ನಾಳೆ ಚಿಂಚೋಳಿಗೆ ಸಿಎಂ: ಸರ್ಕಾರಿ ಕಟ್ಟಡ ಥಳಥಳ!

7

ನಾಳೆ ಚಿಂಚೋಳಿಗೆ ಸಿಎಂ: ಸರ್ಕಾರಿ ಕಟ್ಟಡ ಥಳಥಳ!

Published:
Updated:

 ಚಿಂಚೋಳಿ: ಇದು ಸರ್ಕಾರ ವಿವಿಧ ಇಲಾಖೆಗಳ ಅಧಿಕಾರಿಗಳ ಕಚೇರಿಯ ಕಟ್ಟಡದ ಕಥೆವ್ಯಥೆ. ಉಪ್ಪರ್ ಶೇರ್ವಾನಿ ಅಂದರ್ ಪರೇಶಾನಿ ಎಂಬ ಉರ್ದು ಗಾದೆ ಮಾತು ಈ ಕಟ್ಟಡಗಳಿಗೆ ಅಕ್ಷರಶ: ಅನ್ವಯಿಸುತ್ತದೆ. ಇದಕ್ಕೆ ಕಾರಣ ಮುಖ್ಯಮಂತ್ರಿಗಳ ಭೇಟಿ!ನಾಡಿನ ದೊರೆ ಮುಖ್ಯಮಂತ್ರಿ ಡಿ.ವಿ. ಸದಾನಂದ ಗೌಡರು ನಾಳೆ ಭಾನುವಾರ ತಾಲ್ಲೂಕಿಗೆ ಪ್ರಥಮ ಬಾರಿಗೆ ಭೇಟಿ ನೀಡಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಿಲಾನ್ಯಾಸ ನೆರವೇರಿಸಿ, ವಿವಿಧ ಕಟ್ಟಡಗಳನ್ನು ಉದ್ಘಾಟಿಸುತ್ತಿರುವ ಹಿನ್ನೆಲೆಯಲ್ಲಿ ಲೋಕೋಪಯೋಗಿ ಇಲಾಖೆ ಕಾಟಾಚಾರಕ್ಕೆ ವಿವಿಧ ಕಟ್ಟಡಗಳಿಗೆ ಸುಣ್ಣ ಬಣ್ಣ ಬಳಿದು ಕೈತೊಳೆದುಕೊಂಡಿದೆ.ಇಲ್ಲಿನ ಸರ್ಕಾರಿ ಕಟ್ಟಡಗಳ ಮುಂಭಾಗಕ್ಕೆ ಮಾತ್ರ ಬಣ್ಣ ಬಳಿದಿದ್ದು ಅಧಿಕಾರಿಗಳು ತಾಲ್ಲೂಕಿನಲ್ಲಿ ಹೇಗೆ ಕೆಲಸ ಮಾಡುತ್ತಿದ್ದಾರೆ ಎಂಬುದಕ್ಕೆ ಉತ್ತಮ ನಿದರ್ಶನವಾಗಿದೆ.ಇಲ್ಲಿನ ಚಂದಾಪುರದ ಸರ್ಕಾರಿ ಪಿಯು ಕಾಲೇಜು, ಮಿನಿ ವಿಧಾನ ಸೌಧ, ಜೆಸ್ಕಾಂ ಕಚೇರಿ, ಸಮಾಜ ಕಲ್ಯಾಣ ಇಲಾಖೆಯ ಮೆಟ್ರಿಕ್ ಪೂರ್ವ ಬಾಲಕರ ವಸತಿ ನಿಲಯ, ಸರ್ಕಾರಿ ಸಾರ್ವಜನಿಕ ತಾಲ್ಲೂಕು ಆಸ್ಪತ್ರೆ, ತಾಲ್ಲೂಕು ಪಂಚಾಯಿತಿ ಕಚೇರಿ, ಸಮಾಜ ಕಲ್ಯಾಣ ಇಲಾಖೆ, ಆಶ್ರಮ ಶಾಲೆ, ಪಂಚಾಯತ ರಾಜ್ ತಾಂತ್ರಿಕ ಉಪ ವಿಭಾಗ ಅಧಿಕಾರಿಗಳ ಕಚೇರಿ ಮತ್ತು ಅಧಿಕಾರಿಗಳ ವಸತಿ ಗೃಹಗಳ ಮುಂಭಾಗಕ್ಕೆ ಮಾತ್ರ ಬಣ್ಣ ಬಳಿಯಲಾಗಿದೆ.ಆದರೆ ಪಶು ಸಂಗೋಪನಾ ಇಲಾಖೆ ಸಹಾಯಕ ನಿರ್ದೇಶಕರು ಹಾಗೂ ಚಂದ್ರಂಪಳ್ಳಿ ನೀರಾವರಿ ಯೋಜನೆಯ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಅವರ ಕಚೇರಿ ಮಾತ್ರ ಬಣ್ಣದ ಭಾಗ್ಯದಿಂದ ವಂಚಿತವಾಗಿವೆ.

ಅವರು ಸಾಗುವ ಪ್ರವಾಸಿ ಮಂದಿರದ ರಸ್ತೆ ನಿರ್ಮಾಣದಿಂದ ಭರದಿಂದ ಸಾಗಿದರೆ, ಚಂದಾಪುರದ ಭಕ್ತ ಕನಕದಾಸ ವೃತ್ತದಿಂದ ಗಾಂಧಿವೃತ್ತದವರೆಗಿನ ಹಳೆಯ ರಸ್ತೆಯ ಇಕ್ಕೆಲಗಳಲ್ಲಿ ಮುರುಮ್ ಹಾಕಿದ್ದು ಹುಬ್ಬೇರಿಸುವಂತೆ ಮಾಡಿದೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry