ಪಾಕ್ ಅಭಿನಂದಿಸಿದ ಸಾನಿಯಾ ಟೀಕೆ

ಗುರುವಾರ , ಜೂನ್ 20, 2019
26 °C

ಪಾಕ್ ಅಭಿನಂದಿಸಿದ ಸಾನಿಯಾ ಟೀಕೆ

Published:
Updated:
Prajavani

ನವದೆಹಲಿ: ಭಾರತದ ಟೆನಿಸ್ ತಾರೆ ಸಾನಿಯಾ ಮಿರ್ಜಾ ಅವರು ಸೋಮವಾರ ರಾತ್ರಿ ಇಂಗ್ಲೆಂಡ್ ವಿರುದ್ಧ ಗೆದ್ದ ಪಾಕಿಸ್ತಾನ ಕ್ರಿಕೆಟ್ ತಂಡವನ್ನು ಅಭಿನಂದಿಸಿ ಮಾಡಿರುವ ಟ್ವೀಟ್‌  ಹಲವರ ಕೆಂಗಣ್ಣಿಗೆ ಗುರಿಯಾಗಿದೆ.

‘ಮರಳಿ ಗೆಲುವಿನ ಹಾದಿಗೆ ಬಂದಿರುವ ಪಾಕಿಸ್ತಾನ ತಂಡಕ್ಕೆ ಅಭಿನಂದನೆಗಳು, ಅಮೋಘವಾದ ರೋಚಕ ಗೆಲುವು ಸಾಧಿಸಿದ್ದೀರಿ. ಇದರಿಂದಾಗಿ ವಿಶ್ವಕಪ್ ಟೂರ್ನಿ ಮತ್ತಷ್ಟು ಆಸಕ್ತಿಕರವಾಗುವ ಲಕ್ಷಣಗಳಿವೆ’ ಎಂದು ಸಾನಿಯಾ ಟ್ವೀಟ್ ಮಾಡಿದ್ದಾರೆ.

ಆದರೆ, ಭಾರತ ತಂಡದ ಅಭಿಮಾನಿಗಳು ಈ ಸಂದೇಶದ ಬಗ್ಗೆ ಟೀಕೆಗಳ ಮಳೆಯನ್ನೇ ಸುರಿಸಿದ್ದಾರೆ.

‘ಭಾಳ ಖುಷಿಪಡುವ ಅಗತ್ಯವಿಲ್ಲ. ಇನ್ನೂ ಭಾರತ ತಂಡದ ಎದುರು ಪಂದ್ಯ ಆಡಬೇಕಿದೆ.  ಆಗ ಗೊತ್ತಾಗುತ್ದದೆ’ ಎಂದು ಬಹಳಷ್ಟು ಜನರು ಪ್ರತಿಕ್ರಿಯಿಸಿದ್ದಾರೆ.

ಸಾನಿಯಾ ಅವರ ಪತಿ ಶೋಯಬ್ ಮಲಿಕ್ ಅವರು ಪಾಕ್‌ ತಂಡದಲ್ಲಿ ಆಡುತ್ತಿದ್ದಾರೆ.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 4

  Happy
 • 4

  Amused
 • 1

  Sad
 • 1

  Frustrated
 • 11

  Angry

Comments:

0 comments

Write the first review for this !