ಶುಕ್ರವಾರ, ಆಗಸ್ಟ್ 23, 2019
21 °C

ನಿವೃತ್ತ ಶಿಕ್ಷಕ ನಟರಾಜ್‌ಗೆ ಬೀಳ್ಕೊಡುಗೆ

Published:
Updated:
Prajavani

ಅಜ್ಜಂಪುರ: ದೇಶದ ಮುಂದಿನ ಪ್ರಜೆಗಳನ್ನು ರೂಪಿಸುವ ಶಿಕ್ಷಕ ವೃತ್ತಿ ಅತ್ಯಂತ ಪವಿತ್ರವಾದುದು. ಸೇವಾವಧಿಯಲ್ಲಿ ಮಕ್ಕಳಿಗೆ ಉತ್ತಮವಾಗಿ ಶಿಕ್ಷಣ ಕಲಿಸಿದ ತೃಪ್ತಿ ಇದೆ ಎಂದು ನಿವೃತ್ತ ಶಿಕ್ಷಕ ಎನ್.ಒ. ನಟರಾಜ್ ಹೇಳಿದರು.

ಪಟ್ಟಣ ಸಮೀಪದ ಅತ್ತಿಗಟ್ಟೆ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಸಹಶಿಕ್ಷಕರಾಗಿ ನಿವೃತ್ತಿಯಾದ ಅವರಿಗೆ ಶಿಕ್ಷಕರ ಸಂಘ, ಸರ್ಕಾರಿ ನೌಕರರ ಸಂಘ, ಜಿಲ್ಲಾ ಪ್ರಾಥಮಿಕ ಶಿಕ್ಷಕರ ಸಂಘ ಹಾಗೂ ಗ್ರಾಮಸ್ಥರು ಆಯೋಜಿಸಿದ್ದ ಬೀಳ್ಕೊಡುಗೆ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು.

ತಾಲ್ಲೂಕು ಶಿಕ್ಷಕರ ಸಂಘ ಅಧ್ಯಕ್ಷ ಸಿ.ಆರ್.ಅನಂತಪ್ಪ, ಪದಾಧಿಕಾರಿಗಳಾದ ರಾಮಚಂದ್ರಪ್ಪ, ಶಿವಕುಮಾರ, ಪರಮೇಶ್ವರಪ್ಪ, ಪುಟ್ಟಸ್ವಾಮಿ, ಶೈಲಜಾ, ಶೋಭಾ, ರವಿ, ಕುಮಾರಸ್ವಾಮಿ, ಓಂಕಾರಪ್ಪ, ಶಶಿಧರ್, ಗ್ರಾಮಸ್ಥರು ಇದ್ದರು.

Post Comments (+)