ಕೋಲ್ಕತ್ತ: ಹಾಲಿ ಚಾಂಪಿಯನ್ ಮೋಹನ್ ಬಾಗನ್ ಸೂಪರ್ ಜೈಂಟ್ಸ್ ತಂಡವು ಉದ್ಘಾಟನಾ ಪಂದ್ಯದಲ್ಲಿ 2–0 ಗೋಲುಗಳಿಂದ ಕೇರಳ ಬ್ಲಾಸ್ಟರ್ಸ್ ತಂಡವನ್ನು ಸೋಲಿಸಿ, ಇಂಡಿಯನ್ ಸೂಪರ್ ಲೀಗ್ ಅಭಿಯಾನವನ್ನು ಉತ್ತಮ ರೀತಿಯಲ್ಲಿ ಆರಂಭಿಸಿತು.

ವಿವೇಕಾನಂದ ಯುವಭಾರತಿ ಕ್ರೀಡಾಂಗಣದಲ್ಲಿ ಶನಿವಾರ ನಡೆದ ಈ ಪಂದ್ಯದಲ್ಲಿ ಜೇಮಿ ಮೆಕ್ಲಾರೆನ್ (36ನೇ ನಿಮಿಷ) ವಿರಾಮಕ್ಕೆ ಮೊದಲು ಮೋಹನ್ಬಾಗನ್ ತಂಡಕ್ಕೆ ಮುನ್ನಡೆ ಒದಗಿಸಿದರು. ಕೊನೆಯ ನಿಮಿಷ ಟಾಮ್ ಅಲ್ಫ್ರೆಡ್ ಗೋಲು ಗಳಿಸಿ ಮುನ್ನಡೆ ಹೆಚ್ಚಿಸಿದರು. ಗೆಲುವಿಗಾಗಿ ಕೋಲ್ಕತ್ತದ ದೈತ್ಯ ತಂಡ ಮೂರು ಪಾಯಿಂಟ್ಸ್ ಪಡೆಯಿತು. ಆಸ್ಟ್ರೇಲಿಯಾದವರಾದ ಮೆಕ್ಲಾರೆನ್ ‘ಪಂದ್ಯದ ಆಟಗಾರ’ ಗೌರವಕ್ಕೆ ಪಾತ್ರರಾದರು.

ಬಡ್ತಿ– ಹಿಂಬಡ್ತಿ:

ಇದೇ ವೇಳೆ, ಐಎಸ್ಎಲ್ನಲ್ಲಿ ಕೊನೆಯ ಸ್ಥಾನ ಗಳಿಸುವ ತಂಡವು, ಎರಡನೇ ಸ್ತರದ ಲೀಗ್ ಆದ ಇಂಡಿಯನ್ ಫುಟ್ಬಾಲ್ ಲೀಗ್ಗೆ (ಐಎಫ್ಎಲ್) ಹಿಂಬಡ್ತಿ ಪಡೆಯಲಿದೆ. ಐಎಫ್ಎಲ್ನಲ್ಲಿ ಚಾಂಪಿಯನ್ ಆದ ತಂಡವು, ಇಂಡಿಯನ್ ಸೂಪರ್ ಲೀಗ್ಗೆ ಬಡ್ತಿ ಪಡೆಯಲಿದೆ ಎಂದು ಅಖಿಲ ಭಾರತ ಫುಟ್ಬಾಲ್ ಫೆಡರೇಷನ್ ಪ್ರಕಟಣೆಯಲ್ಲಿ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.