ನವದೆಹಲಿ (ಪಿಟಿಐ): ಭಾರತದ ದಿಗ್ಗಜ ಪಿಸ್ತೂಲ್ ಶೂಟರ್ ಅಮನ್ಪ್ರೀತ್ ಸಿಂಗ್ ಅವರು ಶುಕ್ರವಾರ ಮುಕ್ತಾಯಗೊಂಡ ಏಷ್ಯನ್ ಶೂಟಿಂಗ್ ಚಾಂಪಿಯನ್ಷಿಪ್ನ ಪುರುಷರ 25 ಮೀ. ಸೆಂಟರ್ ಫೈರ್ ಸ್ಪರ್ಧೆಯಲ್ಲಿ ಸ್ವರ್ಣ ಗೆದ್ದು ಬೀಗಿದರು. ಒಲಿಂಪಿಯನ್ ಗುರುಪ್ರೀತ್ ಸಿಂಗ್ ಹಾಗೂ ಅಂಕುರ್ ಗೋಯಲ್ ಕ್ರಮವಾಗಿ ಬೆಳ್ಳಿ ಮತ್ತು ಕಂಚು ಜಯಿಸಿದರು.

ಆತಿಥೇಯ ಭಾರತವು ಸೀನಿಯರ್ ವಿಭಾಗದಲ್ಲಿ ಒಟ್ಟು 33 ಪದಕಗಳನ್ನು (13 ಚಿನ್ನ, 11 ಬೆಳ್ಳಿ, 9 ಕಂಚು) ಜಯಿಸಿ, ಪದಕಪಟ್ಟಿಯಲ್ಲಿ ಅಗ್ರಸ್ಥಾನಿಯಾಯಿತು. ಜೂನಿಯರ್ ವಿಭಾಗದಲ್ಲಿ ಆತಿಥೇಯ ಶೂಟರ್ಗಳು ಒಟ್ಟು 61 ಪದಕಗಳಿಗೆ (38 ಚಿನ್ನ, 12 ಬೆಳ್ಳಿ, 11 ಕಂಚು) ಗುರಿಯಿಟ್ಟರು.

38 ವರ್ಷ ವಯಸ್ಸಿನ ಅಮನ್ಪ್ರೀತ್ ಅವರು ಫೈನಲ್ ಸುತ್ತಿನಲ್ಲಿ 589 ಅಂಕ ಕಲೆಹಾಕಿದರು. ಗುರ್ಪ್ರೀತ್ ಹಾಗೂ ಅಂಕುಲ್ ಕ್ರಮವಾಗಿ 584 ಮತ್ತು 570 ಅಂಕ ಪಡೆದರು. ಅದರೊಂದಿಗೆ ಭಾರತದ ಶೂಟರ್ಗಳು ಎಲ್ಲ ಮೂರು ಪದಕ ಗೆದ್ದು ಪಾರಮ್ಯ ಮೆರೆದರು.

ಟೀಮ್ ವಿಭಾಗದಲ್ಲಿಯೂ ಆತಿಥೇಯ ಶೂಟರ್ಗಳು ಸ್ವರ್ಣ (1,743) ತಮ್ಮದಾಗಿಸಿಕೊಂಡರು. ವಿಯೆಟ್ನಾಂ (1,671) ರಜತ ಪದಕ ಗೆದ್ದುಕೊಂಡಿತು.

ಪರಿಣತ ಶೂಟರ್ ಸಿಫ್ತ್ ಕೌರ್ ಸಮ್ರಾ ಅವರು ಮಹಿಳೆಯರ 50 ಮೀ. ರೈಫಲ್ ಪ್ರೋನ್ ಸ್ಪರ್ಧೆಯಲ್ಲಿ ಸ್ಪಲ್ಪದರಲ್ಲಿಯೇ ಚಿನ್ನ ತಪ್ಪಿಸಿಕೊಂಡರು. ತೀವ್ರ ಪೈಪೋಟಿಯಿದ್ದ ಫೈನಲ್ ಸುತ್ತಿನಲ್ಲಿ ಸಮ್ರಾ 623.2 ಅಂಕ ಸಂಪಾದಿಸಿದರು. ಕಜಾಕಸ್ತಾನದ ಯೆಲಿಝವೆಟಾ ಬೆಝ್ರುಕೊವಾ (623.4) ಸ್ವರ್ಣಕ್ಕೆ ಕೊರಳೊಡ್ಡಿದರೆ, ತೇಜಸ್ವಿನಿ ಸಾವಂತ್ (621) ಕಂಚು ತಮ್ಮದಾಗಿಸಿಕೊಂಡರು.

ಸಮ್ರಾ, ತೇಜಸ್ವಿಸಿ ಹಾಗೂ ಮಾನಿನಿ ಕೌಶಿಕ್ ಅವರಿಗೆ (ಒಟ್ಟು 1862.9 ಅಂಕ) ಟೀಮ್ ವಿಭಾಗದಲ್ಲಿ ಸ್ವರ್ಣ ಒಲಿಯಿತು. ಕಜಾಕಸ್ತಾನ (1862.8) ಬೆಳ್ಳಿ ಪದಕ ಗೆದ್ದುಕೊಂಡಿತು. ಜೂನಿಯರ್ ಮಹಿಳೆಯರ ವಿಭಾಗದಲ್ಲಿ ತೆಲಂಗಾಣದ ಧಾಳವಿಕಾ ದೇವಿ (614.1) ಅವರು ಕಂಚು ಗೆದ್ದರು. ಕಜಾಕಸ್ತಾನದ ಟೊಮಿರಿಸ್ ಅಮನೊವಾ (620.1) ಹಾಗೂ ಡಾರ್ಯ ಪೊನೊಮರೆಂಕೊ (615.4) ಅವರು ಕ್ರಮವಾಗಿ ಮೊದಲೆರಡು ಸ್ಥಾನ ಪಡೆದರು.

ಜೂನಿಯರ್ ಪುರುಷರ 25 ಮೀ. ಪಿಸ್ತೂಲ್ ಸ್ಪರ್ಧೆಯಲ್ಲಿ ಭಾರತದ ಶೂಟರ್ಗಳು ಕ್ಲೀನ್ಸ್ವೀಪ್ ಸಾಧಿಸಿತು. ಸೂರಜ್ ಶರ್ಮಾ (585 ಅಂಕ), ನೆಲವಲ್ಲಿ ಮುಕೇಶ್ (582) ಹಾಗೂ ಸಾಹಿಲ್ ಚೌಧರಿ ಕ್ರಮವಾಗಿ ಚಿನ್ನ, ಬೆಳ್ಳಿ ಹಾಗೂ ಕಂಚು ಜಯಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.