ದಿನ ಭವಿಷ್ಯ: ಉತ್ತಮ ಅವಕಾಶಗಳು ಎದುರಾಗಲಿವೆ
Published 13 ಫೆಬ್ರುವರಿ 2026, 18:30 IST
ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
ಮೇಷ
ಕೌಟುಂಬಿಕವಾಗಿ ಜವಾಬ್ದಾರಿಗಳನ್ನು ಕಡಿಮೆ ಮಾಡುವ ಬಗ್ಗೆ ಗಮನಹರಿಸಿ. ಸಿನಿಮಾ ನಟ ನಟಿಯರಿಗೆ ಅವಕಾಶದ ಶುಭ ಸುದ್ದಿ ಸಿಗುವುದು. ವ್ಯಾಪಾರದಲ್ಲಿ ನಿರೀಕ್ಷೆಗೂ ಮೀರಿ ಲಾಭ ಸಿಗಲಿದೆ.
13 ಫೆಬ್ರುವರಿ 2026, 18:30 IST
ವೃಷಭ
ಮೊಬೈಲ್ ಫೋನ್‌ಗಳ ಅಥವಾ ಕಂಪ್ಯೂಟರ್‌ಗಳ ಮಾರಾಟಗಾರರಿಗೆ ಅಥವಾ ರಿಪೇರಿ ಮಾಡುವವರಿಗೆ ಆದಾಯ ಕಂಡುಬರುತ್ತದೆ. ಹಣಕಾಸಿನ ವ್ಯವಹಾರದಲ್ಲಿ ಪಾಲುದಾರಿಕೆ ಪಡೆಯುವಿರಿ.
13 ಫೆಬ್ರುವರಿ 2026, 18:30 IST
ಮಿಥುನ
ದಾಖಲೆ ಪರಿಶೀಲನೆ ತೀರ್ಮಾನದಿಂದ ನಿಸ್ಸಂಶಯವಾಗಿ ಮನೋವ್ಯಾಧಿ ದೂರಾಗುತ್ತದೆ. ಕೆಲಸ ಕಾರ್ಯಗಳಲ್ಲಿ ಏಕಾಗ್ರತೆ ಅನಿವಾರ್ಯ. ಸರ್ಕಾರಿ ಅಧಿಕಾರಿಗಳ ವರ್ಗಾವಣೆ ಪ್ರಕ್ರಿಯೆ ಆರಂಭಗೊಳ್ಳಲಿದೆ.
13 ಫೆಬ್ರುವರಿ 2026, 18:30 IST
ಕರ್ಕಾಟಕ
ಸ್ವಂತ ಉದ್ಯೋಗದವರು ಅಧಿಕ ಬಂಡವಾಳ ಹಾಕುವುದರಿಂದ ಕೈ ಸುಡುವಂತಾಗುವುದು. ಸಣ್ಣ ಪುಟ್ಟ ವಿಚಾರಗಳನ್ನೂ ಉಪೇಕ್ಷಿಸದೆ ಮಾತನಾಡುವಿರಿ. ಸಂಶೋಧಕರು ಹೆಮ್ಮೆ ಪಡೆಯುವಿರಿ.
13 ಫೆಬ್ರುವರಿ 2026, 18:30 IST
ಸಿಂಹ
ಕೌಟುಂಬಿಕವಾಗಿ ಸಹೋದರನ ಏಳಿಗೆ ಸಹಿಸುವ ಮನೋಭಿಲಾಷೆ ಯನ್ನು ಬೆಳೆಸಿಕೊಳ್ಳಿರಿ. ಜ್ಞಾನಾರ್ಜನೆಯಾಗುವುದು. ಬಹುಮುಖದ ಖರ್ಚು-ವೆಚ್ಚಗಳನ್ನು ನಿರ್ವಹಿಸ ಬೇಕಾಗಬಹುದು.
13 ಫೆಬ್ರುವರಿ 2026, 18:30 IST
ಕನ್ಯಾ
ಬದುಕಿನ ತಿರುವಿಗೆ ಸ್ನೇಹಿತರ ಕೊಡುಗೆ ಬಹಳ ಎಂಬುದನ್ನು ಗಮನದಲ್ಲಿಟ್ಟುಕೊಂಡು ಸ್ನೇಹಿತರಲ್ಲಿ ವ್ಯವಹರಿಸಿ. ಬಟ್ಟೆ ವ್ಯಾಪಾರಿಗಳಿಗೆ ಉತ್ತಮ ಮಾರಾಟ, ಲಾಭವಾಗುವುದು.
13 ಫೆಬ್ರುವರಿ 2026, 18:30 IST
ತುಲಾ
ಸಂಸ್ಥೆಯಿಂದ ತರಬೇತಿ ಪಡೆದುಕೊಳ್ಳುವ ಅವಕಾಶಗಳು ಎದುರಾದಲ್ಲಿ ಸದುಪಯೋಗ ಪಡಿಸಿಕೊಳ್ಳಿ. ಕೆಲಸದಲ್ಲಿದ್ದ ಸಣ್ಣ ಪುಟ್ಟ ತೊಡಕು ನಿವಾರಿಸಿಕೊಳ್ಳುವುದನ್ನು ಅಭ್ಯಾಸ ಮಾಡಿ.
13 ಫೆಬ್ರುವರಿ 2026, 18:30 IST
ವೃಶ್ಚಿಕ
ಮಕ್ಕಳು ಜೀವನದಲ್ಲಿ ಒಂದು ಉತ್ತಮ ಹಂತವನ್ನು ತಲುಪಿರುವುದನ್ನು ಯೋಚಿಸಿಕೊಂಡು ನೆಮ್ಮದಿ ಹಾಗೂ ಸಂತಸ ಪಡುವಂತಾಗುವುದು. ಉತ್ತಮ ಅವಕಾಶಗಳು ಎದುರಾಗಲಿವೆ.
13 ಫೆಬ್ರುವರಿ 2026, 18:30 IST
ಧನು
ಕಾರ್ಖಾನೆಯೊಂದನ್ನು ಗುತ್ತಿಗೆ ಆಧಾರದಲ್ಲಿ ಪಡೆದುಕೊಳ್ಳುವ ಅವಕಾಶಗಳು ನಂಬಿಕಸ್ಥ ಸ್ನೇಹಿತನ ಸಹಾಯದಿಂದ ನಡೆಸಬಹುದು. ವ್ಯಾಪಾರ, ವ್ಯವಹಾರಗಳಲ್ಲಿ ಪೈಪೋಟಿ ಎದುರಾಗಲಿದೆ.
13 ಫೆಬ್ರುವರಿ 2026, 18:30 IST
ಮಕರ
ಮನಸ್ಸಿನ ದುಗುಡಗಳು ಕಡಿಮೆಯಾಗಿ ಸಹಾಯ ಮಾಡಿದ ಸ್ನೇಹಿತರ ಪಾತ್ರವೇ ಜೀವನದಲ್ಲಿ ಮುಖ್ಯ ಎನಿಸಲಿದೆ. ಬೆಳ್ಳಿ ವಸ್ತುಗಳ ಮಾರಾಟ ಮಾಡುವವರು ಆದಾಯವನ್ನು ಗಳಿಸುವಿರಿ.
13 ಫೆಬ್ರುವರಿ 2026, 18:30 IST
ಕುಂಭ
ಜವಾಬ್ದಾರಿಯುತ ಊರಿನ ಸಾರ್ವಜನಿಕ ಕಾರ್ಯಗಳು ಮುಂದಾಳ ತ್ವದಲ್ಲಿ ನಡೆಯಲಿದೆ. ವಾಣಿಜ್ಯ ಬೆಳೆಗಳನ್ನು ದಾಸ್ತಾನು ಮಾಡಿಕೊಳ್ಳುವ ಯೋಚನೆ ಸರಿಯಾಗಿದೆ.
13 ಫೆಬ್ರುವರಿ 2026, 18:30 IST
ಮೀನ
ಆಲೋಚನೆಗಳು ಕಾರ್ಯರೂಪಕ್ಕೆ ಬರಲು ಸಾಧ್ಯವಾಗದೇ ಇರಬಹುದು. ಆಹಾರದಲ್ಲಿ ಎಣ್ಣೆಯ ಪದಾರ್ಥ ಮತ್ತು ಖಾರದ ಪದಾರ್ಥಗಳನ್ನು ಕಡಿಮೆ ಮಾಡಿ. ಗ್ಲಾಸ್ ಗಳಿಂದ ಗಾಯ ಆಗಬಹುದು.
13 ಫೆಬ್ರುವರಿ 2026, 18:30 IST