ಅಲ್ಪಮೊತ್ತಕ್ಕೆ ಕುಸಿದ ಶ್ರೀಲಂಕಾ; ಕರುಣಾರತ್ನೆ ಏಕಾಂಗಿ ಹೋರಾಟ

ಮಂಗಳವಾರ, ಜೂನ್ 25, 2019
25 °C
ಹೆನ್ರಿ, ಫರ್ಗ್ಯುಸನ್ ವಿಕೆಟ್ ಬೇಟೆ

ಅಲ್ಪಮೊತ್ತಕ್ಕೆ ಕುಸಿದ ಶ್ರೀಲಂಕಾ; ಕರುಣಾರತ್ನೆ ಏಕಾಂಗಿ ಹೋರಾಟ

Published:
Updated:
Prajavani

ಕಾರ್ಡಿಫ್: ಈ ಬಾರಿಯ ಟೂರ್ನಿಯ ಮತ್ತೊಂದು ಅಲ್ಪಮೊತ್ತದ ಆಟ ದಾಖಲಾಯಿತು.

ಶನಿವಾರ ಕಾರ್ಡಿಫ್‌ ಕ್ರೀಡಾಂಗಣದಲ್ಲಿ ನಡೆದ ಟೂರ್ನಿಯಮೂರನೇ ಪಂದ್ಯದಲ್ಲಿ ಶ್ರೀಲಂಕಾ ತಂಡವು ನ್ಯೂಜಿಲೆಂಡ್ ಎದುರು 29.2 ಓವರ್‌ಗಳಲ್ಲಿ 136 ರನ್‌ ಗಳಿಸಿತು. 

ಟಾಸ್ ಗೆದ್ದು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡ ನ್ಯೂಜಿಲೆಂಡ್ ತಂಡದ  ಮ್ಯಾಟ್ ಹೆನ್ರಿ (29ಕ್ಕೆ3) ಮತ್ತು ಲಾಕಿ ಫರ್ಗ್ಯುಸನ್ (22ಕ್ಕೆ3) ಅವರ ಸ್ವಿಂಗ್ ದಾಳಿಗೆ ಶ್ರೀಲಂಕಾದ ಬ್ಯಾಟ್ಸ್‌ಮನ್‌ಗಳು ಮಂಡಿಯೂರಿದರು.

ಇದನ್ನೂ ಓದಿ: ಲೈವ್‌ ಅಪ್‌ಡೇಟ್ಸ್ | ಕಿವೀಸ್‌ ಬೌಲಿಂಗ್‌ ಪರಾಕ್ರಮ: 136ಕ್ಕೆ ಲಂಕಾ ಸರ್ವ ಪತನ!

ಆದರೆ, ನಾಯಕ ದಿಮುತ ಕರುಣಾರತ್ನೆ ಮಾತ್ರ ಏಕಾಂಗಿ ಹೋರಾಟ ನಡೆಸಿದರು.  ಆರಂಭಿಕ ಬ್ಯಾಟ್ಸ್‌ಮನ್ ದಿಮುತ 84 ಎಸೆತಗಳನ್ನು ಎದುರಿಸಿ ಔಟಾಗದೆ 52 ರನ್‌ ಗಳಿಸಿದರು.  ಅವರಿಗೆ ಕೇವಲ ನಾಲ್ಕು ಬೌಂಡರಿ ಗಳಿಸಲು ಮಾತ್ರ ಸಾಧ್ಯವಾಯಿತು. ಇಡೀ ಇನಿಂಗ್ಸ್‌ನಲ್ಲಿ ಒಂದೂ ಸಿಕ್ಸರ್‌ ದಾಖಲಾಗಲಿಲ್ಲ.

ಪಂದ್ಯದ ಎರಡನೇ ಎಸೆತದಲ್ಲಿಯೇ ವಿಕೆಟ್ ಗಳಿಸಿದ ಮ್ಯಾಟ್‌ ಹೆನ್ರಿ ತಮ್ಮ ತಂಡದ ಅಭಿಯಾನಕ್ಕೆ ಚಾಲನೆ ನೀಡಿದರು. ಅವರ ನೇರ ಎಸೆತವು ಎಡಗೈ ಬ್ಯಾಟ್ಸ್‌ಮನ್ ಲಾಹಿರು ತಿರಿಮಾನ್ನೆ ಅವರ ಪ್ಯಾಡ್‌ಗೆ ಅಪ್ಪಳಿಸಿತು. ಆದರೆ ಅಂಪೈರ್ ಔಟ್ ನೀಡಲಿಲ್ಲ. ಇದರಿಂದಾಗಿ ಕಿವೀಸ್ ತಂಡದ ನಾಯಕ ಕೇನ್ ವಿಲಿಯಮ್ಸನ್ ಅವರು ಡಿಆರ್‌ಎಸ್ ಮೊರೆ ಹೋದರು. ತಿರಿಮಾನ್ನೆ ಔಟ್ ಎಂದು ತೀರ್ಪು ಹೊರಹೊಮ್ಮಿತು.

ಕುಶಾಲ ಪೆರೆರಾ (29 ರನ್) ಮತ್ತು ತಿಸಾರ ಪೆರೆರಾ (27 ರನ್) ಅವರಿಬ್ಬರೇ ಎರಡಂಕಿ ಮೊತ್ತ ದಾಖಲಿಸಿದರು. ಉಳಿಎ ಎಲ್ಲ ಬ್ಯಾಟ್ಸ್‌ಮನ್‌ಗಳು ವೈಫಲ್ಯ ಅನುಭವಿಸಿದರು. ಇದರಿಂದಾಗಿ ತಂಡವು 60 ರನ್‌ಗಳಿಗೆ ಆರು ವಿಕೆಟ್‌ಗಳನ್ನು ಕಳೆದುಕೊಂಡಿತ್ತು. ಆದರೆ, ಕರುಣಾರತ್ನೆ ಒಬ್ಬರೇ ಹೋರಾಟ ಮುಂದುವರಿಸಿದರು. ಒಂದು ಕಡೆ ವಿಕೆಟ್‌ ಗಳು ಉರುಳುತ್ತಿದ್ದರೆ ಇನ್ನೊಂದೆಡೆ ಕ್ರೀಸ್‌ನಲ್ಲಿ ಗಟ್ಟಿಯಾಗಿ ನಿಂತು ಸಾಧ್ಯವಾದಷ್ಟೂ ವೇಗದಲ್ಲಿ ರನ್‌ಗಳನ್ನು ಗಳಿಸುವ  ಒತ್ತಡ ಅವರ ಮೇಲಿತ್ತು.  ತಂಡದ ಮೊತ್ತ ನೂರರ ಗಡಿ ದಾಟಿಸುವಲ್ಲಿ ಅವರು ಕೊನೆಗೂ ಸಫಲರಾದರು.

ಇದನ್ನೂ ಓದಿ: ಲೈವ್‌ ಅಪ್‌ಡೇಟ್ಸ್| ಆಸ್ಟ್ರೇಲಿಯಾ–ಅಫ್ಗಾನಿಸ್ತಾನ: ಅಫ್ಗಾನ್‌ಗೆ ಆರಂಭಿಕ ಆಘಾತ

ಶುಕ್ರವಾರ ನಡೆದಿದ್ದ ಪಂದ್ಯದಲ್ಲಿ ಪಾಕಿಸ್ತಾನ ತಂಡವು 105 ರನ್‌ಗಳಿಗೆ ಆಲೌಟ್‌ ಆಗಿತ್ತು. ವೆಸ್ಟ್‌ ಇಂಡೀಸ್ ತಂಡವು ಏಳು ವಿಕೆಟ್‌ಗಳಿಂದ ಗೆದ್ದಿತ್ತು.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

  • 1

    Happy
  • 0

    Amused
  • 0

    Sad
  • 0

    Frustrated
  • 0

    Angry

Comments:

0 comments

Write the first review for this !