ಮಂಗಳವಾರ, ನವೆಂಬರ್ 12, 2019
20 °C

ಪೌರತ್ವ ಪಟ್ಟಿ: ಭಾರತಕ್ಕೆ ವಿಶ್ವಸಂಸ್ಥೆ ಸಲಹೆ

Published:
Updated:

ಬರ್ಲಿನ್‌ (ಎಪಿ): ಅಸ್ಸಾಂ ರಾಜ್ಯದಲ್ಲಿ ನಾಗರಿಕ ಪಟ್ಟಿಯಿಂದ ಎರಡು ದಶಲಕ್ಷ ಜನರನ್ನು ಕೈಬಿಡುವ ಪ್ರಕ್ರಿಯೆಯಲ್ಲಿ ಯಾರೊಬ್ಬರು ನಿರಾಶ್ರಿತರಾಗದಂತೆ ಎಚ್ಚರಿಕೆ ವಹಿಸಬೇಕು ಎಂದು ವಿಶ್ವಸಂಸ್ಥೆಯ ನಿರಾಶ್ರಿತರ ವಿಭಾಗದ ಆಧಿಕಾರಿ ಭಾರತಕ್ಕೆ ಸಲಹೆ ಮಾಡಿದ್ದಾರೆ.

ವಿಶ್ವಸಂಸ್ಥೆಯ ಹೈಕಮೀಷನರ್ (ನಿರಾಶ್ರಿತರು) ಫಿಲಿಪ್ಪೊ ಗ್ರಾಂಡಿ ಅವರು ಈ ಕುರಿತು ಜೀನಿವಾದಲ್ಲಿ ಹೇಳಿಕೆ ನೀಡಿದ್ದಾರೆ.

ಸಮಸ್ಯೆಯನ್ನು ತೊಡೆದುಹಾಕುವ ಪ್ರಕ್ರಿಯೆಗೆ ದೊಡ್ಡ ಸಮೂಹವೊಂದು ರಾಷ್ಟ್ರೀಯತೆಯೇ ಇಲ್ಲದೇ ಇರುವುದು ದೊಡ್ಡ ಹೊಡೆತ ನೀಡಲಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ಅಸ್ಸಾಂ ಸರ್ಕಾರ ಶನಿವಾರ ಬಿಡುಗಡೆ ಮಾಡಿದ್ದ ರಾಷ್ಟ್ರೀಯ ಪೌರತ್ವ ಪಟ್ಟಿಯಿಂದ 19 ಲಕ್ಷ ಜನರನ್ನು ಕೈಬಿಡಲಾಗಿತ್ತು ಎಂಬುದನ್ನು ಇಲ್ಲಿ ಸ್ಮರಿಸಬಹುದು.

ಪ್ರತಿಕ್ರಿಯಿಸಿ (+)