ಆನ್‌ಲೈನ್‌ ಮೂಲಕ ಮರಳು ಮಾರಾಟ!

ಗುರುವಾರ , ಜೂನ್ 20, 2019
24 °C
ದಕ್ಷಿಣ ಕನ್ನಡ ಜಿಲ್ಲಾಡಳಿತದ ಯೋಜನೆಗೆ ಆರಂಭದಲ್ಲೇ ಯಶಸ್ಸು

ಆನ್‌ಲೈನ್‌ ಮೂಲಕ ಮರಳು ಮಾರಾಟ!

Published:
Updated:

ಮಂಗಳೂರು: ಜಿಲ್ಲೆಯಲ್ಲಿ ಮರಳಿನ ಕೊರತೆ ಮತ್ತು ಕೃತಕ ದರ ಏರಿಕೆ ತಡೆಯಲು ದಕ್ಷಿಣ ಕನ್ನಡ ಜಿಲ್ಲಾಡಳಿತ ಆನ್‌ಲೈನ್‌ ಮೂಲಕ ಮರಳು ಮಾರಾಟ ಮಾಡುವ ವ್ಯವಸ್ಥೆಗೆ ಚಾಲನೆ ನೀಡಿದೆ. ಆರಂಭದಲ್ಲೇ ಈ ಪ್ರಯತ್ನ ಯಶಸ್ಸು ಕಂಡಿದೆ.

ಜಿಲ್ಲೆಯ ಜನರು ಮರಳು ಪಡೆಯಲು ಪರದಾಡುವುದನ್ನು ತಪ್ಪಿಸಲು ಜಿಲ್ಲಾ ಮರಳು ಉಸ್ತುವಾರಿ ಸಮಿತಿ ನೇತೃತ್ವದಲ್ಲಿ ಈ ಹೊಸ ಯೋಜನೆ ಜಾರಿಗೆ ತರಲಾಗಿದೆ. ಮೇ 20ರಿಂದ ಆನ್‌ಲೈನ್‌ ಮೂಲಕ ಮರಳು ಮಾರಾಟ ಆರಂಭವಾಗಿದ್ದು, ನಿತ್ಯವೂ 35ರಿಂದ 40 ಲೋಡ್‌ಗಳಷ್ಟು ಬಿಕರಿಯಾಗುತ್ತಿದೆ.

ಮರಳು ಮಾರಾಟಕ್ಕಾಗಿಯೇ ಜಿಲ್ಲಾ ಮರಳು ಉಸ್ತುವಾರಿ ಸಮಿತಿ dksandbazaar.com ವೆಬ್‌ಸೈಟ್‌ ಆರಂಭಿಸಿದೆ. ಕರಾವಳಿ ನಿಯಂತ್ರಣ ವಲಯದಲ್ಲಿ ಸಾಂಪ್ರದಾಯಿಕವಾಗಿ ಮರಳು ತೆಗೆಯಲು ಪರವಾನಗಿ ಹೊಂದಿರುವವರು ಮತ್ತು ಮರಳು ಸಾಗಣೆಗಾಗಿ ನೋಂದಣಿ ಮಾಡಿಕೊಂಡಿರುವ ಲಾರಿ ಮಾಲೀಕರಿಗಾಗಿ ಪ್ರತ್ಯೇಕ ಮೊಬೈಲ್‌ ಅಪ್ಲಿಕೇಷನ್‌ಗಳನ್ನು ಸಿದ್ಧಪಡಿಸಿದೆ.

ಖರೀದಿ ಹೇಗೆ?

ಮರಳು ಬೇಕಾದವರು dksandbazaar.comಗೆ ಲಾಗಿನ್‌ ಆಗಿ ಅಲ್ಲಿ BOOK YOUR SAND ಮೇಲೆ ಕ್ಲಿಕ್‌ ಮಾಡಬೇಕು. ಅಲ್ಲಿ ಆನ್‌ಲೈನ್‌ ಮೂಲಕವೇ ಹಣ ಪಾವತಿಸಬೇಕು. ಬಳಿಕ ಸ್ವಯಂಚಾಲಿತವಾಗಿ ಮರಳು ಪರವಾನಗಿದಾರರಿಗೆ ಖರೀದಿ ಸಂದೇಶ ರವಾನೆ ಆಗುತ್ತದೆ. ವಾಹನ ಮಾಲೀಕರಿಗೆ ಇನ್ನೊಂದು ಸಂದೇಶ ತಲುಪುತ್ತದೆ. ಖರೀದಿದಾರರಿಗೆ ಒಂದು ಒಟಿಪಿ ಸಂಖ್ಯೆ ರವಾನೆ ಆಗಿರುತ್ತದೆ.

ಲಾರಿ ಚಾಲಕ ಮತ್ತು ಧಕ್ಕೆಯ ಮಾಲೀಕ ಇಬ್ಬರಿಗೂ ಒಟಿಪಿ ಸಂಖ್ಯೆ ರವಾನೆ ಆಗಿರುತ್ತದೆ. ಆ ಸಂದೇಶ ಆಧರಿಸಿ ಲಾರಿಯು ನಿಗದಿಪಡಿಸಿದ ಧಕ್ಕೆಗೆ ತೆರಳಬೇಕು. ಅಲ್ಲಿ ಲಾರಿ ಚಾಲಕನು ಒಟಿಪಿಯನ್ನು ಧಕ್ಕೆ ಮಾಲೀಕರಿಗೆ ನೀಡಬೇಕು. ಹೊಂದಾಣಿಕೆ ಆದಲ್ಲಿ ಅವರು ಮರಳು ತುಂಬಿಸುತ್ತಾರೆ. ನಂತರ ಗ್ರಾಹಕರು ಸೂಚಿಸಿದ ಸ್ಥಳಕ್ಕೆ ತಲುಪಬೇಕು. ಅಲ್ಲಿ ಖರೀದಿದಾರರು ನೀಡಿದ ಒಟಿಪಿಯನ್ನು ತಾಳೆ ಮಾಡಿ, ಮರಳನ್ನು ಖಾಲಿ ಮಾಡಬೇಕು.

ಜಿಪಿಎಸ್‌ ಮೂಲಕ ನಿಗಾ:

ಮರಳು ಖರೀದಿ ಪ್ರಕ್ರಿಯೆಯ ಮೇಲೆ ಸಂಪೂರ್ಣವಾಗಿ ಜಿಪಿಎಸ್‌ ಸಾಧನದ ಮೂಲಕ ನಿಗಾ ಇರಿಸಲಾಗುತ್ತದೆ. ಲಾರಿಯು ಧಕ್ಕೆಗೆ ಬರುವುದು, ಮರಳು ತುಂಬಿಸಿಕೊಂಡು ಹೊರಡುವುದು ಮತ್ತು ಗ್ರಾಹಕರನ್ನು ತಲುಪುತ್ತಿರುವುದರ ಕ್ಷಣಕ್ಷಣದ ಮಾಹಿತಿ ಮರಳು ಉಸ್ತುವಾರಿ ಸಮಿತಿ ಕಾರ್ಯಾಲಯಕ್ಕೆ ತಲುಪುತ್ತಿರುತ್ತದೆ.

‘ಆನ್‌ಲೈನ್‌ ಮೂಲಕ ಮರಳು ಮಾರಾಟ ಮಾಡುವ ವ್ಯವಸ್ಥೆಗೆ ಉತ್ತಮ ಪ್ರತಿಕ್ರಿಯೆ ಬರುತ್ತಿದೆ. ಜನರಿಗೆ ಕಡಿಮೆ ದರದಲ್ಲಿ ಮರಳು ಒದಗಿಸುವುದು, ಮರಳಿನ ಲಭ್ಯತೆಯ ನಿಖರ ಮಾಹಿತಿ ನೀಡುವುದು ಮತ್ತು ಮರಳಿನ ಅಕ್ರಮ ಸಾಗಣೆ ತಡೆಯುವುದು ಇದರಿಂದ ಸಾಧ್ಯವಾಗಲಿದೆ’ ಎಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಸಸಿಕಾಂತ್‌ ಸೆಂಥಿಲ್‌ ತಿಳಿಸಿದರು.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !