ಅನ್ಯ ಗ್ರಹಗಳತ್ತ ಮನುಷ್ಯರ ಚಿತ್ತ

7

ಅನ್ಯ ಗ್ರಹಗಳತ್ತ ಮನುಷ್ಯರ ಚಿತ್ತ

Published:
Updated:

ಗುಲ್ಬರ್ಗ: ಬೇರೆ ಗ್ರಹಗಳಿಗೆ ಮನುಷ್ಯನ ವಾಸಸ್ಥಾನವನ್ನು ವರ್ಗಾಯಿಸುವ ಬಗ್ಗೆ ಬಾಹ್ಯಾಕಾಶ ಸಂಶೋಧನೆಗಳು ನಡೆಯುತ್ತಿವೆ ಎಂದು ಬೆಂಗಳೂರಿನ ಇಸ್ರೊ ಉಪಗ್ರಹ ಕೇಂದ್ರದ ನಿರ್ದೇಶಕ ಡಾ.ಟಿ.ಕೆ. ಅಲೆಕ್ಸ್ ಹೇಳಿದರು. ಗುಲ್ಬರ್ಗ ವಿಶ್ವವಿದ್ಯಾಲಯದ 29ನೇ ಘಟಿಕೋತ್ಸವದಲ್ಲಿ ಅವರು ಮಾತನಾಡಿದರು. ಚಂದ್ರನ ಮೇಲೆ ನೀರಿನ ಶೋಧ ಮತ್ತು ಮುಂದಿನ ಶತಮಾನಗಳಲ್ಲಿ ಇತರ ಗ್ರಹ, ಕ್ಷುದ್ರಗ್ರಹ, ಧೂಮಕೇತುಗಳು ಭೂಮಿ ಮೆಲೆ ದಾಳಿ ಮಾಡಬಹುದು ಎಂಬ ವಿಚಾರಗಳು ವಾಸಸ್ಥಾನ ಬದಲಾವಣೆಗೆ ಪ್ರೇರಣೆಯಾಗಿವೆ.ಚಂದ್ರಗ್ರಹದ ಮೇಲಿರುವ ಮೂರು ಬಗೆಯ ಮಹತ್ವದ ಸ್ಥಳಗಳ ನಕ್ಷೆಗಳನ್ನು ಗುರುತಿಸಿದ್ದು,  ಚಂದ್ರಗ್ರಹದಲ್ಲಿ ಭಾರತದ ತ್ರಿವರ್ಣ ಧ್ವಜವನ್ನು ಸ್ಥಾಪಿಸಿದ್ದು ಹಾಗೂ ಚಂದ್ರನ ಮೇಲೆ ನೀರಿನ ಶೋಧ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ ಶತಮಾನದ ದೊಡ್ಡ ಸಂಶೋಧನೆ ಮತ್ತು ಸಾಧನೆ ಎಂದು ಬಣ್ಣಿಸಿದರು. ನಾವು ಸದ್ಯ ತಿಳಿದಂತೆ, ಸೂರ್ಯಗ್ರಹವನ್ನು ಹೊರತು ಪಡಿಸಿ ಇನ್ನಿತರ ಗ್ರಹಗಳ ಮೇಲೆ ಮಾನವನು ಬದುಕುವ ಬಗ್ಗೆ ಸಂಶೋಧನೆಗಳಿಗೆ ಚಂದ್ರನ ಮೇಲಿನ ನೀರಿನ ಪತ್ತೆಯು ಪ್ರೇರಣೆ ನೀಡಿದೆ. ಇದು ಮಾನವ ಜೀವನದ ವ್ಯಾಖ್ಯಾನಕ್ಕೆ ಬರೆದ ನೂತನ ವಿಚಾರ ಎಂದು ಶ್ಲಾಘಿಸಿದರು. ಅಪಾಯ: ಪ್ರಥ್ವಿಯ ಮೇಲಿನ ಸಂಭವನೀಯ ದಾಳಿ ಕುರಿತ ಸಂಶೋಧನೆಯನ್ನು ವಿಜ್ಞಾನಿಗಳು ಕೈಗೆತ್ತಿಕೊಂಡಿದ್ದಾರೆ. ಶಕ್ತಿಯುತ ಲೇಸರ್ ಕಿರಣಗಳನ್ನು ಬಳಸಿ, ವಿಧ್ವಂಸಕ ಉಪಗ್ರಹಗಳನ್ನು ನಾಶಪಡಿಸಲು ಯತ್ನಿಸುತ್ತಿದ್ದಾರೆ. ಹೀಗಾಗಿ ಮಾನವ ಕುಲಕೋಟಿಯು ಪೃಥ್ವಿಯನ್ನು ಬಿಟ್ಟು ಬೇರೆಡೆ ಬದುಕುವ ಬಗ್ಗೆ ಗಂಭೀರವಾದ ಪ್ರಶ್ನೆಯನ್ನು ನಮ್ಮಮುಂದಿಟ್ಟಿದೆ ಎಂದರು.ವಿದ್ಯಾರ್ಥಿಗಳಿಗೆ ಕಿವಿಮಾತು: ಶಿಕ್ಷಣವು ನಿರಂತರ ಪ್ರಕ್ರಿಯೆ. ಸಮಾಜದ ಒಳಿತಿಗೆ ಕಲಿಕಾ ಸಾಮರ್ಥ್ಯ ವಿನಿಯೋಗಿಸಿದಾಗ ಯಶಸ್ಸು ದೊರಕುತ್ತದೆ. ಅದಕ್ಕಾಗಿ ದೊಡ್ಡ ಕನಸು, ವಿಷಯ ಕುರಿತು ಆಕರ್ಷಣೆ, ಸಮಯ ಪ್ರಜ್ಞೆ, ಸ್ಪಂದನೆ, ಗುರಿ ಲಕ್ಷ್ಯ ಇರಬೇಕು ಎಂದರು.ಇಂದಿನ ವಿದ್ಯಾರ್ಥಿಗಳನ್ನು ಸುದೈವಿಗಳು ಎಂದ ಅವರು, ದೇಶದ ಆರ್ಥಿಕ ಪ್ರಗತಿ ಸಕಾರಾತ್ಮಕವಾಗಿ ಬೆಳವಣಿಗೆ ಆಗುವ ಹಂತದಲ್ಲಿ ನೀವಿದ್ದೀರಿ. ನಮ್ಮ ಕಾಲದಲ್ಲಿ ಪದವಿ- ಪದಕ ಪಡೆದರೂ ಉದ್ಯೋಗ ಎಂಬುದು ಗಗನಕುಸುಮಾಗಿತ್ತು ಎಂದು ನೆನಪಿಸಿಕೊಂಡರು. ವೈದ್ಯಕೀಯ ಮತ್ತು ಎಂಜಿನಿಯರಿಂಗ್ ಜ್ಞಾನಗಳು ಕಳೆದ ಶತಮಾನದ ಬೇಡಿಕೆಯ ವಿಷಯಗಳು. ಆದರೆ ಇಂದು ಅರ್ಥಶಾಸ್ತ್ರ, ಕಾನೂನು, ನಿರ್ವಹಣೆ, ವಸ್ತ್ರ ವಿನ್ಯಾಸ, ಆದರಾತಿಥ್ಯ, ಪರಿಸರ ವಿಜ್ಞಾನ, ಸೂಕ್ಷ್ಮಜೀವಶಾಸ್ತ್ರ, ನ್ಯಾನೊ ತಂತ್ರಜ್ಞಾನ ಮುಂತಾದವುಗಳು ಮುಂಚೂಣಿಯಲ್ಲಿವೆ ಎಂದರು.ಜ್ಞಾನವೇ ಅಭಿವೃದ್ಧಿ:ಇವತ್ತಿನ ಜಗತ್ತು ಜ್ಞಾನವನ್ನು ಬಯಸುತ್ತದೆ. ಜ್ಞಾನವು ಸಂಪತ್ತನ್ನು ಸೃಷ್ಟಿಸುತ್ತದೆ. ಸಂಪತ್ತು ಅಭಿವೃದ್ಧಿಯನ್ನು ಸೃಷ್ಟಿಸುತ್ತದೆ. ಜ್ಞಾನವನ್ನು ಗಳಿಸುವ ನಿಮ್ಮ ಪ್ರಕ್ರಿಯೆಯು ಅಭಿವೃದ್ಧಿಗೆ ಕಾರಣವಾಗುತ್ತದೆ ಎಂದರು. ನಾವು ಸಂಕೋಚ ಮತ್ತು ಕೀಳರಿಮೆಯ ಸಂಕೀರ್ಣತೆಗಳಿಂದ ಹೊರಬರಬೇಕು. ಆಗ ಹೊಸತು ಸಾಧಿಸಲು ಸಾಧ್ಯ. ಅನೇಕ ಕ್ಷೇತ್ರಗಳಲ್ಲಿ ಪ್ರಗತಿ ಕುಂಠಿತವಾಗಿರುವುದು ಹಣ ಅಥವಾ ಸಂಪನ್ಮೂಲಗಳ ಕೊರತೆಯಿಂದಲ್ಲ. ಕಲ್ಪನೆ ಮತ್ತು ಸಾಧಿಸುವ ಇಚ್ಚೆಯ ಕೊರತೆಯಿಂದ. ಕೆಲಸದಲ್ಲಿ ನೈತಿಕ ಮೌಲ್ಯ, ನೀತಿ, ಸಾಮಾಜಿಕ ದೃಷ್ಟಿಕೋನ ಇಟ್ಟುಕೊಳ್ಳಿ. ತ್ಯಾಗವಿಲ್ಲದೇ ಸಾಧನೆ ಅಸಾಧ್ಯ ಎಂದರು.ಇಸ್ರೋ ಸಂಸ್ಥೆಯು ಸ್ಥಳೀಯವಾಗಿ ಅಭಿವೃದ್ಧಿಪಡಿಸಿದ ತಂತ್ರಜ್ಞಾನಗಳನ್ನು ಬಳಸಿಕೊಂಡು ಐವತ್ತಕ್ಕೂ ಹೆಚ್ಚಿನ ಉಪಗ್ರಹಗಳನ್ನು ಕಕ್ಷೆಯಯಲ್ಲಿ ಸ್ಥಾಪಿಸಿದೆ. ಎರಡು ಡಜನ್ ಹೊರದೇಶಗಳ ಉಪಗ್ರಹಗಳನ್ನು ನಮ್ಮ ವಾಹಕಗಳಿಂದ ಹಾರಿಸಲಾಗಿದೆ. ಸಮಾಜದ ಒಳಿತಿಗಾಗಿ ಬಾಹ್ಯಾಕಾಶ ತಂತ್ರಜ್ಞಾನವನ್ನು ಬಳಸುವುದರಲ್ಲಿ ಭಾರತವು ಪ್ರಪಂಚಕ್ಕೆ ಮಾದರಿ ರಾಷ್ಟ್ರವಾಗಿದೆ ಎಂದರು.ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಸಂಶೋಧನೆಯ ‘ಉಪಗ್ರಹ’ದ ಪರಿಣಾಮ ಟಿವಿ ಚಾನೆಲ್, ಮೊಬೈಲ್ ಸಂಪರ್ಕಗಳು, ಎಟಿಎಂ ಸೌಲಭ್ಯಗಳು, ಕೃಷಿ-ಔಷಧಿ-ಮತ್ಸ್ಯ ಮಾಹಿತಿಗಳು, ಪ್ರವಾಹ, ಬರಗಾಲ, ಭೂಕಂಪ ಮುಂತಾದ ಆಪತ್ತಿನಲ್ಲಿ ಸಿಲುಕಿಕೊಂಡ ಜನತೆಗೆ ತ್ವರಿತವಾಗಿ ಸಹಾಯ ಸಲಿಸ್ಲುತ್ತವೆ. ಬಾಹ್ಯಾಕಾಶ ತಂತ್ರಜ್ಞಾನವು ಉನ್ನತ ಜ್ಞಾನಶಾಖೆಯಷ್ಟೇ ಆಗಿರದೆ ಅದು ಪ್ರತಿಯೊಬ್ಬರೂ ದಿನನಿತ್ಯ ಬಳಸುವ ವಸ್ತುವಾಗಿದೆ ಎಂದು ವಿವರಿಸಿದರು. 

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry