ಗುರುವಾರ , ನವೆಂಬರ್ 21, 2019
20 °C

ಗುಲಾಂ ಬೋದಿಗೆ ಜೈಲು ಶಿಕ್ಷೆ

Published:
Updated:

ಜೋಹಾನ್ಸ್‌ಬರ್ಗ್‌, ದಕ್ಷಿಣ ಆಫ್ರಿಕಾ (ಎಎಫ್‌ಪಿ): ದಕ್ಷಿಣ ಆಫ್ರಿಕಾ ಕ್ರಿಕೆಟಿಗ ಗುಲಾಂ ಬೋದಿ ಭ್ರಷ್ಟಾಚಾರ ಆರೋಪದಡಿ ಶುಕ್ರವಾರ ಐದು ವರ್ಷ ಜೈಲು ಶಿಕ್ಷೆಗೆ ಒಳಗಾಗಿದ್ದಾರೆ.

2015ರಲ್ಲಿ ಸ್ಥಳೀಯ ಟ್ವೆಂಟಿ–20 ಪಂದ್ಯಗಳನ್ನು ಫಿಕ್ಸ್‌ ಮಾಡಲು ಯತ್ನಿಸಿದ ಆರೋಪದ ಮೇಲೆ ದಕ್ಷಿಣ ಆಫ್ರಿಕಾ ಕ್ರಿಕೆಟ್‌ ಮಂಡಳಿಯು (ಸಿಎಸ್‌ಎ) ಬೋದಿಯ ಮೇಲೆ 20 ವರ್ಷ ನಿಷೇಧ ಹೇರಿದೆ.

ಬೋದಿ ಯೋಜಿಸಿದಂತೆ ಯಾವುದೇ ಪಂದ್ಯಗಳು ಫಿಕ್ಸ್ ಆಗಿರಲಿಲ್ಲ ಎಂದು ಸಿಎಸ್‌ಎ ಹೇಳಿದೆ. ತನಗೆ ವಿಧಿಸಿದ ಶಿಕ್ಷೆಯ ವಿರುದ್ಧ ಬೋದಿ ಮೇಲ್ಮನವಿ ಸಲ್ಲಿಸಲಿದ್ದಾರೆ.

ಪ್ರತಿಕ್ರಿಯಿಸಿ (+)