ವೇತನ ತಾರತಮ್ಯ: ಕಾರ್ಮಿಕರ ಪ್ರತಿಭಟನೆ

7

ವೇತನ ತಾರತಮ್ಯ: ಕಾರ್ಮಿಕರ ಪ್ರತಿಭಟನೆ

Published:
Updated:

ಗುಲ್ಬರ್ಗ: ಸೇಡಂ ತಾಲ್ಲೂಕಿನ ಮಳಖೇಡದಲ್ಲಿರುವ ರಾಜಶ್ರೀ ಸಿಮೆಂಟ್ ಕಾರ್ಖಾನೆಯಲ್ಲಿ ನೌಕರರಿಗೆ ಸಮರ್ಪಕ ವೇತನ ನೀಡದೇ ಶೋಷಣೆ ಮಾಡಲಾಗುತ್ತಿದೆ ಎಂದು ಆರೋಪಿಸಿ, ಇದನ್ನು ನಿವಾರಿಸಲು ಒತ್ತಾಯಿಸಿ `ರಾಜಶ್ರೀ ಸಿಮೆಂಟ್ ಕಾರ್ಖಾನೆ ನೌಕರರ ಹೋರಾಟ ಸಮಿತಿ~ ನೇತೃತ್ವದಲ್ಲಿ ಶುಕ್ರವಾರ ಇಲ್ಲಿ ಜಿಲ್ಲಾಧಿಕಾರಿಗಳ ಕಚೇರಿ ಎದುರು ಬೃಹತ್ ಪ್ರತಿಭಟನೆ ನಡೆಸಲಾಯಿತು.15ಕ್ಕೂ ಹೆಚ್ಚು ವರ್ಷಗಳಿಂದ ಕಾರ್ಖಾನೆಯಲ್ಲಿ ದುಡಿಯುತ್ತಿರುವ ನೌಕರರಿಗೆ ನಿಗದಿತ ವೇತನ ಪಾವತಿಸುತ್ತಿಲ್ಲ. ಇವರನ್ನು ಗುತ್ತಿಗೆ ಆಧಾರದಲ್ಲಿ ದುಡಿಸಿಕೊಂಡು ಶೋಷಣೆ ಮಾಡಲಾಗುತ್ತಿದೆ. ಇತ್ತೀಚೆಗೆ ದಿನದ ವೇತನದಲ್ಲಿ 50 ರೂಪಾಯಿ ದಿಡೀರ್ ಹೆಚ್ಚಿಸಿ, ಮುಂದಿನ ದಿನಗಳಲ್ಲಿ ವರ್ಷಕ್ಕೆ ರೂ. 10ರಂತೆ ಏರಿಕೆ ಮಾಡುವ ನಿರ್ಧಾರ ತೆಗೆದುಕೊಳ್ಳಲಾಗಿದೆ. ಇದಕ್ಕೆ ನೌಕರರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ ಎಂದು ಶ್ರಮಜೀವಿಗಳ ವೇದಿಕೆ ಅಧ್ಯಕ್ಷ ಹಾಗೂ ಹೋರಾಟ ಸಮಿತಿ ಮುಖಂಡ ಚಂದ್ರಶೇಖರ ಎಸ್. ಹಿರೇಮಠ ತಿಳಿಸಿದರು.ಕೇಂದ್ರ ಸರ್ಕಾರವು ಸಿಮೆಂಟ್ ಕಾರ್ಖಾನೆಯ ನೌಕರ ವೇತನವನ್ನು ಐದು ವಿಭಾಗಗಳಲ್ಲಿ ನಿಗದಿ ಮಾಡಿದೆ. ರಾಜಶ್ರೀ ಕಾರ್ಖಾನೆ ನೌಕರರಿಗೆ ಕನಿಷ್ಠ `ಇ~ ದರ್ಜೆ ವೇತನವನ್ನಾದರೂ ನೀಡುವಂತೆ ಅವರು ಆಗ್ರಹಿಸಿದರು.ಗುತ್ತಿಗೆ ಕಾರ್ಮಿಕರು ಮತ್ತು ದಿನಗೂಲಿ ನೌಕರರಿಗೆ ಕಾರ್ಮಿಕ ಸಂಘಟನೆಗಳಲ್ಲಿ ಆಡಳಿತ ಮಂಡಳಿಯು ಈವರೆಗೆ ಪ್ರಾತಿನಿಧ್ಯ ಕೊಟ್ಟಿಲ್ಲ. ಅವರಿಗೆ ಮತದಾನದ ಹಕ್ಕನ್ನೂ  ಕೊಟ್ಟಿಲ್ಲ. ಈ ಬಗ್ಗೆ ಕೇಳಿದರೆ ನೌಕರರನ್ನು ಕೆಲಸದಿಂದ ವಜಾ ಮಾಡುವ ಬೆದರಿಕೆ ಹಾಕಲಾಗುತ್ತಿದೆ ಎಂದು ಆರೋಪಿಸಿದರು.ಕಾರ್ಮಿಕರ ಶೋಷಣೆ ವಿರೋಧಿಸಿ ನಡೆದ ಈ  ಪ್ರತಿಭಟನೆಯಲ್ಲಿ ಮಾಳಪ್ಪ ಪೂಜಾರಿ, ಶಂಕರ ಮಂಗಾ, ಶರಣು ಅವಂಟಿ, ಭೀಮಣ್ಣ ವಿತಾರಾಬಾದ, ರತನಕುಮಾರ, ಹಣಮಂತ, ವಿಜಯಕುಮಾರ ಅಡಕಿ, ಮಲ್ಲಪ್ಪ ಜಿ. ಅರಬೀಳಿ ಇತರರು ಪಾಲ್ಗೊಂಡಿದ್ದರು. ನಂತರ ಜಿಲ್ಲಾಧಿಕಾರಿ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry