ಬುಧವಾರ, ಅಕ್ಟೋಬರ್ 21, 2020
25 °C
ತಹಶೀಲ್ದಾರರಿಗೆ ಲೋಕಾಯುಕ್ತ ಸೂಚನೆ

ಕೆರೆಗಳ ಒತ್ತುವರಿ ತೆರವಿಗೆ 8 ವಾರ ಗಡುವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಕಗ್ಗದಾಸಪುರ ಕೆರೆ ಹಾಗೂ ಅಬ್ಬಿಗೆರೆ ಕೆರೆಗಳ ಒತ್ತುವರಿಯನ್ನು 8 ವಾರದೊಳಗೆ ತೆರವುಗೊಳಿಸಬೇಕೆಂದು ಲೋಕಾಯುಕ್ತ ನ್ಯಾಯಮೂರ್ತಿ ವಿಶ್ವನಾಥ ಶೆಟ್ಟಿ ಅವರು ತಹಶೀಲ್ದಾರರಿಗೆ ಸೂಚಿಸಿದ್ದಾರೆ. 

ಕಗ್ಗದಾಸಪುರ ಕೆರೆ ಹಾಗೂ ಅಬ್ಬಿಗೆರೆ ಕೆರೆ ಪ್ರದೇಶದ ಒತ್ತುವರಿ ಮತ್ತು ಮಾಲಿನ್ಯದ ಸಮೀಕ್ಷೆಯ ವರದಿಯನ್ನು ಅಧಿಕಾರಿಗಳು ಲೋಕಾಯುಕ್ತರಿಗೆ ಮಂಗಳವಾರ ಸಲ್ಲಿಸಿದರು. ಕಂದಾಯ ಇಲಾಖೆಯು ಜತೆಗೆ ಜಲಮಂಡಳಿ, ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಹಾಗೂ ಯುನೈಟೆಡ್ ಬೆಂಗಳೂರು ಸಂಸ್ಥೆಯ ಪದಾಧಿಕಾರಿಗಳು ಸಮೀಕ್ಷೆಯಲ್ಲಿ ಪಾಲ್ಗೊಂಡಿದ್ದರು. ಕಗ್ಗದಾಸಪುರ ಕೆರೆಯಲ್ಲಿ 1 ಎಕರೆ ಹಾಗೂ ಅಬ್ಬಿಗೆರೆಯಲ್ಲಿ 2 ಎಕರೆ ಒತ್ತುವರಿಯಾಗಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. 

ಕಗ್ಗದಾಸಪುರ ಕೆರೆಗೆ ಪ್ರವೇಶಿಸುತ್ತಿರುವ ಕೊಳಚೆ ನೀರನ್ನು ತಡೆಯುವಲ್ಲಿ ಜಲಮಂಡಳಿ ವಿಫಲವಾಗಿದೆ. ಮಾಲಿನ್ಯ ನಿಯಂತ್ರಣ ಮಂಡಳಿಯು ತ್ಯಾಜ್ಯ ನೀರು ಸಂಸ್ಕರಣಾ ಘಟಕ (ಎಸ್‌ಟಿಪಿ) ಅಳವಡಿಕೆಗೆ ಆರ್ಥಿಕ ನೆರವು ನೀಡಿತ್ತು. ಆದರೆ, ಈವರೆಗೂ ಪೂರ್ಣಗೊಂಡಿಲ್ಲ ಎಂದು ತಿಳಿಸಲಾಗಿದೆ. 

ಅಬ್ಬಿಗೆರೆ ಕೆರೆಯು ಎರಡು ತಾಲ್ಲೂಕಿನ ವ್ಯಾಪ್ತಿಯಲ್ಲಿದ್ದು, ಎರಡು ಸರ್ವೆ ಸಂಖ್ಯೆಗಳನ್ನು ಹೊಂದಿದೆ. ಕೆರೆಯ ಒಂದು ಭಾಗ ಸಮೀಕ್ಷೆ ಪೂರ್ಣಗೊಂಡಿದೆ. ಇದರಲ್ಲಿ 1.5 ಎಕರೆಯನ್ನು ಜಲಮಂಡಳಿ ಹಾಗೂ ಅರ್ಧ ಎಕರೆಯನ್ನು ಖಾಸಗಿ ಸಂಸ್ಥೆಗಳು ಒತ್ತುವರಿ ಮಾಡಿವೆ. ಜೂ.11ರಿಂದ ಕೆರೆಯ ಇನ್ನುಳಿದ ಭಾಗದ ಸಮೀಕ್ಷೆ ಆರಂಭವಾಗಲಿದ್ದು, ಜೂನ್‌ ಅಂತ್ಯದೊಳಗೆ ಲೋಕಾಯುಕ್ತರಿಗೆ ಪೂರ್ಣ ವರದಿ ಸಲ್ಲಿಸಲಾಗುತ್ತದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು