ಬುಧವಾರ, ಅಕ್ಟೋಬರ್ 16, 2019
21 °C

ಸೂರ್ಯವಂಶಿಯಲ್ಲಿ ಸ್ಟಾರ್‌ಗಳ ಸಮಾಗಮ

Published:
Updated:
Prajavani

ಅಕ್ಷಯ್‌ಕುಮಾರ್ ಅಭಿನಯದ ‘ಸೂರ್ಯವಂಶಿ’ ಸಿನಿಮಾದ ಕ್ಲೈಮ್ಯಾಕ್ಸ್‌ ದೃಶ್ಯವನ್ನು ಇತ್ತೀಚೆಗಷ್ಟೇ ಚಿತ್ರೀಕರಿಸಲಾಗಿದೆ. ಈ ದೃಶ್ಯದಲ್ಲಿ ಅಕ್ಷಯ್‌ ಜೊತೆಗೆ ಅಜಯ್‌ ದೇವಗನ್‌ ಹಾಗೂ ರಣವೀರ್ ಸಿಂಗ್ ಕೂಡ ಅಭಿನಯಿಸಿದ್ದಾರೆ.

‘ನಿರ್ದೇಶಕ ರೋಹಿತ್ ಶೆಟ್ಟಿ ಅವರ ಕನಸಿನ ದೃಶ್ಯ ಇದಾಗಿತ್ತು. ಮೂವರು ಸ್ಟಾರ್‌ ನಟರ ಸಮಾಗಮಕ್ಕಾಗಿ ಹೈದರಾಬಾದ್ ಸ್ಟುಡಿಯೊ ಸಜ್ಜಾಗಿತ್ತು. ಅಜಯ್‌, ರಣವೀರ್ ಹಾಗೂ ಅಕ್ಷಯ್‌ ಅವರನ್ನು ಒಳಗೊಂಡ ಈ ದೃಶ್ಯ ಪ್ರೇಕ್ಷಕರ ಮನಸ್ಸು ಗೆಲ್ಲಲಿದೆ’ ಎಂದು ಸಿನಿ ತಂಡ ಹೇಳಿಕೊಂಡಿದೆ.

ಕರಣ್‌ ಜೋಹರ್ ನಿರ್ಮಾಣದ ಈ ಸಿನಿಮಾದ ಕ್ಲೈಮ್ಯಾಕ್ಸ್ ಸನ್ನಿವೇಶ ಸಂಪೂರ್ಣವಾಗಿ ಆ್ಯಕ್ಷನ್‌ ಹಾಗೂ ಥ್ರಿಲ್ಲರ್‌ ದೃಶ್ಯಗಳಿಂದ ಕೂಡಿದೆ. ಅಜಯ್‌ ಹಾಗೂ ರಣವೀರ್‌ ಅತಿಥಿ ಪಾತ್ರ ಮಾಡಿದ್ದಾರೆ. ಮೂವರು ಪೊಲೀಸ್ ಅಧಿಕಾರಿಗಳು ಸೇರಿಕೊಂಡು ಫೈಟ್ ಮಾಡುವ ದೃಶ್ಯ ಇದಾಗಿದೆ ಎಂದು ಸಿನಿ ತಂಡ ವಿವರಿಸಿದೆ. ‘ಸಿಂಬಾ’ ಸಿನಿಮಾದ ದೃಶ್ಯಗಳಿಂದ ಇದು ಪ್ರೇರಿತವಾಗಿದೆ ಎಂದು ನಿರ್ದೇಶಕ ರೋಹಿತ್ ಹೇಳಿದ್ದಾರೆ.

2020ರ ಮಾರ್ಚ್ ತಿಂಗಳಿನಲ್ಲಿ ಸಿನಿಮಾ ಬಿಡುಗಡೆಯಾಗಲಿದೆ. ಅಕ್ಷಯ್‌ ಜೊತೆಗೆ ಕತ್ರಿನಾ ಕೈಫ್‌ ನಟಿಸಿದ್ದಾರೆ.

ಇದನ್ನೂ ಓದಿ: 2020 ಬಾಲಿವುಡ್ ನಟ ಅಕ್ಷಯ್ ಕುಮಾರ್ ಅದೃಷ್ಟದ ವರ್ಷ

Post Comments (+)