ಸೋಮವಾರ, ಆಗಸ್ಟ್ 26, 2019
27 °C

ಕಟ್ಟುನಿಟ್ಟಿನ ಮಾರ್ಗಸೂಚಿ ಜಾರಿಗೆ ಬರಲಿ

Published:
Updated:

ಪೇಯಿಂಗ್‌ ಗೆಸ್ಟ್‌’ (ಪಿ.ಜಿ) ತಾಣಗಳ ಅವ್ಯವಸ್ಥೆ ಕುರಿತು ಪತ್ರಿಕೆಯು ಸರ್ಕಾರದ ಕಣ್ಣು ತೆರೆಸಲು ಪ್ರಯತ್ನಿಸಿರುವುದು (ಪ್ರ.ವಾ., ಒಳನೋಟ, ಆ. 11) ಪ್ರಶಂಸನೀಯ. ಪಿ.ಜಿಗಳ ಹೆಸರಿನಲ್ಲಿ ನಡೆಯುತ್ತಿರುವ ಶೋಷಣೆಯಲ್ಲಿ ಬೆಂಗಳೂರಿನಷ್ಟೇ ಪಾತ್ರ ಹುಬ್ಬಳ್ಳಿ-ಧಾರವಾಡದ್ದೂ ಇದೆ.

ಗ್ರಾಮೀಣ ಪ್ರದೇಶಗಳಿಂದ ನಗರಗಳತ್ತ ಉದ್ಯೋಗ, ವಿದ್ಯಾಭ್ಯಾಸಕ್ಕಾಗಿ ಬರುವವರ ಗೋಳು ಹೇಳತೀರದು. ವಿದ್ಯಾರ್ಥಿಗಳಿಂದ ಸಮಯಕ್ಕೆ ಸರಿಯಾಗಿ ದುಡ್ಡು ಪೀಕುವ ಪಿ.ಜಿ ಮಾಲೀಕರು, ಕೊಟ್ಟಿಗೆಯಲ್ಲಿ ದನ ತುಂಬಿದಂತೆ ಒಂದು ರೂಮಿನಲ್ಲಿ 6ರಿಂದ 8 ವಿದ್ಯಾರ್ಥಿಗಳನ್ನು ತುಂಬುತ್ತಾರೆ. ಅವರು ನೀಡುವ ಸೋಡಾಮಿಶ್ರಿತ ಆಹಾರದಿಂದ ಎಷ್ಟೋ ವಿದ್ಯಾರ್ಥಿಗಳ ಆರೋಗ್ಯ ಕೆಡುವುದಿದೆ.

ಸರ್ಕಾರ ಈ ಕುರಿತು ಕಟ್ಟುನಿಟ್ಟಿನ ಮಾರ್ಗಸೂಚಿಯನ್ನು ಜಾರಿಗೆ ತರಬೇಕು. ಪಿ.ಜಿ ಗಳಲ್ಲಿ ಆಹಾರದ ಗುಣಮಟ್ಟ, ಮೂಲ ಸೌಕರ್ಯ ಉತ್ತಮವಾಗಿ ಇಲ್ಲದಿದ್ದರೆ ಕ್ರಮ ಜರುಗಿಸಬೇಕು.

ಭೀಮರಾವ ದೇಸಾಯಿ, ಯಾದಗಿರಿ

Post Comments (+)