ಶುಕ್ರವಾರ, ಜನವರಿ 24, 2020
28 °C

ಹುಚ್ಚು ತೋಳ ದಾಳಿ: ಸಾವಿನ ಸಂಖ್ಯೆ 2ಕ್ಕೆ ಏರಿಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಿಂಚೋಳಿ: ತಾಲ್ಲೂಕಿನ ಇಂದ್ರಪಾಡ್ ಹೊಸಳ್ಳಿ ಗ್ರಾಮದಲ್ಲಿ ಡಿ.30ರಂದು ಹುಚ್ಚುತೋಳ ಮಾಡಿದಾಗ ಗಾಯಗೊಂಡಿದ್ದ ಮುಷ್ತಾಕ್ ಅಹ್ಮದ್(38) ಮಂಗಳವಾರ ಗುಲ್ಬರ್ಗದ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ ಎಂದು ಸುಲೇಪೇಟ ಪೊಲೀಸ್ ಠಾಣೆಯ ಮೂಲಗಳು ತಿಳಿಸಿವೆ.

ಗುಲ್ಬರ್ಗದ ಬುಲಂದ್ ದರ್ವಾಜಾ ಕಾಲೋನಿಯ ನಿವಾಸಿ ದಸ್ತಗೀರ್ ಎಂಬುವವರ ಮಗನಾದ ಮುಷ್ತಾಕ್ ಇಂದ್ರಪಾಡ್ ಹೊಸಳ್ಳಿಯಲ್ಲಿ ಕಟ್ಟಡ ಕಾಮಗಾರಿ ನಡೆಸುತ್ತಿದ್ದಾಗ ಏಕಾ ಏಕಿ ಬಂದೆರಗಿದ ಹುಚ್ಚು ತೋಳ ದಾಳಿ ಮಾಡಿ ಕಚ್ಚಿ ಗಾಯಗೊಳಿಸಿತ್ತು.

ಅಂದಿನಿಂದಲೂ ಚಿಕಿತ್ಸೆ ಪಡೆಯುತ್ತಿದ್ದರೂ ಫಲಕಾರಿಯಾಗದೇ ಮಂಗಳವಾರ ಸಾವನ್ನಪ್ಪಿದ್ದಾರೆ. ಈ ಮೂಲಕ ತಾಲ್ಲೂಕಿನಲ್ಲಿ ಹುಚ್ಚು ತೋಳ ಕಚ್ಚಿ ಒಂದೇ ದಿನ 9 ಜನ ಗಾಯಗೊಂಡು ಒಬ್ಬರು ಸಾವನ್ನಪ್ಪಿದ ಬೆನ್ನಲ್ಲೆ ಮತ್ತೊಂದು ಸಾವು ಸಂಭವಿಸಿ ಸತ್ತವರ ಸಂಖ್ಯೆ ಎರಡಕ್ಕೇರಿದೆ.ಮೃತನಿಗೆ ಇಬ್ಬರು ಗಂಡು, ಇಬ್ಬರು ಹೆಣ್ಣು ಮಕ್ಕಳು ಹಾಗೂ ಪತ್ನಿ, ಹಾಗೂ ತಾಯಿಯನ್ನು ಹೊಂದಿದ್ದರು. ಸುಲೇಪೇಟ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಸಬ್ ಇನ್ಸ್‌ಪೆಕ್ಟರ್ ಡಿ.ಬಿ ಕಟ್ಟೀಮನಿ ತಿಳಿಸಿದರು.     

ಪ್ರತಿಕ್ರಿಯಿಸಿ (+)