ಕ್ರೀಡಾ ತರಬೇತಿಗೆ ಕೋಚ್‌ಗಳ ಕೊರತೆ

ಬುಧವಾರ, ಜೂನ್ 19, 2019
29 °C

ಕ್ರೀಡಾ ತರಬೇತಿಗೆ ಕೋಚ್‌ಗಳ ಕೊರತೆ

Published:
Updated:

ಕಲಬುರ್ಗಿ: ಹೈದರಾಬಾದ್‌ ಕರ್ನಾಟಕ ಕ್ರೀಡಾ ಕ್ಷೇತ್ರದಲ್ಲಿಯೂ ಹಿಂದುಳಿದಿದೆ. ಇಲ್ಲಿ ಪ್ರತಿಭೆಗಳಿಗೆ ಬರವಿಲ್ಲ. ಸೌಲಭ್ಯಗಳೂ ಇವೆ. ಆದರೆ, ಸಮರ್ಪಕ ತರಬೇತಿ ನೀಡುವ ಕೋಚ್‌ಗಳ ಕೊರತೆ ಬಾಧಿಸುತ್ತಿದೆ.

ಪ್ರತಿ ಜಿಲ್ಲೆಯಲ್ಲಿ ವಿವಿಧ ಕ್ರೀಡೆಗಳನ್ನು ಸಮರ್ಪಕವಾಗಿ ಕಲಿಸಿಕೊಡಲು ಕನಿಷ್ಠ 10 ಜನ ಕೋಚ್‌ಗಳಾದರೂ ಇರಬೇಕು. ಆದರೆ, ಕಲಬುರ್ಗಿಯಲ್ಲಿ ಇರುವುದು ಇಬ್ಬರು ಕೋಚ್‌ಗಳಷ್ಟೇ. ಈ ಭಾಗದ ಇತರೆ ಜಿಲ್ಲೆಗಳ ಪರಿಸ್ಥಿತಿ ಇದಕ್ಕಿಂತ ಭಿನ್ನವೇನಿಲ್ಲ.

‘ಗ್ರಾಮೀಣ ಪ್ರದೇಶದಿಂದ ಬರುವ ಕ್ರೀಡಾಪಟುಗಳಿಗೆ ತಾಲ್ಲೂಕು ಮಟ್ಟದಲ್ಲಿಯೇ ಸುಸಜ್ಜಿತ ಕ್ರೀಡಾಂಗಣ ಹಾಗೂ ಕ್ರೀಡಾ ಪರಿಕರಗಳನ್ನು ಒದಗಿಸಬೇಕಿದೆ. ಆದರೆ ಇದು ಸಾಧ್ಯವಾಗಿಲ್ಲ. ಹೈದರಾಬಾದ್‌ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಗೆ ಪ್ರತಿ ವರ್ಷ ₹1500 ಕೋಟಿ ಅನುದಾನ ಬರುತ್ತದೆ. ಆ ಅನುದಾನದ ಸ್ವಲ್ಪ ಭಾಗ ಬಳಸಿಕೊಂಡು ಕೋಚ್‌ಗಳನ್ನು ನೇಮಕ ಮಾಡಕೊಳ್ಳಬಹುದು’ ಎನ್ನುತ್ತಾರೆ ಗುಲಬರ್ಗಾ ವಿಶ್ವವಿದ್ಯಾಲಯದ ಸ್ನಾತಕೋತ್ತರ ದೈಹಿಕ ಶಿಕ್ಷಣ ವಿಭಾಗದ ನಿರ್ದೇಶಕ ಡಾ.ಎಂ.ಎಸ್‌. ಪಾಸೋಡಿ.

ಕಲಬುರ್ಗಿಯಲ್ಲಿ ‘ಚಂದ್ರಶೇಖರ ಪಾಟೀಲ ಜಿಲ್ಲಾ ಕ್ರೀಡಾಂಗಣ’ ಇದೆ. ಸಿಂಥೆಟಿಕ್‌ ಟ್ರ್ಯಾಕ್‌ ಸೇರಿದಂತೆ ಅತ್ಯಾಧುನಿಕ ಕ್ರೀಡಾ ಸೌಲಭ್ಯಗಳಿವೆ. ಆದರೆ, ನುರಿತ ಕೋಚ್‌ಗಳು ನೇಮಕವಾಗದಿರುವುದರಿಂದ ಉತ್ತಮ ಪ್ರತಿಭೆಗಳು ಹೊರಬರುತ್ತಿಲ್ಲ ಎಂಬುದು ಪಾಸೋಡಿ ಅವರ ಅಭಿಮತ.

ಹುಬ್ಬಳ್ಳಿ ಮತ್ತು ಬೆಳಗಾವಿಯಲ್ಲಿ ಕರ್ನಾಟಕ ರಾಜ್ಯ ಕ್ರಿಕೆಟ್‌ ಸಂಸ್ಥೆಯ ಕ್ರೀಡಾಂಗಣಗಳಿವೆ. ಅಲ್ಲಿ ಕೆಪಿಎಲ್‌ ಪಂದ್ಯಗಳು, ರಣಜಿ ಪಂದ್ಯಗಳೂ ನಡೆಯುತ್ತವೆ. ಅಂಥದ್ದೇ ಕ್ರೀಡಾಂಗಣ ನಿರ್ಮಿಸಲು ಗುಲಬರ್ಗಾ ವಿಶ್ವವಿದ್ಯಾಲಯದಲ್ಲಿ ಜಾಗ ಕೊಡುವಂತೆ ಕೆಎಸ್‌ಸಿಎ ಪ್ರಸ್ತಾವ ಸಲ್ಲಿಸಿತ್ತು. ಕ್ರೀಡಾಂಗಣ ಅಭಿವೃದ್ಧಿಗಾಗಿ ₹100 ಕೋಟಿ ನೀಡು ವುದಾಗಿ ಒಪ್ಪಿಕೊಂಡಿತ್ತು. ಈ ಪ್ರಸ್ತಾವವನ್ನು ಗುಲಬರ್ಗಾ ವಿ.ವಿ. ಕೂಡ ಒಪ್ಪಿಕೊಂಡಿತ್ತು. ಆದರೆ, ನಿರ್ವಹಣೆ ಹೊಣೆಯನ್ನು ಸರ್ಕಾರಕ್ಕೇ ಬಿಡಬೇಕು ಎಂದು ಈ ಭಾಗದ ಕೆಲ ಪ್ರಭಾವಿ ರಾಜಕಾರಣಿಗಳು ಷರತ್ತು ಹಾಕಿದ್ದರಿಂದ ಆ ಪ್ರಸ್ತಾವ ಹಾಗೆಯೇ ಉಳಿದಿದೆ ಎನ್ನುತ್ತಾರೆ ರಾಜ್ಯ ಕ್ರಿಕೆಟ್‌ ಸಂಸ್ಥೆಯ ಸದಸ್ಯರೊಬ್ಬರು.

ಇವನ್ನೂ ಓದಿ....
ಕ್ರೀಡಾ ತರಬೇತಿಗೆ ಕೋಚ್‌ಗಳ ಕೊರತೆ
ಕರ್ನಾಟಕದ ಕ್ರೀಡಾಂಗಣ ಭಣ ಭಣ
ಮೈಸೂರಿನಲ್ಲಿ ಸೌಲಭ್ಯವಿದೆ... ನಿರ್ವಹಣೆ ಇಲ್ಲ...
ಜಲಸಾಹಸ ಕ್ರೀಡೆಗಳಿಗೆ ಬೇಕಿದೆ ಉತ್ತೇಜನ
ಪದಕಗಳ ಗೆದ್ದರೂ ಸಿಗದ ಸೌಕರ್ಯ
ಕ್ರೀಡಾ ಹಬ್‌ಗೂ ಕವಿದಿದೆ ಮಬ್ಬು
ಮಣ್ಣಲ್ಲಿ ಅಭ್ಯಾಸ; ಟರ್ಫ್‌ನಲ್ಲಿ ಗೆಲ್ಲಲು ‘ಸಾಹಸ’!

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 1

  Sad
 • 0

  Frustrated
 • 0

  Angry

Comments:

0 comments

Write the first review for this !