ವಿಯಾನ್‌ ಅಕಾಡೆಮಿಯಿಂದ ಪೂರ್ಣಾವಧಿ ದೂರಶಿಕ್ಷಣ

ಬುಧವಾರ, ಜೂಲೈ 17, 2019
29 °C

ವಿಯಾನ್‌ ಅಕಾಡೆಮಿಯಿಂದ ಪೂರ್ಣಾವಧಿ ದೂರಶಿಕ್ಷಣ

Published:
Updated:

ಬೆಂಗಳೂರು: ವಿಯಾನ್‌ ಅಕಾಡೆಮಿ ವತಿಯಿಂದ 10ನೇ ತರಗತಿ ಉತ್ತೀರ್ಣರಾದವರಿಗೆ 2 ವರ್ಷಗಳ ಪೂರ್ಣ ಅವಧಿ ಕಲಿಕೆಯ ಕಂಟಿನ್ಯೂಯಸ್‌ ಆ್ಯಂಡ್‌ ಕಾಂಪ್ರೆಹೆನ್ಸಿವ್‌ ಇವ್ಯಾಲ್ಯೂಯೇಷನ್‌ ಪ್ರೋಗ್ರಾಂ (ಸಿಸಿಇಪಿ) ಮತ್ತು 12ನೇ ತರಗತಿ ಅನುತ್ತೀರ್ಣರಾದವರಿಗೆ 3 ವರ್ಷದ ಪೂರ್ಣ ಅವಧಿಯ ದೂರ ಶಿಕ್ಷಣನೀಡಲಾಗುವುದು. ಬಡವಿದ್ಯಾರ್ಥಿಗಳಿಗೆ ಉಚಿತ ಪ್ರವೇಶವಿದೆ.

‘ಸಿಸಿಇಪಿ ಪ್ರೋಗ್ರಾಂಗೆ ಸೇರುವ ವಿದ್ಯಾರ್ಥಿಗಳು ಪಿಯುಸಿ ವಿಷಯಗಳನ್ನು ಓದಿಕೊಂಡು ನೇರವಾಗಿ ದ್ವಿತೀಯ ಪಿಯುಸಿ ಪರೀಕ್ಷೆಗೆ ತಯಾರಿ ನಡೆಸಬಹುದು. ಇದು ವಾಣಿಜ್ಯ ವಿಭಾಗಕ್ಕೆ ಮಾತ್ರ ಅನ್ವಯಿಸುತ್ತದೆ. ವಿದ್ಯಾರ್ಥಿಗಳ ಸಾಮರ್ಥ್ಯ ಗುರುತಿಸಿ, ಅವರ ಪ್ರತಿಭೆಯನ್ನು ಪೋಷಿಸಿ ಶಿಕ್ಷಣದ ಕಡೆಗೆ ಪ್ರೇರೇಪಿಸುವಂತೆ ಮಾಡುವುದು ನಮ್ಮ ಗುರಿ’ ಎಂದು ಅಕಾಡೆಮಿಯ ವ್ಯವಸ್ಥಾಪಕ ನಿರ್ದೇಶಕ ಅಬ್ದುಲ್‌ ಮುತೀಶ್‌ ತಿಳಿಸಿದರು.

ಸಂಪರ್ಕ: 80957–68829

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !