ಭಾನುವಾರ, ನವೆಂಬರ್ 17, 2019
25 °C

ತಲೆಮರೆಸಿಕೊಂಡ ಪಶ್ಚಿಮ ಬಂಗಾಳದ ಐಪಿಎಸ್ ಅಧಿಕಾರಿ ರಾಜೀವ್ ಕುಮಾರ್

Published:
Updated:

ಕೋಲ್ಕತ: ಶಾರದಾ ಚಿಟ್ ಫಂಡ್ ಹಗರಣಕ್ಕೆ ಸಂಬಂಧಿಸಿದಂತೆ ಕೋಲ್ಕತ ಮಾಜಿ ಪೊಲೀಸ್ ಆಯುಕ್ತ ರಾಜೀವ್ ಕುಮಾರ್ ಅವರು ಸಿಬಿಐ ತನಿಖೆಗೆ ಸಿಗದೆ ತಲೆಮರೆಸಿಕೊಂಡಿದ್ದಾರೆ.

ಶನಿವಾರ ಅವರ ಮನೆಗೆ ತೆರಳಿದ್ದ ಸಿಬಿಐ ತಂಡಕ್ಕೆ ರಾಜೀವ್ ಕುಮಾರ್ ಸಿಗಲಿಲ್ಲ. ಅಲ್ಲದೆ, ಮೊಬೈಲ್ ಕೂಡ ಸ್ವಿಚ್ ಆಫ್ ಆಗಿತ್ತು. ಇದರಿಂದಾಗಿ ಸಿಬಿಐ ಎಲ್ಲಾ ವಿಮಾನ ನಿಲ್ದಾಣಗಳಲ್ಲಿ ರಾಜೀವ್ ಕುಮಾರ್ ಕಂಡರೆ ವಿಷಯ ತಿಳಿಸುವಂತೆ ಪೊಲೀಸ್ ಇಲಾಖೆಗೆ ಮಾಹಿತಿ ನೀಡಿದೆ.

ಶಾರದಾ ಚಿಟ್ ಫಂಡ್ ಹಗರಣಕ್ಕೆ ಸಂಬಂಧಿಸಿದಂತೆ ಆರೋಪಿಯಾಗಿರುವ ತನಗೆ ಬಂಧನದಿಂದ ವಿನಾಯಿತಿ ನೀಡಬೇಕೆಂದು ಕೋರಿ ನ್ಯಾಯಾಲಯಕ್ಕೆ ಮೊರೆ ಹೋಗಿದ್ದರು. ಆದರೆ, ನ್ಯಾಯಾಲಯ ರಾಜೀವ್ ಕುಮಾರ್ ಅವರ ಅರ್ಜಿಯನ್ನು ತಳ್ಳಿಹಾಕಿತು.

ಆ ನಂತರ ಕಾರ್ಯಾಚರಣೆಗೆ ಇಳಿದ ಸಿಬಿಐಗೆ ರಾಜೀವ್ ಕುಮಾರ್ ಇನ್ನೂ ಸಿಕ್ಕಿಲ್ಲ. 2014ರಲ್ಲಿ ನಡೆದ ₹ 2, 460 ಕೋಟಿ ಶಾರದಾ ಚಿಟ್ ಫಂಡ್ ಹಗರಣ ನಡೆದಾಗ ರಾಜೀವ್ ಕುಮಾರ್ ವಿಶೇಷ ತನಿಖಾ ತಂಡದ ನೇತೃತ್ವ ವಹಿಸಿದ್ದರು. ಆ ಸಮಯದಲ್ಲಿ ದಾಖಲೆಗಳನ್ನು ತಿದ್ದಿದ ಆರೋಪ ಎದುರಿಸುತ್ತಿದ್ದಾರೆ.

ರಾಜೀವ್ ಕುಮಾರ್ ಕೊಲ್ಕತಾದ ಪೊಲೀಸ್ ಆಯುಕ್ತರಾಗಿದ್ದ ಸಮಯದಲ್ಲಿ ಸಿಬಿಐ ಅವರನ್ನು ವಿಚಾರಣೆಗೆ ಕರೆದೊಯ್ಯಲು ಹೋದಾಗ ಪಶ್ಚಿಮ ಬಂಗಾಲದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅಡ್ಡಿಪಡಿಸಿದ್ದರು.

ಇದನ್ನೂ ಓದಿ...ಕೋಲ್ಕತ್ತ ಪೊಲೀಸ್ ಆಯುಕ್ತರನ್ನು ವಿಚಾರಣೆ ಮಾಡಬಹುದು, ಬಂಧಿಸುವಂತಿಲ್ಲ: ಸುಪ್ರೀಂ

ಪ್ರತಿಕ್ರಿಯಿಸಿ (+)