‘ಎವರೆಸ್ಟ್‌: ದಟ್ಟಣೆಯಿಂದ ಮಾತ್ರ ಸಾಯುತ್ತಿಲ್ಲ’

ಮಂಗಳವಾರ, ಜೂನ್ 25, 2019
25 °C

‘ಎವರೆಸ್ಟ್‌: ದಟ್ಟಣೆಯಿಂದ ಮಾತ್ರ ಸಾಯುತ್ತಿಲ್ಲ’

Published:
Updated:
Prajavani

ಕಠ್ಮಂಡು: ಮೌಂಟ್ ಎವರೆಸ್ಟ್ ಏರಲು ಬಂದ ಪರ್ವತಾರೋಹಿಗಳು ಈ ವರ್ಷ ಕೇವಲ ದಟ್ಟಣೆಯಿಂದ ಮೃತಪಟ್ಟಿಲ್ಲ. ಇವರ ಸಾವಿಗೆ ಪ್ರತಿಕೂಲ ಹವಾಮಾನ ಸಹಿತ ಹಲವು ಕಾರಣಗಳಿವೆ ಎಂದು ನೇಪಾಳ ಸರ್ಕಾರ ಹೇಳಿದೆ.

ಸದ್ಯ ಎಂಟು ಮಂದಿ ಮೃತಪಟ್ಟಿರುವುದು ದೃಢಪಟ್ಟಿದೆ ಎಂದು ಪ್ರವಾಸೋದ್ಯಮ ಇಲಾಖೆ ಪ್ರಧಾನ ನಿರ್ದೇಶಕ ದಂಡು ರಾಜ ಘಿಮಿರೆ ಹೇಳಿದ್ದಾರೆ.

‘16 ಮಂದಿ ಮೃತಪಟ್ಟಿದ್ದಾರೆ ಇಲ್ಲವೇ ಕಣ್ಮರೆಯಾಗಿದ್ದಾರೆ ಎಂಬ ವರದಿಗಳಿವೆ. ಇವರಲ್ಲಿ ಎಂಟು ಜನ ಭಾರತೀಯರು ಸೇರಿದ್ದಾರೆ’ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಒಟ್ಟು 381 ಮಂದಿ ಎವರೆಸ್ಟ್ ಏರಿದ್ದರು. ಉತ್ತಮ ಹವಾಮಾನದ ಅವಧಿ ಕಡಿಮೆ ಇದೆ ಎಂದು ಅವಸರಿಸಿ ಒಮ್ಮಿಂದೊಮ್ಮೆಲೇ  ಚಾರಣದ ದಾರಿಯಲ್ಲಿ ನಿರೀಕ್ಷೆಗಿಂತ ಹೆಚ್ಚು ಪರ್ವತಾರೋಹಿಗಳು ಸೇರಿದ್ದರು’ ಎಂದು ಘಿಮಿರೆ ತಿಳಿಸಿದ್ದಾರೆ.

‘ಎವರೆಸ್ಟ್‌ ಏರುವವರು ಮತ್ತು ಇಳಿಯುವವರ ಸಾಲು ದೊಡ್ಡದಾಗಿದ್ದರಿಂದ ಮೃತಪಟ್ಟಿದ್ದಾರೆ. ಕಿರಿದಾದ ದಾರಿಯಲ್ಲಿ ಸಾಕಷ್ಟು ಮಂದಿ ಗಂಟೆಗಟ್ಟಲೆ ಕಾಯಬೇಕಾಗಿದೆ. ವಿಶೇಷವಾಗಿ 8000 ಮೀಟರ್‌ ಮೇಲಿನ ದಾರಿಯನ್ನು ‘ಸಾವಿನ ವಲಯ’ವೆಂದೇ ಕರೆಯಲಾಗುತ್ತದೆ ಎಂದು ವಿವರಣೆ ನೀಡಿದ್ದಾರೆ.

 

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 2

  Frustrated
 • 2

  Angry

Comments:

0 comments

Write the first review for this !