ಕೊಲೊಂಬೊ: ಸೂರ್ಯಕುಮಾರ್ ಯಾದವ್ ನಾಯಕತ್ವದ ಭಾರತ ತಂಡವು ತನ್ನ ‘ಬದ್ಧ ಎದುರಾಳಿ’ ಪಾಕಿಸ್ತಾನ ತಂಡದ ಎದುರು ನಿರೀಕ್ಷೆಗಿಂತಲೂ ಸುಲಭವಾಗಿ ಜಯಿಸಿತು. ಅದರೊಂದಿಗೆ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯ ಸೂಪರ್ 8ರ ಹಂತಕ್ಕೆ ಲಗ್ಗೆಯಿಟ್ಟಿತು.

ಪ್ರೇಮದಾಸ ಕ್ರೀಡಾಂಗಣದಲ್ಲಿ ಟಾಸ್ ಗೆದ್ದ ಪಾಕಿಸ್ತಾನ ತಂಡದ ನಾಯಕ ಸಲ್ಮಾನ್ ಅಲಿ ಆಘಾ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡರು. ಇಶಾನ್ ಕಿಶನ್ (77; 40ಎ, 4X10, 6X3) ಅವರ ದಿಟ್ಟ ಬ್ಯಾಟಿಂಗ್ನಿಂದಾಗಿ
ಭಾರತ ತಂಡವು 20 ಓವರ್ಗಳಲ್ಲಿ 7 ವಿಕೆಟ್ಗಳಿಗೆ 175 ರನ್ಗಳ ಸ್ಪರ್ಧಾತ್ಮಕ ಮೊತ್ತವನ್ನು ಪೇರಿಸಿತು. ಪಾಕಿಸ್ತಾನ ತಂಡದ ಆರು ಸ್ಪಿನ್ನರ್ಗಳು ಒಟ್ಟು 18 ಓವರ್ ಬೌಲಿಂಗ್ ಮಾಡಿದರು.

ಆದರೆ ಅದೇ ಪಿಚ್ನಲ್ಲಿ ಭಾರತದ ವೇಗದ ಬೌಲರ್ಗಳೂ ತಮ್ಮ ಸಾಮರ್ಥ್ಯ ಮೆರೆದರು. ಹಾರ್ದಿಕ್ ಪಾಂಡ್ಯ (16ಕ್ಕೆ2) ಮತ್ತು ಜಸ್ಪ್ರೀತ್ ಬೂಮ್ರಾ (17ಕ್ಕೆ2) ಪಾಕ್ ತಂಡಕ್ಕೆ ಪವರ್ ಪ್ಲೇ ಹಂತದಲ್ಲಿಯೇ ಬಲವಾದ ಪೆಟ್ಟುಕೊಟ್ಟರು. ಇನ್ನುಳಿದ ಕಾರ್ಯವನ್ನು ಸ್ಪಿನ್ನರ್ಗಳು ಅಚ್ಚುಕಟ್ಟಾಗಿ ನೆರವೇರಿಸಿದರು. ಅದರಿಂದಾಗಿ ಪಾಕ್ ತಂಡವು 18 ಓವರ್ಗಳಲ್ಲಿ 114 ರನ್ ಗಳಿಸಿ ಎಲ್ಲ ವಿಕೆಟ್ ಕಳೆದುಕೊಂಡಿತು. ಭಾರತ ತಂಡವು 61 ರನ್ಗಳಿಂದ ಜಯಭೇರಿ ಬಾರಿಸಿತು. ಸೂರ್ಯ ಮಾಡಿದ ಬೌಲರ್ಗಳ ನಿಯೋಜನೆಯ ತಂತ್ರಗಾರಿಕೆಯು ಫಲ ನೀಡಿತು.

ಪಾಕ್ ತಂಡದ ವಿಕೆಟ್ಕೀಪರ್–ಬ್ಯಾಟರ್ ಉಸ್ಮಾನ್ ಖಾನ್ (44; 34ಎ) ಹಾಗೂ ಕೊನೆಯಲ್ಲಿ ಶಹೀನ್ ಶಾ ಅಫ್ರಿದಿ (ಔಟಾಗದೇ 23) ಬಿಟ್ಟರೆ ಉಳಿದವರು ಆತ್ಮವಿಶ್ವಾಸದ
ಆಟವಾಡಲಿಲ್ಲ. ಇನಿಂಗ್ಸ್ನ ಮೊದಲ ಓವರ್ ಬೌಲಿಂಗ್ ಮಾಡಿದ ಹಾರ್ದಿಕ್ ಪಾಂಡ್ಯ ಅವರು ಸಾಹೀಬ್ಝಾದಾ ಫರ್ಹಾನ್ ವಿಕೆಟ್ ಗಳಿಸಿದರು. ಆ ಓವರ್ ಮೇಡನ್ ಕೂಡ ಮಾಡಿದರು.

ನಂತರದ ಓವರ್ನಲ್ಲಿ ಜಸ್ಪ್ರೀತ್ ಬೂಮ್ರಾ ಹಾಕಿದ ಮೊದಲ ಎಸೆತವನ್ನು ಸಯೀಮ್ ಅಯೂಬ್ ಸಿಕ್ಸರ್ ಎತ್ತಿದರು. ನಂತರದ ಎಸೆತದಲ್ಲಿ ಬೂಮ್ರಾ ಹಾಕಿದ ನಿಖರ ಎಸೆತಕ್ಕೆ ಎಲ್ಬಿಡಬ್ಲ್ಯು ಬಲೆಗೆ ಬಿದ್ದರು. ನಾಯಕ ಸಲ್ಮಾನ್ ಆಘಾ ಕೂಡ ಬೂಮ್ರಾ ಬೌಲಿಂಗ್ನಲ್ಲಿ ಹಾರ್ದಿಕ್ಗೆ ಕ್ಯಾಚ್ ಕೊಟ್ಟರು. ಅಕ್ಷರ್ ಪಟೇಲ್ ತಮ್ಮ ಸ್ಪೆಲ್ನ ಮೊದಲ ಎಸೆತದಲ್ಲಿಯೇ ಬಾಬರ್ ಆಜಂ ಸ್ಟಂಪ್ ಉರುಳಿಸಿದರು. ಟೂರ್ನಿಯಲ್ಲಿ ಇದೇ ಮೊದಲ ಅವಕಾಶ ಪಡೆದ ಕುಲದೀಪ್ ಯಾದವ್ ಕೂಡ ಕೈಚಳಕ ಮೆರೆದರು. ವರುಣ್ ಕೂಡ ಸಾಮರ್ಥ್ಯ ತೋರಿದರು.

ಇಶಾನ್ ವೈಭವ: ಸ್ಪಿನ್ನರ್ಗಳಿಗೆ ನೆರವು ನೀಡುವಂತಿದ್ದ ಪಿಚ್ನಲ್ಲಿ ಮೊದಲ ಓವರ್ ಹಾಕಲು ತಾವೇ ಕಣಕ್ಕಿಳಿದ ಆಘಾ ಯಶಸ್ವಿಯೂ ಆದರು. ಹೊಟ್ಟೆನೋವಿನಿಂದ ಚೇತರಿಸಿಕೊಂಡು ಬಂದಿದ್ದ ಅಭಿಷೇಕ್ ಶರ್ಮಾ ಅವರ ವಿಕೆಟ್ ಕಬಳಿಸಿದರು. ಶರ್ಮಾ ತಾವೆದುರಿಸಿದ ನಾಲ್ಕನೇ ಎಸೆತದಲ್ಲಿ ಸೊನ್ನೆಯೊಂದಿಗೆ ಮರಳಿದರು.

ಆದರೆ ಇಶಾನ್ ಕಿಶನ್ ಮಾತ್ರ ಎದೆಗುಂದಲಿಲ್ಲ. ವೇಗಿ ಶಹೀನ್ ಆಫ್ರಿದಿ ಅವರಿಗೆ ಸಿಕ್ಸರ್ ಮೂಲಕ ಸ್ವಾಗತಿಸಿದರು. ಅವರ ಒಂದೇ ಓವರ್ನಲ್ಲಿ 15 ರನ್ ಸೂರೆ ಮಾಡಿದರು.

ಸ್ಪಿನ್ ಬೌಲರ್ಗಳನ್ನೂ ದಂಡಿಸಿದರು. ‘ಪಾಝ್ ಬೌಲರ್’ ಉಸ್ಮಾನ್ ತಾರೀಖ್ ಸೇರಿದಂತೆ ಎಲ್ಲರಿಗೂ ಬಿಸಿ ಮುಟ್ಟಿಸಿದರು. ಇನ್ನೊಂದು ಬದಿಯಲ್ಲಿ ತಿಲಕ್ ವರ್ಮಾ (25; 24ಎ) ಗಟ್ಟಿಯಾಗಿ ಬೇರೂರಲು ಸ್ವಲ್ಪ ಕಷ್ಟಪಟ್ಟರು. ಅವರು ಸಯೀಮ್ ಅಯೂಬ್ಗೆ ಎಲ್ಬಿಡಬ್ಲ್ಯು ಆದರು.

ಕ್ರೀಡಾಂಗಣದ 85 ಮೀಟರ್ ಬೌಂಡರಿ ಗೆರೆಯನ್ನು ದಾಟಿಸುವಲ್ಲಿ ಇಶಾನ್ ಯಶಸ್ವಿಯಾದರು. ಸೂರ್ಯ ಕೂಡ ಸಿಕ್ಸರ್ ಹೊಡೆಯುವ ಗೋಜಿಗೆ ಹೋಗದೇ ಬೌಂಡರಿ ಗಳಿಸುವತ್ತ ಹೆಚ್ಚು ಗಮನ ನೀಡಿದರು. ಶನಿವಾರ ನೆಟ್ಸ್ನಲ್ಲಿ ಉಸ್ಮಾನ್ ತಾರೀಖ್ ಅವರ ಶೈಲಿಯಲ್ಲಿಯೇ ಬೌಲಿಂಗ್ ಮಾಡಿ ತಮ್ಮ ಸಹ ಬ್ಯಾಟರ್ಗಳಿಗೆ ಅಭ್ಯಾಸ ಮಾಡಿಸಿದ್ದರು ಸೂರ್ಯ. ಪಂದ್ಯದಲ್ಲಿ ಉಸ್ಮಾನ್ ಅವರಿಗೂ ಬಿಸಿ ಮುಟ್ಟಿಸಿದರು. ಆದರೆ ಉಸ್ಮಾನ್ ಬೌಲಿಂಗ್ನಲ್ಲಿಯೇ ಔಟಾದರು. ಶಿವಂ ದುಬೆ ಮತ್ತು ರಿಂಕು ಸಿಂಗ್ ಕೊನೆಯ ಹಂತದಲ್ಲಿ ಒಂದಿಷ್ಟು ಆಕರ್ಷಕ ಬ್ಯಾಟಿಂಗ್ ಮೂಲಕ ಉತ್ತಮ ಮೊತ್ತ ಗಳಿಸಲು ಕಾರಣರಾದರು.

ಪಾಕಿಸ್ತಾನ ತಂಡವು ಸೂಪರ್ 8 ಹಂತಕ್ಕೆ ತಲುಪಲು ಇದೇ 18ರಂದು ಕೊಲಂಬೊದಲ್ಲಿ ನಡೆಯುವ ನಮೀಬಿಯಾ ವಿರುದ್ಧದ ಪಂದ್ಯವನ್ನು ಗೆಲ್ಲಲೇಬೇಕಾದ ಒತ್ತಡದಲ್ಲಿದೆ.

ಹಸ್ತಲಾಘವ ಮಾಡದ ಸೂರ್ಯ

ಕೊಲಂಬೊ (ಪಿಟಿಐ): ಪಂದ್ಯದ ಟಾಸ್ ಸಂದರ್ಭದಲ್ಲಿ ಭಾರತ ತಂಡದ ನಾಯಕ ಸೂರ್ಯಕುಮಾರ್ ಯಾದವ್ ಅವರು ಪಾಕಿಸ್ತಾನ ತಂಡದ ನಾಯಕ ಸಲ್ಮಾನ್ಅಲಿ ಆಘಾ ಅವರು ಹಸ್ತಲಾಘವ ಮಾಡಲಿಲ್ಲ.

‘ಹಸ್ತಲಾಘವ ಮಾಡದಿರುವ ನೀತಿಯನ್ನು ಇಲ್ಲಿಯೂ ಮುಂದುವರಿಸಿದ್ದೇವೆ’ ಎಂದು ಬಿಸಿಸಿಐ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಉಭಯ ತಂಡಗಳ ಆಟಗಾರರು ಮತ್ತು ನೆರವು ಸಿಬ್ಬಂದಿ ಕೂಡ ಪರಸ್ಪರ ಕೈಕುಲುಕಲಿಲ್ಲ. ಹೋದ ವರ್ಷ ಏಷ್ಯಾ ಕಪ್ ಟೂರ್ನಿಯಲ್ಲಿಯೂ ಪಾಕ್ ತಂಡದ ಆಟಗಾರರಿಗೆ ಭಾರತದ ಆಟಗಾರರು ಕೈಕುಲುಕಿರಲಿಲ್ಲ. ಟಿ20 ವಿಶ್ವಕಪ್ ಟೂರ್ನಿಯಲ್ಲಿಯೂ ಆ ಧೋರಣೆ ಮುಂದುವರಿಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.