ಮಂಗಳವಾರ, ಜನವರಿ 28, 2020
29 °C

ಆರೋಗ್ಯ ಸಿಬ್ಬಂದಿಗೆ ಬಾಕಿವೇತನ ನೀಡಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗುಲ್ಬರ್ಗ: ಜಿಲ್ಲೆಯ ತಾಲ್ಲೂಕು ಸಾರ್ವಜನಿಕ ಆಸ್ಪತ್ರೆಗಳು ಹಾಗೂ ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ ಹೊರಗುತ್ತಿಗೆ ಆಧಾರದ ಮೇಲೆ ಸೇವೆ ಸಲ್ಲಿಸುತ್ತಿರುವ ನಾನ್‌ಕ್ಲಿನಿಕ್ ನೌಕರರಿಗೆ ಆರು ತಿಂಗಳಿನಿಂದ ಸಂಬಳ ನೀಡದಿರುವುದರಿಂದ ಸಂಕಷ್ಟ ಉಂಟಾಗಿದ್ದು, ಕೂಡಲೇ ಬಾಕಿವೇತನ ಪಾವತಿಗೆ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಕರ್ನಾಟಕ ರಾಜ್ಯ ಸಂಯುಕ್ತ ಆರೋಗ್ಯ ಇಲಾಖೆ ಸಿ ಆ್ಯಂಡ್ ಡಿ ದರ್ಜೆ ಗುತ್ತಿಗೆ ನೌಕರರ ಸಂಘದ ಸದಸ್ಯರು ಗುಲ್ಬರ್ಗದ ಮಿನಿವಿಧಾನ ಸೌಧದ ಎದುರು ಶುಕ್ರವಾರ ಧರಣಿ ನಡೆಸಿದರು.ಗುತ್ತಿಗೆದಾರರು ಆರು ತಿಂಗಳಿನಿಂದ ಸಂಬಳ ನೀಡದೆ ಟೆಂಡರ್ ನಿಬಂಧನೆಯನ್ನು ಉಲ್ಲಂಘಿಸಿದ್ದಾರೆ. ಇಲಾಖೆಯು ನಿಗದಿ ಮಾಡಿರುವ ಸಂಬಳಕ್ಕಿಂತಲೂ ಕಡಿಮೆ ಪ್ರಮಾಣ ರೂ. 1500 ಮೂಲವೇತನ ಎಂದು ನೀಡಲಾಗುತ್ತಿದೆ. ಜೀವನ ನಡೆಸುವುದು ದುಸ್ತರವಾಗಿದೆ. ಕನಿಷ್ಠ ವೇತನದಿಂದಲೂ ನೌಕರರು ವಂಚಿತರಾಗುತ್ತಿದ್ದಾರೆ ಎಂದು ತಿಳಿಸಿದರು.ಸಾಮಾಜಿಕ ಭದ್ರತೆ ಒದಗಿಸಲು ಭವಿಷ್ಯ ನಿಧಿಯನ್ನು ಸಂಗಹಿಸಲಾಗುತ್ತಿದೆ. ಇದರಲ್ಲಿ ಯಾವುದೇ ಖಚಿತತೆ ಕಾಣುತ್ತಿಲ್ಲ. ಕಾರ್ಮಿಕ ಕಾಯ್ದೆ ಅನುಗುಣವಾಗಿ ಕಾರ್ಮಿಕರಿಗೆ ಯಾವುದೇ ಸಮವಸ್ತ್ರ ಅಥವಾ ರಜೆ ನೀಡಲಾಗಿಲ್ಲ. ಗುತ್ತಿಗೆದಾರರನ್ನು ರದ್ದುಗೊಳಿಸಿ, ಇಲಾಖೆ ಮೂಲಕವೇ ಕನಿಷ್ಠ ವೇತನ ಪಾವತಿಸಬೇಕು ಎಂದು ಧರಣಿ ನಿರತರು ಕೇಳಿಕೊಂಡಿದ್ದಾರೆ. ಸಂಘದ ಜಿಲ್ಲಾ ಸಂಚಾಲಕ ಸಂತೋಷಕುಮಾರ  ಹಿರವೆ ಮತ್ತಿತರರು ಇದ್ದರು.

ಪ್ರತಿಕ್ರಿಯಿಸಿ (+)