ಬುಧವಾರ, ನವೆಂಬರ್ 13, 2019
17 °C

ರೌಡಿಶೀಟರ್‌ ಸಹಚರರ ಬಂಧನ

Published:
Updated:
Prajavani

ಬೆಂಗಳೂರು: ದರೋಡೆಗೆ ಸಂಚು ರೂಪಿಸುತ್ತಿದ್ದ ರೌಡಿ ಶೀಟರ್‌ ಉಲ್ಲಾಳ ಕಾರ್ತಿಕ್‌ನ ನಾಲ್ವರು ಸಹಚರರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

ಉಲ್ಲಾಳ ಉಪನಗರದ ನಿವಾಸಿಗಳಾದ ಜಗದೀಶ್‌ ಅಲಿಯಾಸ್ ಉಲ್ಲಾಳ ಜಗ್ಗ (30), ಸತ್ಯರಾಜ್‌ (24), ರವಿಕಿರಣ್‌ ಅಲಿಯಾಸ್‌ ಕಿರಣ್‌ (23), ಮಲ್ಲತ್ತಹಳ್ಳಿ ಬಾಲಾಜಿ ಲೇಔಟ್‌ ನಿವಾಸಿ ನಿಖಿಲ್‌ (21) ಬಂಧಿತರು. ಅವರಿಂದ ಲಾಂಗ್‌, ಕತ್ತಿ, ಚೂರಿ ಮತ್ತು ಖಾರದ ಪುಡಿ ಪೊಟ್ಟಣಗಳನ್ನು ವಶಪಡಿಸಿ
ಕೊಳ್ಳಲಾಗಿದೆ.

ಶನಿವಾರ ರಾತ್ರಿ 9.30 ಸುಮಾರಿಗೆ ಹನುಮಕ್ಕ ಹನುಮಂತಪ್ಪ ಲೇಔಟ್‌ನ ರೈಲ್ವೆ ಬಡಾವಣೆಯ ಎರಡನೇ ಕ್ರಾಸ್‌ನಲ್ಲಿ ದಾರಿಹೋಕರ ಮೇಲೆ ಮಾರಕಾಸ್ತ್ರ ಗಳಿಂದ ಹಲ್ಲೆ ನಡೆಸಿ, ದರೋಡೆ ಮಾಡಲು ಆರೋಪಿಗಳು ಸಂಚು
ರೂಪಿಸಿದ್ದ ಮಾಹಿತಿ ಪಡೆದು ಪೊಲೀಸರು ಕಾರ್ಯಾಚರಣೆ ನಡೆಸಿದ್ದರು.

ಆರೋಪಿಗಳ ಪೈಕಿ ಜಗದೀಶ, ಅತ್ಯಾಚಾರ ಮತ್ತು ಕೊಲೆ ಯತ್ನದ ಪ್ರಕರಣದ ಆರೋಪಿ. ಸತ್ಯರಾಜ್‌ ಎಂಬಾತ ಯೋಗಿ ಎಂಬವವನ ಕೊಲೆ ಪ್ರಕರಣದ ಆರೋಪಿ. ದರೋಡೆ ಯತ್ನ ಪ್ರಕರಣವೊಂದರಲ್ಲಿ
ರವಿಕಿರಣ್‌ ಆರೋಪಿ. ಎಲ್ಲರೂ ಉಲ್ಲಾಳ ಕಾರ್ತಿಕ್‌ನ ಸಹಚರರು ಎಂದು ಪೊಲೀಸರು ತಿಳಿಸಿದರು.

ಜ್ಞಾನ ಭಾರತಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರತಿಕ್ರಿಯಿಸಿ (+)