ವಡೋದರ: ಬೌಲಿಂಗ್ ಮತ್ತು ಬ್ಯಾಟಿಂಗ್ನಲ್ಲಿ ಸಾಂಘಿಕ ಪ್ರದರ್ಶನ ನೀಡಿದ ಡೆಲ್ಲಿ ಕ್ಯಾಪಿಟಲ್ಸ್ ತಂಡವು ಶನಿವಾರ ಮಹಿಳಾ ಪ್ರೀಮಿಯರ್ ಲೀಗ್ನ ಪಂದ್ಯದಲ್ಲಿ ಏಳು ವಿಕೆಟ್ಗಳಿಂದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಮಣಿಸಿತು. ಅದರೊಂದಿಗೆ, ಹಾಲಿ ಆವೃತ್ತಿಯಲ್ಲಿ ಸ್ಮೃತಿ ಮಂದಾನ ಪಡೆಯ ಗೆಲುವಿನ ಓಟಕ್ಕೆ ತಡೆ ಬಿದ್ದಿತು.

ಜೆಮಿಮಾ ರಾಡ್ರಿಗಸ್ ನಾಯಕತ್ವದ ಡೆಲ್ಲಿ ತಂಡವು ಈ ಗೆಲುವಿನೊಂದಿಗೆ ಅಂಕಪಟ್ಟಿಯಲ್ಲಿ ಎರಡನೇ ಸ್ಥಾನಕ್ಕೆ (6 ಅಂಕ) ಬಡ್ತಿ ಪಡೆಯಿತು. ಸತತ ಐದು ಪಂದ್ಯ ಗೆದ್ದಿದ್ದ ಆರ್ಸಿಬಿ (10 ಅಂಕ), ಈ ಪಂದ್ಯವನ್ನು ಗೆದ್ದಿದ್ದರೆ ನೇರವಾಗಿ ಫೈನಲ್ ಪ್ರವೇಶಿಸುವ ಅವಕಾಶವಿತ್ತು. ಲೀಗ್ ಹಂತದಲ್ಲಿ ಮಂದಾನ ಪಡೆಗೆ ಇನ್ನು ಎರಡು ಪಂದ್ಯಗಳು ಬಾಕಿ ಉಳಿದಿದ್ದು, ಒಂದು ಪಂದ್ಯ ಗೆದ್ದರೂ ಪ್ರಶಸ್ತಿ ಸುತ್ತಿಗೆ ನೇರ ಅರ್ಹತೆ ಪಡೆಯಲಿದೆ.

ಕೋತಂಬಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಡೆಲ್ಲಿ ತಂಡದ ನಂದನಿ ಶರ್ಮಾ (26ಕ್ಕೆ3), ಮರೈಝನ್ ಕಾಪ್ (17ಕ್ಕೆ2) ಮತ್ತು ಮಿನು ಮಣಿ (18ಕ್ಕೆ2) ಅವರ ಪರಿಣಾಮಕಾರಿ ದಾಳಿಯ ಮುಂದೆ ಆರ್ಸಿಬಿ ತಂಡವು 20 ಓವರ್ಗಳಲ್ಲಿ 109 ರನ್ಗಳಿಗೆ ಕುಸಿಯಿತು. ನಾಯಕಿ ಸ್ಮತಿ ಮಂದಾನ (38; 34ಎ) ಜಾರ್ಜಿಯಾ ವೊಲ್ (11; 14ಎ) ಮತ್ತು ರಾಧಾ ಯಾದವ್ (18; 17ಎ) ಅವರು ಮಾತ್ರ ಎರಡಂಕಿ ಸ್ಕೋರ್ ಗಳಿಸಿದರು.

ಸುಲಭ ಗುರಿ ಬೆನ್ನಟ್ಟಿದ ಡೆಲ್ಲಿ ತಂಡವು ಲಾರಾ ವೋಲ್ವಾರ್ಟ್ (ಔಟಾಗದೇ 42; 38ಎ) ಅವರ ಬ್ಯಾಟಿಂಗ್ ಬಲದಿಂದ 15.4 ಓವರ್ಗಳಲ್ಲಿ 3 ವಿಕೆಟ್ಗಳಿಗೆ 111 ರನ್ ಗಳಿಸಿ ಸಂಭ್ರಮಿಸಿತು.

ಸಂಕ್ಷಿಪ್ತ ಸ್ಕೋರು: ಆರ್ಸಿಬಿ: 20 ಓವರ್ಗಳಲ್ಲಿ 109 (ಸ್ಮೃತಿ ಮಂದಾನ 38, ರಾಧಾ ಯಾದವ್ 18, ಶಿನೆಲ್ ಹೆನ್ರಿ 22ಕ್ಕೆ2, ಮರೈಝನ್ ಕಾಪ್ 17ಕ್ಕೆ2, ನಂದನಿ ಶರ್ಮಾ 26ಕ್ಕೆ3, ಮಿನು ಮಣಿ 18ಕ್ಕೆ2).

ಡೆಲ್ಲಿ ಕ್ಯಾಪಿಟಲ್ಸ್: 15.4 ಓವರ್ಗಳಲ್ಲಿ 3 ವಿಕೆಟ್ಗಳಿಗೆ 111 (ಲಾರಾ ವೋಲ್ವಾರ್ಟ್ ಔಟಾಗದೇ 42, ಜೆಮಿಮಾ ರಾಡ್ರಿಗಸ್ 24, ಮರೈಝನ್ ಕಾಪ್ ಔಟಾಗದೇ 19; ಸಯಾಲಿ ಸಾತ್ಘರೆ 18ಕ್ಕೆ2).

ಫಲಿತಾಂಶ: ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ಏಳು ವಿಕೆಟ್ ಜಯ. ಪಂದ್ಯದ ಆಟಗಾರ್ತಿ: ಮರೈಝನ್ ಕಾಪ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.