ಐಐಎಂಬಿ: ಮಹಿಳೆಯರ ಕಲಿಕಾ ಆಸಕ್ತಿ ಹೆಚ್ಚಳ

ಶುಕ್ರವಾರ, ಜೂನ್ 21, 2019
24 °C

ಐಐಎಂಬಿ: ಮಹಿಳೆಯರ ಕಲಿಕಾ ಆಸಕ್ತಿ ಹೆಚ್ಚಳ

Published:
Updated:

ಬೆಂಗಳೂರು: ನಗರದ ಐಐಎಂ–ಬಿಯಲ್ಲಿರುವ ಎರಡು ವರ್ಷಗಳ ಎಂಬಿಎ ಕೋರ್ಸ್‌ಗೆ ಮಹಿಳಾ ಅಭ್ಯರ್ಥಿಗಳು ದೊಡ್ಡ ಪ್ರಮಾಣದಲ್ಲಿ ಆಕರ್ಷಿತರಾಗಿದ್ದಾರೆ.

ಕಳೆದ ಶೈಕ್ಷಣಿಕ ವರ್ಷಕ್ಕೆ ಹೋಲಿಸಿದರೆ, ಈ ಬಾರಿ (2019–21ನೇ ಶೈಕ್ಷಣಿಕ ವರ್ಷ) ಅವರ ಸಂಖ್ಯೆಯಲ್ಲಿ ಶೇ 10ರಷ್ಟು ಹೆಚ್ಚಳ ಕಂಡುಬಂದಿದೆ. ಕಳೆದ ಬಾರಿ ಶೇ 27ರಷ್ಟಿದ್ದರೆ, ಈ ಬಾರಿ ಶೇ 37ರಷ್ಟು ಮಹಿಳೆಯರಿದ್ದಾರೆ.

‘441 ಅಭ್ಯರ್ಥಿಗಳ ಪೈಕಿ 165 ಮಂದಿ ಮಹಿಳೆಯರು. ಇವರಲ್ಲಿ ಶೇ 18ರಷ್ಟು ಮಂದಿ 2 ವರ್ಷ ಕೆಲಸದ ಅನುಭವ ಇರುವ ಹೊಸಬರು ಮತ್ತು ಶೇ 18ರಷ್ಟು ಮಂದಿ ಎಂಜಿನಿಯರಿಂಗ್‌ ಕ್ಷೇತ್ರಕ್ಕೆ ಹೊರತಾದವರು. ಹೀಗಾಗಿ ಒಂದು ಆಸಕ್ತಿದಾಯಕ ವಿದ್ಯಾರ್ಥಿ ಸಮುದಾಯವನ್ನು ಇಲ್ಲಿ ನೋಡಬಹುದಾಗಿದೆ’ ಎಂದು ನೇಮಕಾತಿ ಮತ್ತು ಹಣಕಾಸು ನೆರವು ವಿಭಾಗದ ಮುಖ್ಯಸ್ಥ ಜಿ.ಶಬರಿನಾಥ್‌ ಹೇಳಿದ್ದಾರೆ.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !