಶಗಳಲ್ಲಿಯೂ ವಿಶ್ವಕಪ್ ಪಂದ್ಯಗಳು ಪ್ರಸಾರಗೊಳ್ಳಲಿವೆ.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 3

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !