ಶುಕ್ರವಾರ, ಆಗಸ್ಟ್ 23, 2019
22 °C

ಕೆಪಿಎಲ್: ಬೆಂಗಳೂರಿನಲ್ಲಿ 15 ಪಂದ್ಯಗಳು

Published:
Updated:

ಬೆಂಗಳೂರು: ಇದೇ 16ರಿಂದ ಆರಂಭವಾಗಲಿರುವ ಕರ್ನಾಟಕ ಪ್ರೀಮಿಯರ್ ಲೀಗ್ ಕ್ರಿಕೆಟ್ ಟೂರ್ನಿಯ ಮೊದಲ 15 ಪಂದ್ಯಗಳನ್ನು ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆಯೋಜಿಸಲಾಗುತ್ತಿದೆ. ಮೈಸೂರಿನಲ್ಲಿ ಫೈನಲ್‌ ಸೇರಿದಂತೆ 10 ಪಂದ್ಯಗಳನ್ನು ನಡೆಸಲಾಗುವುದು.

ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯು ಭಾನುವಾರ ಪರಿಷ್ಕೃತ ವೇಳಾಪಟ್ಟಿಯನ್ನು ಪ್ರಕಟಿಸಿದೆ. ಅದರ ಪ್ರಕಾರ 16 ರಿಂದ 23ರವರೆಗೆ ಬೆಂಗಳೂರಿನಲ್ಲಿ ಪಂದ್ಯಗಳು ನಡೆಯುತ್ತವೆ.

ನಂತರದ ಪಂದ್ಯಗಳು ಮೈಸೂರಿನ ಶ್ರೀಕಂಠದತ್ತ ನರಸಿಂಹರಾಜ್ ಒಡೆಯರ್ ಕ್ರೀಡಾಂಗಣದಲ್ಲಿ (ಗಂಗೋತ್ರಿ ಗ್ಲೇಡ್ಸ್‌) ನಡೆಯಲಿವೆ. ಈ ಮೊದಲು ಪ್ರಕಟಿಸಿದ್ದ ವೇಳಾಪಟ್ಟಿಯಲ್ಲಿ ಬೆಂಗಳೂರಿನಲ್ಲಿ 16 ರಿಂದ 19ರವರೆಗೆ ಪಂದ್ಯಗಳನ್ನು ನಡೆಯಬೇಕಿತ್ತು. ಆದರೆ, ಉತ್ತರ ಕರ್ನಾಟಕದಲ್ಲಿ ಮಳೆ ಸುರಿಯುತ್ತಿರುವುದರಿಂದ ಹುಬ್ಬಳ್ಳಿಯ ಪಂದ್ಯಗಳನ್ನು ಬೆಂಗಳೂರಿಗೆ ಸ್ಥಳಾಂತರಿಸಲಾಗಿದೆ. ಈ ಬಾರಿ ಐಪಿಎಲ್ ಮಾದರಿಯಲ್ಲಿ ಪ್ಲೇ ಆಫ್‌ ಸುತ್ತು ನಡೆಯಲಿದೆ.

Post Comments (+)