ಮಂಗಳವಾರ, ಆಗಸ್ಟ್ 20, 2019
24 °C

ಗರಿಷ್ಠ ಮಟ್ಟ ತಲುಪಿದ ಕೆಆರ್‌ಎಸ್‌ ಜಲಾಶಯ

Published:
Updated:

ಮಂಡ್ಯ: ಕೊಡಗು ಜಿಲ್ಲೆಯಲ್ಲಿ ಉತ್ತಮ ಮಳೆಯಾಗುತ್ತಿರುವ ಕಾರಣ ಕೆಆರ್‌ಎಸ್‌ ಜಲಾಶಯ ಸಂಪೂರ್ಣವಾಗಿ ತುಂಬಿದೆ. ಗುರುವಾರ ಬೆಳಿಗ್ಗೆ ಜಲಾಶಯ ಗರಿಷ್ಠ 124.80 ಅಡಿ ತಲುಪಿದೆ.

ಕೊಡಗು ಜಿಲ್ಲೆಯ ಪ್ರವಾಹದಿಂದಾಗಿ ಜಲಾಶಯಕ್ಕೆ ಅಪಾರ ಪ್ರಮಾಣದ ನೀರು ಹರಿದು ಬಂದಿದೆ. ಹೇಮಾವತಿ ಜಲಾಶಯದಿಂದಲೂ ನೀರು ಹರಿಸಿದ ಕಾರಣ ಒಂದು ವಾರದಲ್ಲಿ ಜಲಾಶಯದ ಮಟ್ಟ 42 ಅಡಿ ಏರಿಕೆ ಕಂಡಿದೆ. ಗುರುವಾರ ಸಂಜೆ ಜಲಾಶಯ ಗರಿಷ್ಠ ಮಟ್ಟ ತಲುಪಿತ್ತು. 18,978 ಕ್ಯುಸೆಕ್‌ ಒಳಹರಿವು, 16,220 ಕ್ಯುಸೆಕ್‌ ಹೊರ ಹರಿವು ಇತ್ತು. ಕಳೆದ ವರ್ಷ ಜುಲೈ 20ರಂದು ಜಲಾಶಯ ಭರ್ತಿಯಾಗಿತ್ತು.

ಮುಂದಿನ ವಾರ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರು ಜಲಾಶಯಕ್ಕೆ ಬಾಗಿನ ಅರ್ಪಣೆ ಮಾಡಲಿದ್ದಾರೆ ಎಂದು ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳು ತಿಳಿಸಿದರು.

Post Comments (+)