ಗುರುವಾರ , ಅಕ್ಟೋಬರ್ 17, 2019
22 °C
ಪದವಿಪೂರ್ವ ಕಾಲೇಜುಗಳ ರಾಜ್ಯ ಮಟ್ಟದ ಟೇಬಲ್ ಟೆನಿಸ್ ಟೂರ್ನಿ

ಟೇಬಲ್ ಟೆನಿಸ್ ಟೂರ್ನಿ: ಬೆಂಗಳೂರು ದಕ್ಷಿಣ ಚಾಂಪಿಯನ್‌

Published:
Updated:
Prajavani

ಬೀದರ್‌: ಬೆಂಗಳೂರು ದಕ್ಷಿಣ ಜಿಲ್ಲಾ ತಂಡಗಳು ಕ್ರಮವಾಗಿ ಬಾಲಕ ಮತ್ತು ಬಾಲಕಿಯರ ವಿಭಾಗದಲ್ಲಿ ಶನಿವಾರ ಇಲ್ಲಿ ಮುಕ್ತಾಯವಾದ ಪದವಿಪೂರ್ವ ಕಾಲೇಜುಗಳ ರಾಜ್ಯ ಮಟ್ಟದ ಟೇಬಲ್ ಟೆನಿಸ್ ಟೂರ್ನಿಯಲ್ಲಿ ಚಾಂಪಿಯನ್‌ ಆಗಿ ಹೊರಹೊಮ್ಮಿವೆ.

ಬಾಲಕರ ವಿಭಾಗದಲ್ಲಿ ಬೆಂಗಳೂರು ದಕ್ಷಿಣ ತಂಡ 3-0 ರಿಂದ ಉಡುಪಿ ತಂಡವನ್ನು ಹಾಗೂ ಬಾಲಕಿಯರ ವಿಭಾಗದಲ್ಲಿ ಬೆಂಗಳೂರು ದಕ್ಷಿಣ ತಂಡ 3-0 ರಿಂದ ಬೆಂಗಳೂರು ಉತ್ತರ ವಿರುದ್ಧ ಜಯ ಸಾಧಿಸಿತು.

ಬಾಲಕರ ಸಿಂಗಲ್ಸ್‌ನಲ್ಲಿ ಬೆಂಗಳೂರು ದಕ್ಷಿಣ ವಿಭಾಗದ ವಿವಿ ಪುರ ಜೈನ್‌ ಕಾಲೇಜಿನ ಸಂಜಯ್ 3–2ರಲ್ಲಿ ಉಡುಪಿಯ ಮೇಘನ್‌ ಅವರನ್ನು ಪರಾಭವಗೊಳಿಸಿದರು. ಜೈನ್‌ ಕಾಲೇಜಿನ ರಿಥಿನ್‌ 3–0 ರಲ್ಲಿ ಉಡುಪಿಯ ಸೃಜನ್‌ ವಿರುದ್ದ ಗೆಲುವು ಪಡೆದರು. ಬೆಂಗಳೂರಿನ ಸಾಧನಾ ಕಾಲೇಜಿನ ರಕ್ಷನ್‌ 3–0 ರಲ್ಲಿ ಉಡುಪಿಯ ರಿತೇಶ ಅವರನ್ನು ಮಣಿಸಿದರು.

ಬಾಲಕಿಯರ ಸಿಂಗಲ್ಸ್‌ನಲ್ಲಿ ಬೆಂಗಳೂರು ದಕ್ಷಿಣದ ಜೈನ್‌ ಕಾಲೇಜಿನ ಆದಿತಿ ಜೋಶಿ 3–0ರಲ್ಲಿ ಬೆಂಗಳೂರು ಉತ್ತರ ಜಿಲ್ಲೆಯ ರಾಜಾಜಿನಗರದ ಬಸವೇಶ್ವರ ಪದವಿಪೂರ್ವ ಕಾಲೇಜಿನ ಜಾಹ್ನವಿ ಬಿಕ್ಕಣ್ಣವರ ಅವರ ವಿರುದ್ಧ ಗೆದ್ದರು.  ಬೆಂಗಳೂರು ದಕ್ಷಿಣದ ಕಲ್ಯಾಣಿ 3–2ರಲ್ಲಿ ಬೆಂಗಳೂರು ಉತ್ತರದ ಎಂಇಎಸ್‌ ಕಿಶೋರ ಕೇಂದ್ರದ ಶ್ರುತಿ ಅವರನ್ನು ಸೋಲಿಸಿದರು.

ಬೆಂಗಳೂರು ಉತ್ತರದ ಜೈನ್‌ ಕಾಲೇಜಿನ ದೃಷ್ಟಿ 3–0 ರಲ್ಲಿ ಬೆಂಗಳೂರು ಉತ್ತರದ ಅನನ್ಯ ವಿರುದ್ಧ ಜಯ ಸಾಧಿಸಿದರು.

Post Comments (+)