ಸೂರಜ್‌ ಚಿತ್ರಕ್ಕೆ ರಾಜ್‌ ಮೊಮ್ಮಗಳು ನಾಯಕಿ

ಗುರುವಾರ , ಜೂನ್ 20, 2019
24 °C

ಸೂರಜ್‌ ಚಿತ್ರಕ್ಕೆ ರಾಜ್‌ ಮೊಮ್ಮಗಳು ನಾಯಕಿ

Published:
Updated:

ಕೈಯಲ್ಲಿ ‘ಮದುವೆಯ ಮಮತೆಯ ಕರೆಯೋಲೆ’ ಹಿಡಿದುಕೊಂಡು ಬೆಳ್ಳಿ ತೆರೆಗೆ ಬಂದವರು ನಟ ಸೂರಜ್‌ ಗೌಡ. ‘ಕಹಿ’ ಮತ್ತು ‘ಸಿಲಿಕಾನ್ ಸಿಟಿ’ ಚಿತ್ರಗಳಲ್ಲಿನ ಭಿನ್ನವಾದ ‍ಪಾತ್ರದ ಮೂಲಕ ಪ್ರೇಕ್ಷಕರ ಹೃದಯ ಗೆದ್ದರು. 

ತೆಲುಗಿನಲ್ಲಿ ಅವಕಾಶಗಳು ಹುಡುಕಿಕೊಂಡು ಬಂದರೂ ಕನ್ನಡದ ಮೇಲಿನ ಅಭಿಮಾನದಿಂದ ಅವುಗಳನ್ನು ಸೂರಜ್‌ ತಿರಸ್ಕರಿದ್ದು ಉಂಟು. ಸಿನಿಮಾ ಒಪ್ಪಿಕೊಳ್ಳುವಲ್ಲಿಯೂ ಅವರು ಸಾಕಷ್ಟು ಚ್ಯೂಸಿ. ಕನ್ನಡದಲ್ಲಿಯೇ ಅವಕಾಶಗಳು ಇರುವಾಗ ನಾನೇಕೆ ಪರಭಾಷೆಗೆ ಹೋಗಲಿ ಎಂದು ಕೂಲ್‌ ಆಗಿಯೇ ಪ್ರಶ್ನಿಸುತ್ತಾರೆ.

ಅಂದಹಾಗೆ ಸೂರಜ್‌ ಈಗ ಹೊಸ ಚಿತ್ರವೊಂದರಲ್ಲಿ ನಟಿಸುತ್ತಿದ್ದಾರೆ. ನವಿರು ಪ್ರೇಮದ ಸುತ್ತ ಅವರೇ ಕಥೆ ಹೊಸೆದಿದ್ದಾರಂತೆ. ಈ ಚಿತ್ರಕ್ಕೆ ವರನಟ ರಾಜ್‌ಕುಮಾರ್‌ ಅವರ ಮೊಮ್ಮಗಳಾದ ಧನ್ಯಾ ರಾಮ್‌ಕುಮಾರ್‌ ನಾಯಕಿ. ಧನ್ಯಾ ಅವರು ಪೂರ್ಣಿಮಾ ಮತ್ತು ರಾಮ್‌ ಕುಮಾರ್‌ ದಂಪತಿಯ ಪುತ್ರಿ. ಈ ಚಿತ್ರದ ಮೂಲಕ ಅವರು ಬೆಳ್ಳಿತೆರೆಗೆ ಪ್ರವೇಶಿಸುತ್ತಿದ್ದಾರೆ.

ಇದು ಫ್ಯಾಂಟಸಿ ಕಥೆಯಲ್ಲ. ರಿಯಾಲಿಟಿ, ಕಾಮಿಡಿ, ಪ್ರೀತಿ ಮೇಳೈಸಿರುವ ಚಿತ್ರ. ‘ಸಿಲಿಕಾನ್‌ ಸಿಟಿ’ ಚಿತ್ರದ ಕೋ ಡೈರೆಕ್ಟರ್‌ ಆಗಿದ್ದ ಸುಮನ್‌ ಜಾದುಗಾರ್‌ ಈ ಚಿತ್ರಕ್ಕೆ ಆ್ಯಕ್ಷನ್‌ ಕಟ್‌ ಹೇಳುತ್ತಿದ್ದಾರೆ. ನಟ ಕಮಲ ಹಾಸನ್‌ ಅವರ ‘ಉತ್ತಮ ವಿಲನ್‌’ ಚಿತ್ರಕ್ಕೂ ಸಹಾಯಕ ನಿರ್ದೇಶಕರಾಗಿ ದುಡಿದ ಅನುಭವ ಅವರಿಗಿದೆ.

‘ನಮ್ಮ ಸುತ್ತಮುತ್ತವೇ ನಡೆಯುವ ಕಥೆ ಇದು. ಕಥೆಯಲ್ಲಿ ಹೊಸತನ ಇದೆ. ಪ್ರೇಕ್ಷಕರಿಗೆ ಇಷ್ಟವಾಗುವಂತೆ ಚಿತ್ರಕಥೆ ಹೊಸೆಯಲಾಗಿದೆ’ ಎನ್ನುತ್ತಾರೆ ಸೂರಜ್‌ ಗೌಡ. 

‘ಇದು ನನ್ನ ಮೊದಲ ಚಿತ್ರ. ಚಿತ್ರಕ್ಕಾಗಿ ಕಾರ್ಯಾಗಾರ ನಡೆಯುತ್ತಿದೆ. ನಾನು ಕೂಡ ಸಾಕಷ್ಟು ತಯಾರಿ ನಡೆಸಿದ್ದೇನೆ’ ಎಂದು ಖುಷಿ ಹಂಚಿಕೊಂಡರು ಧನ್ಯಾ ರಾಮ್‌ಕುಮಾರ್.

ಚಿತ್ರದಲ್ಲಿ ನಾಲ್ಕು ಹಾಡುಗಳು ಇರಲಿದ್ದು, ರಘು ದೀಕ್ಷಿತ್‌ ಸಂಗೀತ ಸಂಯೋಜಿಸಲಿದ್ದಾರೆ. ಚಿತ್ರದ ಟೈಟಲ್‌ ಇನ್ನೂ ಅಂತಿಮಗೊಂಡಿಲ್ಲ. ವೈಟ್‌ ಅಂಡ್‌  ಗ್ರೇ ಮೀಡಿಯಾ ಚಿತ್ರಕ್ಕೆ ಬಂಡವಾಳ ಹೂಡುತ್ತಿದೆ. ಜುಲೈನಿಂದ ಶೂಟಿಂಗ್‌ ಆರಂಭಿಸಲು ಚಿತ್ರತಂಡ ಸಿದ್ಧತೆ ನಡೆಸಿದೆ.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 2

  Happy
 • 1

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !