ಲಖನೌ: ಇಲ್ಲಿ ಆರಂಭವಾಗಿರುವ ರಣಜಿ ಟ್ರೋಫಿ ಸೆಮಿಫೈನಲ್ ಪಂದ್ಯದಲ್ಲಿ ಕರ್ನಾಟಕ ಹಾಗೂ ಉತ್ತರಾಖಂಡ ತಂಡಗಳು ಮುಖಾಮುಖಿಯಾಗಿವೆ. ಈ ಪಂದ್ಯದ ಮೊದಲ ದಿನದಾಟದಲ್ಲಿ ಕೆ.ಎಲ್ ರಾಹುಲ್ ಹಾಗೂ ನಾಯಕ ದೇವದತ್ತ ಪಡಿಕ್ಕಲ್ ಅವರ ಶತಕಗಳ ನೆರವಿನಿಂದ ಕರ್ನಾಟಕ ತಂಡ 2 ವಿಕೆಟ್ ಕಳೆದುಕೊಂಡು 355 ರನ್ ಕಲೆಹಾಕಿದೆ.

ಇದರಿಂದಾಗಿ ಭಾನುವಾರ ಇಲ್ಲಿ ಆರಂಭವಾದ ರಣಜಿ ಟ್ರೋಫಿ ಕ್ರಿಕೆಟ್ ಟೂರ್ನಿಯ ಸೆಮಿಫೈನಲ್ನಲ್ಲಿ ಕರ್ನಾಟಕ ತಂಡವು ಉತ್ತರಾಖಂಡ ಎದುರು 90 ಓವರ್ಗಳಲ್ಲಿ 2 ವಿಕೆಟ್ಗಳಿಗೆ 355 ರನ್ ಗಳಿಸಿತು. ದೇವದತ್ತ (ಬ್ಯಾಟಿಂಗ್ 148; 236ಎ, 4X16, 6X2) ಮತ್ತು ಕರುಣ್ ನಾಯರ್ (ಬ್ಯಾಟಿಂಗ್ 37; 65ಎ, 4X5, 6X1) ಕ್ರೀಸ್ನಲ್ಲಿದ್ದಾರೆ. ರಾಹುಲ್ (141; 211ಎ, 4X11, 6X5) ಪ್ರಥಮ ದರ್ಜೆ ಕ್ರಿಕೆಟ್ನಲ್ಲಿ 25ನೇ ಶತಕ ಹೊಡೆದರು.

ಟಾಸ್ ಸೋತು ಮೊದಲು ಬ್ಯಾಟಿಂಗ್ ಆರಂಭಿಸಿದ ಕರ್ನಾಟಕ ತಂಡಕ್ಕೆ ಉತ್ತಮ ಆರಂಭ ಸಿಗಲಿಲ್ಲ. ಮಯಂಕ್ ಅಗರವಾಲ್ (5 ರನ್) ಗಳಿಸಿ ಪೆವಿಲಿಯನ್ ಸೇರಿಕೊಂಡರು. ಬಳಿಕ ಜೊತೆಯಾದ ಕೆ.ಎಲ್ ರಾಹುಲ್ ಹಾಗೂ ನಾಯಕ ದೇವದತ್ತ ಪಡಿಕ್ಕಲ್ ಉತ್ತರಾಖಂಡ ಬೌಲರ್ಗಳ ಮೇಲೆ ಸವಾರಿ ಮಾಡಿದರು. ಈ ಜೋಡಿ ಎರಡನೇ ವಿಕೆಡ್ಗೆ 278ರನ್ಗಳ ಬೃಹತ್ ಜೊತೆಯಾಟ ಆಡಿದರು.

ಕ್ವಾರ್ಟರ್ಫೈನಲ್ನಲ್ಲಿ ಮುಂಬೈ ಎದುರು ಶತಕ ಬಾರಿಸಿದ್ದ ರಾಹುಲ್ ಆಟಕ್ಕೆ ಕುದುರಿಕೊಂಡಿದ್ದರು. ಅವರೊಂದಿಗೆ ಸೇರಿಕೊಂಡ ದೇವದತ್ತ ಕೂಡ ರನ್ ಗಳಿಸಲು ಆರಂಭಿಸಿದರು. ಇವರಿಬ್ಬರ ಬ್ಯಾಟಿಂಗ್ ಮುಂದೆ ಆರು ಬೌಲರ್ಗಳ ತಂತ್ರಗಾರಿಕೆಗಳು ವಿಫಲವಾದವು. ಟೆಸ್ಟ್ ಕ್ರಿಕೆಟ್ ಪಂದ್ಯಗಳಲ್ಲಿ ಮಿಂಚಿರುವ ಅನುಭವಿ ರಾಹುಲ್ ಇಲ್ಲಿ 86 ಎಸೆತಗಳಲ್ಲಿ ಅರ್ಧಶತಕ ಗಳಿಸಿದರು.

ಊಟದ ವಿರಾಮದ ನಂತರವೂ ಅವರ ತಾಳ್ಮೆಯ ಆಟ ಮುಂದುವರಿಯಿತು. ಒಟ್ಟು 153 ಎಸೆತಗಳಲ್ಲಿ ಶತಕ ದಾಖಲಿಸಿದರು. ಇನ್ನೊಂದೆಡೆ ದೇವದತ್ತ ಕೂಡ ಚೆಂದದ ಬ್ಯಾಠಿಂಗ್ ಮಾಡಿದರು. ಎಡಗೈ ಬ್ಯಾಟರ್ ದೇವದತ್ತ ಊಟಕ್ಕೂ ಮುನ್ನ 65 ಎಸೆತಗಳಲ್ಲಿ ಅರ್ಧಶತಕ ದಾಟಿದರು. ಚಹಾ ವಿರಾಮಕ್ಕೆ ಸ್ವಲ್ಪ ಹೊತ್ತಿಗೆ ಮುಂಚೆ 144 ಎಸೆತಗಳಲ್ಲಿ ಶತಕದ ಗಡಿ ಕೂಡ ಮುಟ್ಟಿದರು.

ಸಂಕ್ಷಿಪ್ತ ಸ್ಕೋರು: (ಮೊದಲ ಸೆಮಿ) ಲಖನೌ– ಮೊದಲ ಇನಿಂಗ್ಸ್: ಕರ್ನಾಟಕ: 90 ಓವರ್ಗಳಲ್ಲಿ 2 ವಿಕೆಟ್ಗಳಿಗೆ 355 (ಕೆ.ಎಲ್. ರಾಹುಲ್ 141, ದೇವದತ್ತ ಪಡಿಕ್ಕಲ್ ಬ್ಯಾಟಿಂಗ್ 148, ಕರುಣ್ ನಾಯರ್ ಬ್ಯಾಟಿಂಗ್ 37, ಆದಿತ್ಯ ರಾವತ್ 73ಕ್ಕೆ2) ವಿರುದ್ಧ ಉತ್ತರಾಖಂಡ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.