ದಿನ ಭವಿಷ್ಯ: ಮನಸ್ಸಿಗೆ ಮುದ ನೀಡುವ ಕಾರ್ಯಕ್ರಮಗಳಲ್ಲಿ ಭಾಗವಹಿಸುವಿರಿ
Published 14 ಫೆಬ್ರುವರಿ 2026, 18:30 IST
ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
ಮೇಷ
ಹಿರಿಯ ಅಧಿಕಾರಿಗಳೊಬ್ಬರ ಭೇಟಿಯಿಂದ ಎಲ್ಲಾ ಕಾರ್ಯಗಳು ಸರಾಗವಾಗುವವು. ಸುತ್ತಲಿನ ಜನರೊಂದಿಗೆ ಬೆರೆಯುವುದರ ಪ್ರಯೋಜನ ಅನುಭವಕ್ಕೆ ಬರಲಿದೆ. ವಿಲಾಸೀ ಜೀವನ ಶೈಲಿಯ ಆಸೆ ಈಡೇರುವುದು.
14 ಫೆಬ್ರುವರಿ 2026, 18:30 IST
ವೃಷಭ
ಚಿನ್ನ ಬೆಳ್ಳಿ ವ್ಯಾಪಾರಿಗಳಿಗಿಂದು ಹೆಚ್ಚು ವ್ಯಾಪಾರದ ಜೊತೆಗೆ ಅಂಗಡಿಯಲ್ಲಿ ಬೆಲೆ ಬಾಳುವ ವಸ್ತುಗಳು ಕಾಣೆಯಾಗಬಹುದು. ಮುಂಬರುವ ಶುಭ ಕಾರ್ಯಕ್ಕೆ ಹೆಚ್ಚಿನ ತಯಾರಿಯನ್ನು ನಡೆಸಿಕೊಳ್ಳಬೇಕಾಗಬಹುದು.
14 ಫೆಬ್ರುವರಿ 2026, 18:30 IST
ಮಿಥುನ
ಆದಾಯಕ್ಕೇನೂ ಕೊರತೆಯಿರದು. ಆದರೂ ಖರ್ಚು- ವೆಚ್ಚದಲ್ಲಿ ಮಿತವ್ಯಯ ಸಾಧಿಸಲು ಪ್ರಯತ್ನಿಸಿ. ವೈದ್ಯರ ತಪಾಸಣೆಯಿಂದ ಬಂದ ಫಲಿತಾಂಶ ನಿಮಗೆ ಹಾಗು ನಿಮ್ಮ ಕುಟುಂಬದವರಿಗೆ ಆತಂಕವನ್ನು ಸೃಷ್ಟಿ ಮಾಡಲಿದೆ.
14 ಫೆಬ್ರುವರಿ 2026, 18:30 IST
ಕರ್ಕಾಟಕ
ಉಳಿದವರಿಗಿಂತ ಎಲ್ಲ ಕೆಲಸವನ್ನು ಏಕಾಗ್ರತೆಯಿಂದ ಸಾಧಿಸಲು ಯತ್ನಿಸುವಿರಿ. ಅದರ ಫಲವಾಗಿ ಯಶಸ್ಸು ಸಿಗುವುದು. ಮನೆ ಕಟ್ಟಲು ಅಥವಾ ಮನೆಯನ್ನು ನವೀಕರಿಸಲು ಹಣದ ವ್ಯವಸ್ಥೆ ಸಹೋದರರಿಂದ ಆಗಲಿದೆ.
14 ಫೆಬ್ರುವರಿ 2026, 18:30 IST
ಸಿಂಹ
ಗಿಡ ಮೂಲಿಕೆಯಂತಹ ಔಷಧದ ಬಳಕೆಯಿಂದ ಹೆಂಡತಿಯ ಆರೋಗ್ಯದಲ್ಲಿ ಸಾಕಷ್ಟು ಸುಧಾರಣೆ ಕಾಣುವುದು. ಸಂಪೂರ್ಣವಾಗಿ ನಿಮದೇ ಜವಬ್ದಾರಿಯಲ್ಲಿ ಇರುವ ತಮ್ಮಂದಿರ ಓದಿನಲ್ಲಿ ಉತ್ತಮ ಪ್ರಗತಿಕಾಣುವಿರಿ.
14 ಫೆಬ್ರುವರಿ 2026, 18:30 IST
ಕನ್ಯಾ
ಮನಸ್ಸಿಗೆ ಮುದ ನೀಡುವ ಕಾರ್ಯಕ್ರಮಗಳಲ್ಲಿ ಭಾಗವಹಿಸುವಿರಿ. ನಿಮ್ಮ ಹಟದಿಂದಾಗಿ ಕೆಲ ಸವಾಲುಗಳನ್ನು ಎದುರಿಸುವ ಪರಿಸ್ಥಿತಿ ಎದುರಾಗಬಹುದು. ಮನೆಯಲ್ಲಿ ಸಮಾರಂಭ ನಡೆಸಲು ದಿನ ಗೊತ್ತು ಮಾಡುವಿರಿ.
14 ಫೆಬ್ರುವರಿ 2026, 18:30 IST
ತುಲಾ
ಇಂದಿನ ದಿನಚರಿಯ ಹೊರತು ಪಡಿಸಿದ ಕೆಲಸಕ್ಕೆ ನಿಮ್ಮ ಸುಪ್ತ ಮನಸ್ಸು ಯೋಜನೆಗಳನ್ನು ಸ್ಥಗಿತಗೊಳಿಸುವಂತೆ ಆದೇಶಿಸುತ್ತಿದೆ. ಈ ದಿನ ವೈದ್ಯರನ್ನು ಭೇಟಿ ಮಾಡಬೇಕಾದ ಸ್ಥಿತಿಯು ಎದುರಾಗಬಹುದು.
14 ಫೆಬ್ರುವರಿ 2026, 18:30 IST
ವೃಶ್ಚಿಕ
ಸಂಗೀತ, ಸಾಹಿತ್ಯ, ಚಿತ್ರರಂಗದ ಕಲಾವಿದರಿಗೆ ಕೈತುಂಬಾ ಕೆಲಸ ಇದ್ದರೂ ಆರ್ಥಿಕವಾಗಿ ಶ್ರಮಕ್ಕೆ ತಕ್ಕಂತಹ ಫಲ ಸಿಗಲಾರದು. ಚಿತ್ರರಂಗದವರಿಗೆ ಖ್ಯಾತಿ, ಹೊಸ ಹೊಸ ಗೌರವಾನ್ವಿತ ಅವಕಾಶ ದೊರೆಯುವುದು.
14 ಫೆಬ್ರುವರಿ 2026, 18:30 IST
ಧನು
ಚಾಲಕ ವೃತ್ತಿಯವರು ನಿಯಮ ಬದ್ಧವಾಗಿ ವಾಹನ ಚಾಲನೆ ಮಾಡುವುದು ಒಳ್ಳೆಯದು. ನೆಡೆದ ಒಂದು ಘಟನೆಯಿಂದಾಗಿ ಯಾವುದಕ್ಕೆ ಹಾಗು ಯಾರಿಗೆ ಹೆಚ್ಚು ಪ್ರಾಮುಖ್ಯತೆ ಕೊಡಬೇಕೆಂಬುದು ನಿಮಗೆ ತಿಳಿಯಲಿದೆ.
14 ಫೆಬ್ರುವರಿ 2026, 18:30 IST
ಮಕರ
ಬದಲಾಗುವ ಬದುಕಿನ ಗತಿಯನ್ನು ಸಮರ್ಥವಾಗಿ ನಿಭಾಯಿಸುವಲ್ಲಿ ಯಶಸ್ವಿಯಾಗುವಿರಿ. ಹಾಲು ಅಥವಾ ಹಾಲಿನ ಪದಾರ್ಥ ಮಾರಾಟಗಾರರಿಗೆ ಲಾಭ. ಆಲೋಚನೆಗಳನ್ನು ಕಾರ್ಯ ರೂಪಕ್ಕೆ ಇಳಿಸಲು ಸೂಕ್ತ ಸಮಯವಲ್ಲ.
14 ಫೆಬ್ರುವರಿ 2026, 18:30 IST
ಕುಂಭ
ಸಿದ್ಧ ಉಡುಪು ಮಾರಾಟಗಾರರಿಗೆ ದೊಡ್ಡ ಪ್ರಮಾಣದಲ್ಲಿ ಸಂಗ್ರಹಣೆ ಮಾಡಲು ಈ ದಿನ ಉತ್ತಮ. ನಿಮ್ಮ ಪ್ರಾಮಾಣಿಕತೆಗೆ ತಕ್ಕ ಪ್ರತಿಫಲ ಸಿಗುವ ಸಮಯ ಬರುವುದು. ವೈದ್ಯ ವೃತ್ತಿಯವರಿಗೆ ತೃಪ್ತಿಕರ ವರಮಾನ ಪ್ರಾಪ್ತಿ.
14 ಫೆಬ್ರುವರಿ 2026, 18:30 IST
ಮೀನ
ಸ್ನೇಹಿತರ ಅನಿವಾರ್ಯ ಸ್ಥಿತಿಗಳಿಂದ ನೀವು ಅವರ ಜಮೀನಿನ ಕೆಲಸ ಗಳನ್ನು ನೋಡಿಕೊಳ್ಳಬೇಕಾಗುವುದು. ದಿನಸಿ ವ್ಯಾಪಾರ ವಹಿವಾಟುಗಳು ಹೆಚ್ಚಿನ ಲಾಭ ತರಲಿದೆ. ವಾಹನಗಳ ಚಾಲಕರಿಗೆ ಬಿಡುವಿಲ್ಲದ ಕೆಲಸ ಇರುತ್ತದೆ.
14 ಫೆಬ್ರುವರಿ 2026, 18:30 IST