ಮಂಗಳವಾರ, ನವೆಂಬರ್ 19, 2019
22 °C

‘ಮಧ್ಯಂತರ ಚುನಾವಣೆ ಕನಸು’

Published:
Updated:

ಹಾವೇರಿ: ‘ಕಾಂಗ್ರೆಸ್ ಮುಖಂಡ ಸಿದ್ದರಾಮಯ್ಯ ಮಧ್ಯಂತರ ಚುನಾವಣೆಯ ಕನಸು ಕಾಣುತ್ತಿದ್ದಾರೆ. ಪಾಪ, ಅವರ ಪರಿಸ್ಥಿತಿಯೂ ಹಾಗೆಯೇ ಇದೆ. ಎಲ್ಲದಕ್ಕೂ ಮಧ್ಯಂತರ ಎನ್ನುವ ಅವರು ಅದೇ ಗುಂಗಿನಲ್ಲಿ ಮುಳುಗಿದ್ದಾರೆ’ ಎಂದು ಗೃಹಸಚಿವ ಬಸವರಾಜ ಬೊಮ್ಮಾಯಿ ಕುಟುಕಿದರು.

ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಬಿಜೆಪಿ ಪೂರ್ಣ ಅವಧಿಯ ಆಡಳಿತ ನೀಡಲಿದೆ. ಅದರಲ್ಲಿ ಯಾವುದೇ ಅನುಮಾನ ಬೇಡ. ಕಾಂಗ್ರೆಸ್ ನಾಯಕ ಡಿ.ಕೆ.ಶಿವಕುಮಾರ್ ಬಂಧನದ ವಿಚಾರದಲ್ಲಿ ಬಿಜೆಪಿಯ ಪಾತ್ರವಿಲ್ಲ’ ಎಂದರು.

‘ಶಿವಕುಮಾರ್ ಬಂಧನದಿಂದ ಕೆಲವು ಕಡೆ ಪರಿಸ್ಥಿತಿ ಬಿಗಡಾಯಿಸಿತ್ತು. ರಾಮನಗರ ಹಾಗೂ ಕನಕಪುರದಲ್ಲಿ ಬಿಗಿ ಬಂದೋಬಸ್ತ್ ಮಾಡಿದ್ದೇವೆ. ಸದ್ಯ ಪರಿಸ್ಥಿತಿ ಶಾಂತವಾಗಿದೆ’ ಎಂದರು.

 

ಪ್ರತಿಕ್ರಿಯಿಸಿ (+)