ಭಾನುವಾರ, 15 ಫೆಬ್ರುವರಿ 2026
×
ADVERTISEMENT
ದಿನ
ವಾರ
ಮಾಸ
ವಾರ್ಷಿಕ
15/02/2026 - 21/02/2026
ವಾರ ಭವಿಷ್ಯ | 15-02-2026ರಿಂದ 21-02-2026 ರವರೆಗೆ: ಆದಾಯವು ಕಡಿಮೆ ಇರುತ್ತದೆ
Published 15 ಫೆಬ್ರುವರಿ 2026, 0:17 IST
ಎಂ.ಎನ್.ಲಕ್ಷ್ಮೀನರಸಿಂಹ ಸ್ವಾಮಿ
author
ಜ್ಯೋತಿಷ್ಯ ವಿಶಾರದ, ಮಾದಾಪುರ ಸಂಪರ್ಕ ಸಂಖ್ಯೆ: 8197304680
ಮೇಷ
ವಾರದ ಆರಂಭದಲ್ಲಿ ಸ್ವಲ್ಪ ಸಿಟ್ಟು, ಸೆಡವುಗಳಿರುತ್ತವೆ. ಆದಾಯವು ಕಡಿಮೆ ಇದ್ದರೂ ಕೂಡ ತೊಂದರೆ ಇರುವುದಿಲ್ಲ. ಹಿರಿಯರ ಸಹಕಾರ ನಿಧಾನವಾಗಿ ದೊರೆಯುತ್ತದೆ. ಕೃಷಿ ವ್ಯವಹಾರಗಳಲ್ಲಿ ಆದಾಯ ಮಂದಗತಿಯಲ್ಲಿರುತ್ತದೆ. ವಿದ್ಯಾರ್ಥಿಗಳಿಗೆ ಹೆಚ್ಚಿನ ಯಶಸ್ಸು ಸಿಗುವುದಿಲ್ಲ. ಕೆಲವರಿಗೆ ಕಣ್ಣಿನ ತೊಂದರೆಗಳು ಕಾಣಿಸಬಹುದು. ಸಂಗಾತಿಯಿಂದ ನಿಮಗೆ ಹೆಚ್ಚು ಲಾಭವಿರುತ್ತದೆ. ಸರ್ಕಾರಿ ಕೆಲಸ ಕಾರ್ಯಗಳಲ್ಲಿ ಮುನ್ನಡೆ ಇರುತ್ತದೆ.
ವೃಷಭ
ದೊಡ್ಡ ಮನುಷ್ಯರಂತೆ ಕಾಣಿಸಿಕೊಳ್ಳಲು ಪ್ರಯತ್ನಪಡುವಿರಿ. ಆದಾಯವು ನಿಮ್ಮ ನಿರೀಕ್ಷೆಯನ್ನು ಮೀರಿ ಇರುತ್ತದೆ. ಬಂಧುಗಳ ನಡುವೆ ಅಸಹನೆ ತಲೆದೋರಬಹುದು. ಕೃಷಿಭೂಮಿಯಲ್ಲಿ ಅಭಿವೃದ್ಧಿಯನ್ನು ಕಾಣಬಹುದು. ವಿದ್ಯಾರ್ಥಿಗಳಿಗೆ ಮಧ್ಯಮ ಫಲಿತಾಂಶವಿರುತ್ತದೆ. ವೃತ್ತಿ ಸ್ಥಳದಲ್ಲಿ ಮೇಲಾಧಿಕಾರಿಗಳು ನಿಮ್ಮನ್ನು ತರಾಟೆಗೆ ತೆಗೆದುಕೊಳ್ಳಬಹುದು. ಮೂತ್ರ ಸಂಬಂಧಿ ದೋಷಗಳು ಸ್ವಲ್ಪ ಕಾಡಬಹುದು. ವ್ಯವಹಾರಗಳಲ್ಲಿ ಮುನ್ನಡೆ ಇರುತ್ತದೆ.
ಮಿಥುನ
ಸಮಾಜದಿಂದ ಗೌರವ ಸಿಗುವ ಸಾಧ್ಯತೆಗಳಿವೆ. ಆದಾಯ ಕಡಿಮೆ ಇದ್ದರೂ ತೊಂದರೆ ಇರುವುದಿಲ್ಲ. ಬಂಧುಗಳು ನಿಮ್ಮ ಒಳ್ಳೆಯ ಕೆಲಸಗಳಿಗೆ ಮಾತ್ರ ಸಹಕಾರ ನೀಡುತ್ತಾರೆ. ವಿದ್ಯಾರ್ಥಿಗಳಿಗೆ ಉತ್ತಮ ಫಲಿತಾಂಶ ಇರುತ್ತದೆ. ಆಯುಧಗಳನ್ನು ಉಪಯೋಗಿಸುವಾಗ ಎಚ್ಚರವಿರಲಿ. ಸಂಗಾತಿಯಿಂದ ನಿಮಗೆ ಪೂರ್ಣ ಸಹಕಾರ ದೊರೆಯುತ್ತದೆ. ವಿದೇಶಿ ವ್ಯವಹಾರ ಮಾಡುವವರಿಗೆ ಅಭಿವೃದ್ಧಿ ಇರುತ್ತದೆ.
ಕರ್ಕಾಟಕ
ಆಲಸಿತನ ಮೈದುಂಬಿರುತ್ತದೆ. ಆದಾಯವು ಕಡಿಮೆ ಇರುತ್ತದೆ. ಧಾರ್ಮಿಕ ಕಾರ್ಯಗಳನ್ನು ಮಾಡುವವರಿಗೆ ಆದಾಯ ಹೆಚ್ಚುತ್ತದೆ. ಸಂಗಾತಿ ಆದಾಯ ಕಡಿಮೆಯಾಗಬಹುದು. ಸಂಗಾತಿಯು ನಿಮ್ಮ ಮೇಲೆ ಕೋಪ ಮಾಡಿಕೊಳ್ಳುವ ಸಂದರ್ಭವಿದೆ. ವಿದ್ಯಾರ್ಥಿಗಳಿಗೆ ಸ್ವಲ್ಪಮಟ್ಟಿನ ಅನುಕೂಲವಿರುತ್ತದೆ. ಪಿತ್ತ ದೋಷಗಳು ನಿಮ್ಮನ್ನು ಕಾಡಬಹುದು. ಸರ್ಕಾರಿ ಕೆಲಸ ಕಾರ್ಯಗಳಲ್ಲಿ ಪ್ರಗತಿ ಇರುವುದಿಲ್ಲ. ವಿದೇಶಿ ವ್ಯವಹಾರಗಳಿಂದ ನಿರೀಕ್ಷಿತ ಲಾಭ ಬರುತ್ತದೆ.
ಸಿಂಹ
ಏನೋ ಕಳೆದುಕೊಂಡಂತೆ ಭಾಸವಾಗುತ್ತಿರುತ್ತದೆ. ಆದಾಯವು ಕಡಿಮೆ ಇರುತ್ತದೆ. ಸಂಗಾತಿಯಿಂದ ಆರ್ಥಿಕ ಸಹಕಾರ ಸಿಗುತ್ತದೆ. ಹಿರಿಯ ಮಹಿಳೆಯರಿಂದ ನಿಮ್ಮ ಕೆಲಸ ಕಾರ್ಯಗಳಿಗೆ ಸಹಾಯ ಸಿಗುತ್ತದೆ. ಭೂಮಿಯ ವ್ಯವಹಾರಗಳಲ್ಲಿ ಲಾಭ ತರುವುದಿಲ್ಲ. ಹೈನುಗಾರಿಕೆಯಲ್ಲಿ ಅಭಿವೃದ್ಧಿ ಇರುವುದಿಲ್ಲ. ಶೀತ ಸಂಬಂಧಿ ದೋಷಗಳು ಕೆಲವರನ್ನು ಕಾಡುತ್ತವೆ. ವಿದೇಶದಲ್ಲಿರುವ ನಿಮ್ಮ ಸಂಗಾತಿಯನ್ನು ಹೋಗಿ ಸೇರಿಕೊಳ್ಳಲು ಈಗ ಅನುಕೂಲಕರ ಸಮಯ. ಪುಸ್ತಕ ವ್ಯಾಪಾರಿಗಳಿಗೆ ಹೆಚ್ಚು ಲಾಭವಿರುತ್ತದೆ.
ಕನ್ಯಾ
ಚುರುಕಾಗಿ ಕೆಲಸ ಮಾಡಲು ಪ್ರಯತ್ನ ಪಡುವಿರಿ. ಆದಾಯವು ಸಾಮಾನ್ಯವಾಗಿರುತ್ತದೆ. ಬಂಧುಗಳ ನಡುವೆ ಹೊಂದಾಣಿಕೆಯನ್ನು ಮಾಡಿಕೊಳ್ಳಲು ಪ್ರಯತ್ನ ಪಡುವಿರಿ. ಆಸ್ತಿ ಮಾರಾಟ ಮಾಡುವ ಮಧ್ಯವರ್ತಿಗಳಿಗೆ ಈಗ ಆದಾಯ ಹೆಚ್ಚುತ್ತದೆ. ವಿದ್ಯಾರ್ಥಿಗಳಿಗೆ ಮಧ್ಯಮಗತಿಯ ಫಲಿತಾಂಶವಿರುತ್ತದೆ. ಕೃಷಿ ವಿದ್ಯಾರ್ಥಿಗಳಿಗೆ ಉತ್ತಮ ಫಲಿತಾಂಶ ಪಡೆಯುವ ಯೋಗವಿದೆ. ವಿದೇಶಿ ಕಂಪನಿಯಲ್ಲಿ ಹೂಡಿಕೆ ಮಾಡುವುದಕ್ಕೆ ಮೊದಲು ಸರಿಯಾಗಿ ಆಲೋಚನೆ ಮಾಡಿ. ಕೆಲವರಿಗೆ ಚರ್ಮ ಸಂಬಂಧಿ ದೋಷಗಳು ಕಾಣಿಸಬಹುದು.
ತುಲಾ
ಆದಾಯವು ಮಧ್ಯಮಗತಿಯಲ್ಲಿರುತ್ತದೆ. ಆಸ್ತಿ ಮಾರಾಟ ಮಾಡುವವರಿಗೆ ಸಾಕಷ್ಟು ಲಾಭವಿರುತ್ತದೆ. ವಿದ್ಯಾರ್ಥಿಗಳಿಗೆ ನಿರೀಕ್ಷಿತ ಫಲಿತಾಂಶ ಪಡೆಯುವ ಯೋಗವಿದೆ. ಕೆಲವರಿಗೆ ಪಾದದ ನೋವು ಕಾಣಿಸಬಹುದು. ಆಭರಣ ಮಾರಾಟಗಾರರಿಗೆ ಸ್ವಲ್ಪ ಹಿನ್ನಡೆಯಾಗಬಹುದು. ಹಿರಿಯರ ಆಸ್ತಿಗಾಗಿ ಸಾಕಷ್ಟು ಪ್ರಯತ್ನ ಪಡುವಿರಿ. ವೃತ್ತಿಯಲ್ಲಿ ಅಂತಹ ಪ್ರಗತಿ ಇರುವುದಿಲ್ಲ. ಕೃಷಿ ಸಂಶೋಧಕರಿಗೆ ಅಭಿವೃದ್ದಿ ಇರುತ್ತದೆ. ವ್ಯಾಪಾರ, ವ್ಯವಹಾರಗಳಲ್ಲಿ ಎಚ್ಚರವಿರಲಿ.
ವೃಶ್ಚಿಕ
ಯೋಜನಾ ಬದ್ಧವಾಗಿ ಕೆಲಸ ಮಾಡಲು ಪ್ರಯತ್ನಪಡುವಿರಿ. ಆದಾಯವು ಮಧ್ಯಮಗತಿಯಲ್ಲಿರುತ್ತದೆ. ವಿದೇಶದಲ್ಲಿರುವವರು ಈಗ ಆಸ್ತಿ ಮಾಡಿಕೊಳ್ಳಬಹುದು. ಸರ್ಕಾರಿ ಕೆಲಸ ಕಾರ್ಯಗಳಲ್ಲಿ ಮುನ್ನಡೆಯನ್ನು ಕಾಣಬಹುದು. ಗಣಿಗಾರಿಕೆ ಮಾಡುವವರಿಗೆ ಅಭಿವೃದ್ಧಿ ಇರುತ್ತದೆ. ವಿದ್ಯಾರ್ಥಿಗಳಿಗೆ ನಿರೀಕ್ಷಿತ ಫಲಿತಾಂಶ ಇರುವುದಿಲ್ಲ. ಹರಿತವಾದ ಆಯುಧಗಳನ್ನ ಉಪಯೋಗಿಸುವಾಗ ಎಚ್ಚರವಿರಲಿ. ವೃತ್ತಿಯ ಸ್ಥಳದಲ್ಲಿ ಹಿತಶತ್ರುಗಳಿರುತ್ತಾರೆ.
ಧನು
ಗಂಭೀರ ನಡವಳಿಕೆಯನ್ನು ನಿಮ್ಮಲ್ಲಿ ಕಾಣಬಹುದು. ಆದಾಯವು ಮಧ್ಯಮಗತಿಯಲ್ಲಿರುತ್ತದೆ. ಕೃಷಿಯಿಂದ ಹೆಚ್ಚು ಆದಾಯವಿರುತ್ತದೆ. ಹೈನುಗಾರಿಕೆಯಿಂದ ಆದಾಯ ಹೆಚ್ಚುತ್ತದೆ. ಬಂಧು–ಮಿತ್ರರು ಸಹಾಯವನ್ನು ಅಪೇಕ್ಷಿಸಿ ನಿಮ್ಮತ್ತ ಬರುವರು. ಕೃಷಿ ಉತ್ಪನ್ನಗಳನ್ನು ಮಾರಾಟ ಮಾಡುವವರಿಗೆ ಲಾಭವಿದೆ. ಆಸ್ತಿ ಮಾಡುವ ವಿಚಾರದಲ್ಲಿ ಅತಿ ಆತುರ ಖಂಡಿತ ಬೇಡ. ವಿದ್ಯಾರ್ಥಿಗಳಿಗೆ ಮಧ್ಯಮ ಫಲಿತಾಂಶವಿರುತ್ತದೆ. ಹಿರಿಯರ ಆರೋಗ್ಯದಲ್ಲಿ ಸ್ವಲ್ಪ ಏರುಪೇರಾಗಬಹುದು.
ಮಕರ
ಅತಿ ಉತ್ಸಾಹದೊಂದಿಗೆ ಮುನ್ನುಗ್ಗುವಿರಿ. ವಿವೇಚನೆಯಿಂದ ಕೆಲಸ ಮಾಡುವಿರಿ. ಆದಾಯ ಉತ್ತಮವಾಗಿರುತ್ತದೆ. ವಾಗ್ಮಿಗಳಿಗೆ ಉತ್ತಮ ವೇದಿಕೆಗಳು ದೊರೆಯುತ್ತವೆ. ಕೃಷಿಭೂಮಿ ವ್ಯಾಪಾರ ಮಾಡುವವರಿಗೆ ಅತಿ ಹೆಚ್ಚು ಲಾಭವಿರುತ್ತದೆ. ಸಂಸಾರದಲ್ಲಿ ಈಗ ಸಂತೋಷವಿರುತ್ತದೆ. ಲಲಿತ ಕಲೆ ಅಭ್ಯಾಸ ಮಾಡುವವರಿಗೆ ಅಭಿವೃದ್ಧಿ ಇರುತ್ತದೆ. ವಿವಾಹ ಸಂಬಂಧದ ವಿಷಯದಲ್ಲಿ ಸ್ವಲ್ಪ ಎಚ್ಚರವಾಗಿರಿ. ವೃತ್ತಿಯಲ್ಲಿ ಆದಾಯ ಹೆಚ್ಚುವ ಸಾಧ್ಯತೆಗಳಿವೆ.
ಕುಂಭ
ವಾರದ ಆರಂಭದಲ್ಲಿ ಬಹಳ ಬಿರುಸಿನಿಂದ ಕೆಲಸ ಮಾಡುವಿರಿ. ಆದಾಯವು ಕಡಿಮೆ ಇರುತ್ತದೆ. ಮಾತನಾಡುವಾಗ ಬಹಳ ಎಚ್ಚರವಿರಲಿ. ನಿಮ್ಮೆಲ್ಲ ಕೆಲಸಗಳಿಗೆ ತಾಯಿಯ ಸಹಕಾರ ಸಿಗುತ್ತದೆ. ಆಸ್ತಿ ಕೊಳ್ಳಲು ಈಗ ಹಣದ ವ್ಯವಸ್ಥೆ ಮಾಡಿಕೊಳ್ಳುವಿರಿ. ವಿದ್ಯಾರ್ಥಿಗಳಿಗೆ ಉತ್ತಮ ಫಲಿತಾಂಶ ಪಡೆಯುವ ಯೋಗವಿದೆ. ಹೊಟ್ಟೆಯಲ್ಲಿ ನೋವು ಕಾಣಿಸಬಹುದು.
ಮೀನ
ವಾರದ ಆರಂಭದಲ್ಲಿ ಬಹಳ ಉದಾಸೀನತೆ ಇರುತ್ತದೆ. ಆದಾಯವು ಉತ್ತಮವಾಗಿರುತ್ತದೆ. ಸಂಗಾತಿ ಕಡೆಯುವರಿಂದ ನಿಮ್ಮ ಕೆಲಸಗಳಿಗೆ ಸಹಾಯ ದೊರೆಯಬಹುದು. ವಿದ್ಯಾರ್ಥಿಗಳಿಗೆ ಸ್ವಲ್ಪ ಕಷ್ಟಕರ ವಾತಾರವಣವಿರುತ್ತದೆ. ಹೊಟ್ಟೆಯಲ್ಲಿ ನೋವು ಕಾಣಿಸಬಹುದು. ಸಂಗಾತಿಯ ಖರ್ಚುಗಳು ಹೆಚ್ಚಾಗುವ ಸಂದರ್ಭವಿದೆ. ಕೆಲವು ವ್ಯವಹಾರಗಳು ಅನಿರೀಕ್ಷಿತ ತಿರುವಿನಲ್ಲಿ ನಿಲ್ಲಬಹುದು. ಹಿರಿಯರ ವ್ಯವಹಾರಗಳಲ್ಲಿ ಪಾಲು ದೊರೆತು, ಆದಾಯ ಬರುತ್ತದೆ. ಉದ್ಯೋಗದ ಸ್ಥಳದಲ್ಲಿ ಏಳಿಗೆಯನ್ನು ಕಾಣಬಹುದು.
ADVERTISEMENT
ADVERTISEMENT