ಸೋಮವಾರ, ಏಪ್ರಿಲ್ 19, 2021
30 °C

ಸಿಡಿಲು ಬಡಿದು ಲಕ್ಷ್ಮೀ ಜನಾರ್ಧನಸ್ವಾಮಿ ದೇಗುಲ ಗೋಪುರಕ್ಕೆ ಹಾನಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಿಕ್ಕಬಳ್ಳಾಪುರ: ತಾಲ್ಲೂಕಿನ ಹೊಸಹುಡ್ಯ ಗ್ರಾಮದಲ್ಲಿ ಶುಕ್ರವಾರ ರಾತ್ರಿ ಸಿಡಿಲು ಬಡಿದು ಲಕ್ಷ್ಮೀ ಜನಾರ್ಧನಸ್ವಾಮಿ ದೇಗುಲದ ಗೋಪುರಕ್ಕೆ ಹಾನಿಯಾಗಿದೆ.

ಸಿಡಿಲಿನ ಹೊಡೆತಕ್ಕೆ ಗೋಪುರದ ಕಳಸ ಕಿತ್ತು ಕೆಳಗೆ ಬಿದ್ದಿದ್ದು, ಗೋಪುರಕ್ಕೆ ಅಳವಡಿಸಿದ್ದ ಶಿಲ್ಪಗಳು ಭಗ್ನಗೊಂಡಿವೆ. ಜತೆಗೆ ದೇವಾಲಯದ ಗೋಡೆಗಳಲ್ಲಿ ಬಿರುಕು ಕಾಣಿಸಿಕೊಂಡಿದ್ದು, ನೆಲಕ್ಕೆ ಅಳವಡಿಸಿದ್ದ ಟೈಲ್ಸ್‌ಗಳು ಕಿತ್ತಿವೆ. ಸಿಡಿಲಿನ ಬೆನ್ನಲ್ಲೆ ದೇವಾಲಯದ ಗೋಪುರ ಕಳಸ ಕಳಚಿ ಬಿದ್ದ ಶಬ್ಧ ಕೇಳಿ ಗ್ರಾಮಸ್ಥರು ದೇವಾಲಯದ ಬಳಿ ಬಂದು ನೋಡಿದಾಗ ಗೋಪುರಕ್ಕೆ ಹಾನಿಯಾಗಿರುವುದು ಕಂಡುಬಂದಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು