ಸಿಯಾಲ್‌ಕೋಟ್‌ ಗುರುದ್ವಾರ: ಭಾರತದ ಸಿಖ್‌ ಯಾತ್ರಿಕರ‌ ಭೇಟಿಗೆ ಅವಕಾಶ ನೀಡಿದ ಪಾಕ್

ಮಂಗಳವಾರ, ಜೂಲೈ 23, 2019
24 °C

ಸಿಯಾಲ್‌ಕೋಟ್‌ ಗುರುದ್ವಾರ: ಭಾರತದ ಸಿಖ್‌ ಯಾತ್ರಿಕರ‌ ಭೇಟಿಗೆ ಅವಕಾಶ ನೀಡಿದ ಪಾಕ್

Published:
Updated:

ಲಾಹೋರ್ (ಪಿಟಿಐ): ಪಾಕಿಸ್ತಾನದ ಸಿಯಾಲ್‌ಕೋಟ್‌ನಲ್ಲಿರುವ 500 ವರ್ಷಗಳಷ್ಟು ಹಳೆಯದಾದ ಗುರುದ್ವಾರಕ್ಕೆ ಇನ್ನು ಭಾರತದ ಸಿಖ್‌ ಧರ್ಮೀಯರು ಭೇಟಿ ನೀಡಬಹುದಾಗಿದೆ. 

ಲಾಹೋರ್‌ನಿಂದ 140 ಕಿ.ಮೀ ದೂರದಲ್ಲಿರುವ ಬಾಬೆ–ದೆ–ಬೆರ್‌ ಗುರುದ್ವಾರ ಪ್ರವೇಶಕ್ಕೆ ಭಾರತೀಯರಿಗೆ ಅನುಮತಿ ನೀಡುವಂತೆ ಪಂಜಾಬ್‌ ಪ್ರಾಂತ್ಯದ ರಾಜ್ಯಪಾಲ ಮೊಹಮ್ಮದ್‌ ಸರ್ವರ್ ಅವರು ಧಾರ್ಮಿಕ ಮಂಡಳಿಗೆ ನಿರ್ದೇಶನ ನೀಡಿದ್ದಾರೆ ಎಂದು ಸ್ಥಳೀಯ ಮಾಧ್ಯಮ ವರದಿ ಮಾಡಿದೆ. ಭಾರತದ ಯಾತ್ರಿಕರೊಂದಿಗೆ ಕೆನಡಾ, ಅಮೆರಿಕ, ಯೂರೋಪ್‌ನ ಸಿಖ್‌ ಧರ್ಮೀಯರೂ ಪ್ರವಾಸ ಕೈಗೊಳ್ಳಬಹುದಾಗಿದೆ. 

ಸಿಖ್‌ ಧಾರ್ಮಿಕ ಗುರುಗುರುನಾನಕ್‌ ಅವರು 16ನೇ ಶತಮಾನದಲ್ಲಿ ಕಾಶ್ಮೀರದಿಂದ ಸಿಯಾಲ್‌ಕೋಟ್‌ಗೆ ಬಂದಾಗ ಇಲ್ಲಿನ ಹಣ್ಣಿನ ಮರದ ಕೆಳಗೆ ಆಶ್ರಯ ಪಡೆದಿದ್ದರು. ಅದೇ ಮರದ ಬಳಿ ಸರ್ದಾರ್ ನಾಥಸಿಂಗ್‌ ಎಂಬುವವರು ಗುರುದ್ವಾರ ನಿರ್ಮಿಸಿದರು ಎಂಬುದು ಸಿಖ್‌ ಧರ್ಮೀಯರ ನಂಬಿಕೆ. 

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !