ಮಂಗಳವಾರ, ಮೇ 24, 2022
30 °C

63 ಪುರಾತನರ ಲಿಂಗ ಸ್ಥಾಪನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಆಳಂದ:  ಪಟ್ಟಣದ ಸದ್ಗುರು ರೇವಣಸಿದ್ಧ ಶಿವಶರಣರ ಮಂಟದ ಶತಮಾನೋತ್ಸವ ನಿಮಿತ್ತ ನಾಲ್ಕು ದಿನಗಳಿಂದ ನಡೆಯುತ್ತಿರುವ ಧಾರ್ಮಿಕ ವಿಧಿವಿಧಾನಗಳ ಪೈಕಿ ಸೋಮವಾರ 63 ಪುರಾತನ ಶಿವಶರಣರ ಲಿಂಗಗಳ ಸ್ಥಾಪನೆ, ನಂದಿ ವಿಗ್ರಹ, ನವಗ್ರಹ, ಹನುಮಾನ ಮೂರ್ತಿ ಪ್ರತಿಷ್ಠಾಪನೆ, ಕೋಟ್ಯಂತರ ವೆಚ್ಚದಲ್ಲಿ ಸುಂದರವಾಗಿ ನಿರ್ಮಿಸಲಾದ ಮಂಟಪದ ಕಟ್ಟಡಕ್ಕೆ ಕಳಸಾರೋಹಣ, ನಾಣ್ಯದ ತುಲಾಭಾರದ ಕಾರ್ಯದಲ್ಲಿ ಸಾವಿರಾರು ಭಕ್ತರು ಪಾಲ್ಗೊಂಡರು.ಆನೆ, ಅಂಬಾರಿಯ, ಪಲ್ಲಕ್ಕಿ, 501 ಮಹಿಳೆಯರು ಹೊತ್ತುಕೊಂಡ ಕುಂಭದ ಮೆರವಣಿಗೆ ಪ್ರಮುಖ ಬೀದಿಗಳ ಮೂಲಕ ಅಕ್ಕಲಕೋಟ ಮತ್ತು ಚನ್ನಬಸವ ಪಟ್ಟದ್ದೇವರು, ಮೈಂದರ್ಗಿಯ ಅಭಿನವ ರೇವಣಸಿದ್ಧ ಸ್ವಾಮೀಜಿಗೆ ಭವ್ಯ ಮೆರವಣಿಗೆ ಭಾನುವಾರ ನೆರವೇರಿತು. ಅಕ್ಕಲಕೋಟ ಚಿಕ್ಕರೇವಣಸಿದ್ಧ ಶಿವಶರಣ ಸ್ವಾಮೀಜಿಗೆ ನಾಣ್ಯದ ತುಲಾಭಾರ ನಡೆಯಿತು. ಧಾರ್ಮಿಕ ಸಮಾರಂಭದಲ್ಲಿ ಅಕ್ಕಲಕೋಟದ ಚಿಕ್ಕರೇವಣಸಿದ್ಧ ಶಿವಶರಣ ಸ್ವಾಮೀಜಿ ಮಾತನಾಡಿ, ಭಕ್ತರ ಉದ್ಧಾರಕ್ಕಾಗಿ ಸಿದ್ಧಾರೂಢರು, ರೇವಣಸಿದ್ಧ ಶಿವಶರಣರು ಶ್ರಮಿಸಿ ಭಕ್ತರಿಗೆ ಸನ್ಮಾರ್ಗ ತೋರಿಸಿದ್ದಾರೆ.  ಅವರು ಹಾಕಿಕೊಟ್ಟ ಮಾರ್ಗದಲ್ಲಿ ನಡೆಯಬೇಕು ಎಂದು ಕರೆನೀಡಿದರು.ಖಜೂರಿಯ ಮುರುಘೇಂದ್ರ ಸ್ವಾಮೀಜಿ, ಮಂಟಪದ  ಚನ್ನಬಸವ ಸ್ವಾಮೀಜಿ, ಸಸ್ತಾಪೂರದ ಸದಾನಂದ ಸ್ವಾಮೀಜಿ, ಮೈಂದರ್ಗಿಯ ಅಭಿನವ ರೇವಣಸಿದ್ಧ ಪಟ್ಟದೇವರು ಪಾಲ್ಗೊಂಡಿದ್ದರು. ಮಂಟಪ ಸಮಿತಿ ಅಧ್ಯಕ್ಷ ಗುರುನಾಥ ಷಣ್ಮುಖ, ಖಂಡಾಳದ ಗುರುಲಿಂಗಯ್ಯ ಸ್ವಾಮಿ, ಶ್ರೀಮಂತ ಧನ್ನಾ, ಸಿದ್ಧಾರೂಢ ಕಂಠೆ, ಸೂರ್ಯಕಾಂತ ತಟ್ಟೆ, ರಾಮಲಿಂಗ ಭಾವಿ, ಭೀಮಣ್ಣಪ್ಪ ಶಟಗುಂಡೆ, ಸಿದ್ಧಾರೂಢ ಸನಗುಂದಿ ಮತ್ತಿತರರು ಭಾಗವಹಿಸಿದ್ದರು.ಇಂದು ಪುಷ್ಪವೃಷ್ಟಿ: 16ರಂದು ಹೆಲಿಕಾಪ್ಟರ್ ಮೂಲಕ ಪುಷ್ಪವೃಷ್ಟಿ ನಡೆಯಲಿದೆ. ಗುರುವಿನ ಉಪಕಾರ ಪ್ರವಚನದಲ್ಲಿ ಹಂಪಿಯ ದಯಾನಂದಪುರಿ ಮಹಾಸ್ವಾಮಿಗ ಸಾನ್ನಿಧ್ಯವಹಿಸುವರು. ಗಣ್ಯರಿಗೆ ಸನ್ಮಾನ ಹಾಗೂ ಮಧ್ಯಾಹ್ನ 12.15ಕ್ಕೆ ಸಾಮೂಹಿಕ ವಿವಾಹ ಜರುಗುವುದು. ಸಂಜೆ 6.15ಕ್ಕೆ ಚನ್ನಬಸವ ಪಟ್ಟದೇವರಿಗೆ ನಾಣ್ಯದ ತುಲಾಭಾರ ಬಳಿಕ ಲಕ್ಷದೀಪೋತ್ಸವ, ಮಹಾಮಂಗಲಗೊಳ್ಳಲಿದೆ. ತನು, ಮನ, ಧನದಿಂದ ಸಹಕರಿಸಬೇಕು ಎಂದು ಸಮಿತಿ ಪದಾಧಿಕಾರಿಗಳು ಕೋರಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.