ಶನಿವಾರ, ಆಗಸ್ಟ್ 24, 2019
28 °C
ಸಚಿವ ಜೈಶಂಕರ್‌ ಹೇಳಿಕೆ

ದ್ವಿಪಕ್ಷೀಯ ಸಂಬಂಧ ಸುಧಾರಣೆ ಪರಸ್ಪರ ಕಾಳಜಿ ಅಗತ್ಯ: ಜೈಶಂಕರ್‌

Published:
Updated:
Prajavani

ಬೀಜಿಂಗ್‌: ಭಾರತ ಮತ್ತು ಚೀನಾ ನಡುವಿನ ಸಂಬಂಧದ ಭವಿಷ್ಯವು ಪ್ರಮುಖ ವಿಷಯಗಳ ಕುರಿತಂತೆ ಪರಸ್ಪರ ಕಾಳಜಿ ಮತ್ತು ಸಂವೇದನೆಯನ್ನು ಅವಲಂಬಿಸಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವ ಜೈಶಂಕರ್‌ ಹೇಳಿದ್ದಾರೆ.

ಮೂರು ದಿನಗಳ ಚೀನಾ ಪ್ರವಾಸದಲ್ಲಿರುವ ಅವರು, ಇಲ್ಲಿ ಹಮ್ಮಿಕೊಂಡಿದ್ದ ಸಭೆಯಲ್ಲಿ ಮಾತನಾಡಿ, ಉಭಯ ದೇಶಗಳ ನಡುವಿನ ದ್ವಿಪಕ್ಷೀಯ ಸಂಬಂಧ ಹೊಸ ಮಟ್ಟಕ್ಕೆ ತಲುಪಲು ವುವಾನ್‌ ಶೃಂಗ ಸಭೆ ಸಹಕಾರಿಯಾಗಿದೆ ಎಂಬುದನ್ನು ಒತ್ತಿ ಹೇಳಿದ್ದಾರೆ.

ಭಿನ್ನಾಭಿಪ್ರಾಯಗಳು ವಿವಾದಗಳಾಗ ಬಾರದು: ’ಯಾವುದೇ ದ್ವಿಪಕ್ಷೀಯ ಭಿನ್ನಾಭಿಪ್ರಾಯಗಳು ವಿವಾದಗಳಾಗಂತೆ ನೋಡಿಕೊಳ್ಳುವುದು ಮುಖ್ಯ’ ಎಂದು ಜೈಶಂಕರ್‌ ಹೇಳಿದ್ದಾರೆ.

 ‘ಕಾಶ್ಮೀರ ವಿಷಯಕ್ಕೆ ಸಂಬಂಧಿಸಿ ದಂತೆ ಭಾರತ ಮತ್ತು ಪಾಕಿಸ್ತಾನ ನಡುವೆ ಸೃಷ್ಟಿಯಾಗಿರುವ ಉದ್ವಿಗ್ನ ಸ್ಥಿತಿ ಮೇಲೆ ನಿಗಾ ವಹಿಸಿದ್ದು, ಪ್ರಾದೇಶಿಕ ಶಾಂತಿ ಮತ್ತು ಸ್ಥಿರತೆ ಕಾಯ್ದುಕೊಳ್ಳಲು
ಭಾರತ ರಚನಾತ್ಮಕ ಪಾತ್ರ ವಹಿಸಬೇಕು’ ಎಂಬ ಚೀನಾದ ವಿದೇಶಾಂಗ ಸಚಿವ ವಾಂಗ್‌ ಯಿ ಹೇಳಿಕೆಗೆ ಅವರು ಪ್ರತಿಕ್ರಿಯಿಸಿದ್ದಾರೆ.

ಕಾಶ್ಮೀರಕ್ಕೆ ನೀಡಿರುವ ವಿಶೇಷ ಸ್ಥಾನಮಾನವನ್ನು ರದ್ದುಗೊಳಿಸಿರುವ ಭಾರತದ ಕ್ರಮವನ್ನು ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಮುಂದಿಡಲು ಸಹಕಾರ ನೀಡಬೇಕೆಂದು ಕೋರಿ ಪಾಕಿಸ್ತಾನದ ವಿದೇಶಾಂಗ ಸಚಿವ ಶಾ ಮಹಮೂದ್‌ ಖುರೇಶಿ ಅವರು ಚೀನಾಕ್ಕೆ ಭೇಟಿ ನೀಡಿದ ಬಳಿಕ ಜೈಶಂಕರ್‌ ಕೂಡ ಭೇಟಿ
ನೀಡಿದ್ದಾರೆ.

‘ಜಾಗತಿಕ ರಾಜಕಾರಣದಲ್ಲಿ ಭಾರತ ಮತ್ತು ಚೀನಾ ನಡುವೆ ವಿಶೇಷ ಸ್ಥಾನವಿದೆ. ಉಭಯದೇಶಗಳ ನಡುವಿನ ಸಂಬಂಧ ಸ್ಥಿರತೆ ಕಾಯ್ದುಕೊಳ್ಳಬೇಕು’ ಎಂದೂ ಜೈಶಂಕರ್‌ ಹೇಳಿ ದ್ದಾರೆ.

ಸಹಿ: ನಾಲ್ಕು ಒಪ್ಪಂದಗಳಿಗೆ ಭಾರತ ಹಾಗೂ ಚೀನಾ ಸೋಮವಾರ ಸಹಿ ಹಾಕಿವೆ.

Post Comments (+)