ಭಾನುವಾರ, ನವೆಂಬರ್ 17, 2019
21 °C

ಬಿಎಸ್‌ಎಫ್‌ ಜತೆ ಸಭೆ: ಸ್ಪ‍ಂದಿಸದ ಪಾಕ್‌

Published:
Updated:

ನವದೆಹಲಿ: ಗಡಿ ಭದ್ರತಾ ಪಡೆ(ಬಿಎಸ್‌ಎಫ್‌) ಮತ್ತು ಪಾಕಿಸ್ತಾನ ರೇಂಜರ್‌ಗಳ ನಡುವೆ ದ್ವೈವಾರ್ಷಿಕ ಸಭೆ ನಡೆಸುವ ಪ್ರಸ್ತಾವನೆಗೆ ಯಾವುದೇ ಪ್ರತಿಕ್ರಿಯೆ ಬಂದಿಲ್ಲ ಎಂದು ಭಾರತ ತಿಳಿಸಿದೆ.

ಇದೇ ತಿಂಗಳು ಬಿಎಸ್‌ಎಫ್‌ ಮತ್ತು ಪಾಕ್‌ ರೇಂಜರ್‌ಗಳ ಮಹಾ ನಿರ್ದೇಶಕರ ಸಭೆ ನಡೆಸಲು ಉದ್ದೇಶಿಸಲಾಗಿತ್ತು. ಉಭಯ ದೇಶಗಳ ಸಂಬಂಧಗಳು ಹದಗೆಟ್ಟ ಸಂದರ್ಭದಲ್ಲಿಯೂ ಮಹಾನಿರ್ದೇಶಕರ ಸಭೆಗಳು ನಡೆದಿದ್ದವು. 

ಈ ಬಾರಿ ಭಾರತವೇ ಅಕ್ಟೋಬರ್‌ನಲ್ಲಿ ಸಭೆ ನಡೆಸುವ ಪ್ರಸ್ತಾವವನ್ನು ಮುಂದಿಟ್ಟಿತ್ತು. ಆದರೆ, ಇದುವರೆಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಇದು ಏಕಪಕ್ಷೀಯವಾಗಿ ಪಾಕಿಸ್ತಾನವು ಉನ್ನತ ಅಧಿಕಾರಿಗಳ ಮಟ್ಟದ ಸಂಪರ್ಕವನ್ನು ಕಡಿತಗೊಳಿಸಿರುವುದನ್ನು ದೃಢಪಡಿಸುತ್ತದೆ ಎಂದು ಮೂಲಗಳು ತಿಳಿಸಿವೆ.

 

 

ಪ್ರತಿಕ್ರಿಯಿಸಿ (+)