ಸೋಮವಾರ, 13–6–1994

ಭಾನುವಾರ, ಜೂನ್ 16, 2019
28 °C

ಸೋಮವಾರ, 13–6–1994

Published:
Updated:

ಸೋದರ ಭಾಷೆ, ಸಂಸ್ಕೃತಿ ಅರಿಯಲು ಕರೆ

ಬೆಂಗಳೂರು, ಜೂನ್ 12– ‘ಯುರೋಪಿನತ್ತ ನೆಟ್ಟಿರುವ ನಮ್ಮ ದೃಷ್ಟಿಯನ್ನು ಸೋದರ ಭಾಷೆ ಸಂಸ್ಕೃತಿಗಳ  ಕಡೆ ತಿರುಗಿಸಲು ಭಾಷಾಂತರಕಾರರ ದೊಡ್ಡಪಡೆ ಕಟ್ಟಬೇಕಾಗಿದೆ’ ಎಂದು ಪ್ರಸಿದ್ಧ ಸಾಹಿತಿ ಹಾಗೂ ಕೇಂದ್ರ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಡಾ. ಯು.ಆರ್. ಅನಂತಮೂರ್ತಿ ಇಂದು ಇಲ್ಲಿ ಸಲಹೆ ಮಾಡಿದರು.

‘ನಮ್ಮ ಕಥೆ ಹೇಗಾಗಿದೆಯೆಂದರೆ ದೂರದ ಐರೋಪ್ಯ ಭಾಷೆಗಳನ್ನು ಕಲಿತು, ಅಲ್ಲಿನ ಸಾಹಿತ್ಯವನ್ನು ನಮ್ಮ ಭಾಷೆಗೆ ಅನುವಾದಿಸುತ್ತೇವೆ. ಆದರೆ, ಪಕ್ಕದ ತೆಲುಗು, ತಮಿಳು ಕಲಿಯುತ್ತಿಲ್ಲ. ಇಂಥ ಅವಮಾನಕರ ಪರಿಸ್ಥಿತಿ ಹೋಗಲಾಡಿಸಲು ಅಕ್ಕಪಕ್ಕದ ರಾಜ್ಯಗಳ ಭಾಷೆ ಕಲಿತು ಪರಸ್ಪರರು ಭಾಷಾಂತರ ಮಾಡುವಂತಾಗಬೇಕು’ ಎಂದು ಭಾರತೀಯ ಜ್ಞಾನಪೀಠ ಸುವರ್ಣ ಮಹೋತ್ಸವ ಸಮಾರಂಭದ ತಮ್ಮ ಅಧ್ಯಕ್ಷ ಭಾಷಣದಲ್ಲಿ ಅವರು ಹೇಳಿದರು.

ಚುನಾವಣಾ ಮಸೂದೆ: ಕಾಂಗೈ, ಬಿಜೆಪಿ, ಶೇಷನ್‌ಗೆ ಅಗ್ನಿ ಪರೀಕ್ಷೆ

ನವದೆಹಲಿ, ಜೂನ್ 12– ಚುನಾವಣೆ ಸುಧಾರಣೆ ಮತ್ತು ರಾಜಕೀಯ ಉದ್ದೇಶಕ್ಕೆ ಧರ್ಮದ ದುರುಪಯೋಗ ತಡೆಗಾಗಿ ಜನತಾ ಪ್ರಾತಿನಿಧ್ಯ ಕಾಯಿದೆಯನ್ನು ಬದಲಾಯಿಸುವ 83ನೇ ಸಂವಿಧಾನ ತಿದ್ದುಪಡಿ ಮಸೂದೆಯ ಪರಿಶೀಲನೆಗಾಗಿ ನಾಳೆಯಿಂದ ನಾಲ್ಕು ದಿನ ಕಾಲ ನಡೆಯುವ ಸಂಸತ್ತಿನ ವಿಶೇಷ ಅಧಿವೇಶನ ಕಾಂಗೈ ಸರ್ಕಾರಕ್ಕೆ, ಬಿ.ಜೆ.ಪಿ.ಗೆ ಹಾಗೂ ಮುಖ್ಯ ಚುನಾವಣಾ ಕಮೀಷನರ್ ಟಿ.ಎನ್. ಶೇಷನ್ ಅವರಿಗೆ ಅಗ್ನಿಪರೀಕ್ಷೆ ಎನಿಸಲಿದೆ.

ಮಸೂದೆಯನ್ನು ಬೆಂಬಲಿಸಬೇಕೇ ಬೇಡವೆ ಎಂಬ ವಿಷಯದಲ್ಲಿ ಪ್ರತಿಪಕ್ಷಗಳು ಕೂಡ ಬೇರೆ ಬೇರೆ ಹಾದಿ ಹಿಡಿದಿರುವುದರಿಂದ ಈ ಅಲ್ಪಕಾಲದ ಅಧಿವೇಶನ ದೇಶದ ಗಮನ ಸೆಳೆದಿದ್ದು ಸಾಕಷ್ಟು ಕೋಲಾಹಲ ಉಂಟು ಮಾಡುವ ನಿರೀಕ್ಷೆ ಇದೆ.

ದಳ ಬಿಕ್ಕಟ್ಟು: ಬೊಮ್ಮಾಯಿ ಮಧ್ಯಪ್ರವೇಶಕ್ಕೆ ಮನವಿ

ಬೆಂಗಳೂರು, ಜೂನ್ 12–ಜನತಾ ದಳದ ಬಂಡಾಯ ಅಭ್ಯರ್ಥಿಯಾಗಿ ವಿ.ಆರ್. ಸುದರ್ಶನ್ ಅವರು ವಿಧಾನ ಪರಿಷತ್ತಿಗೆ ಚುನಾಯಿತರಾದ ನಂತರ ದಳದಲ್ಲಿ ಎದ್ದಿರುವ ಆಂತರಿಕ ಬಿಕ್ಕಟ್ಟಿನ ಪರಿಹಾರಕ್ಕೆ ರಾಷ್ಟ್ರೀಯ ಅಧ್ಯಕ್ಷ ಎಸ್.ಆರ್. ಬೊಮ್ಮಾಯಿ ಅವರು ಮಧ್ಯ ಪ್ರವೇಶಿಸಬೇಕೆಂದು ಪಕ್ಷದ ಮುಖಂಡರು ಇಂದು ಮನವಿ ಮಾಡಿಕೊಂಡಿದ್ದಾರೆ.

ಗೋಸ್ವಾಮಿ ಸಮಿತಿ ಶಿಫಾರಸ್ಸು ಅಳವಡಿಕೆಗೆ ದಳ ಪಟ್ಟು

ನವದೆಹಲಿ, ಜೂನ್ 12 (ಯುಎನ್‌ಐ)– ಚುನಾವಣೆಗಳು ಹೆಚ್ಚು ಮುಕ್ತವಾಗಿರುವಂತೆ ನೋಡಿಕೊಳ್ಳಲು ದಿನೇಶ್ ಗೋಸ್ವಾಮಿ ಸಮಿತಿ ಶಿಫಾರಸ್ಸುಗಳನ್ನು ಉದ್ದೇಶಿತ ಚುನಾವಣಾ ಸುಧಾರಣೆ ಮಸೂದೆಯಲ್ಲಿ ಅಳವಡಿಸುವಂತೆ ಜನತಾ ದಳ ಇಂದು ಮತ್ತೆ ಒತ್ತಾಯಿಸಿತು.

ಮಸೂದೆಗೆ ಬೆಂಬಲ ನೀಡದಿರಲು ಬಿಜೆಪಿ ಮತ್ತು ಸಿಪಿಐ ನಿರ್ಧರಿಸಿದ್ದು, ಸಂವಿಧಾನ ತಿದ್ದುಪಡಿಗೆ ಮೂರನೇ ಎರಡು ಬಹುಮತ ಅಗತ್ಯವಾಗಿರುವ ಕಾರಣ ದಳ ನಿರ್ಣಾಯಕ ಪಾತ್ರ ವಹಿಸಲಿದೆ.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !