ಶನಿವಾರ, ಮೇ 28, 2022
25 °C

ಪಕ್ಷ ಬೇಧ ಮರೆತು ಅಭಿವೃದ್ಧಿಗೆ ಮನವಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಯಡ್ರಾಮಿ: ಜೇವರ್ಗಿ ತಾಲ್ಲೂಕಿನ ಸರ್ವಾಂಗೀಣ ಅಭಿವೃದ್ಧಿಗಾಗಿ ಪಕ್ಷ ಬೇಧ ಮರೆತು ಶ್ರಮಿಸೋಣ ಎಂದು ಜೇವರ್ಗಿ ತಾಲ್ಲೂಕಿನ ಶಾಸಕ ದೊಡ್ಡಪ್ಪಗೌಡ ಪಾಟೀಲ  ನರಿಬೋಳ ತಿಳಿಸಿದರು. ಯಡ್ರಾಮಿಯಲ್ಲಿ ನೂತನವಾಗಿ ನಿರ್ಮಿಸಿದ ಕಸ್ತೂರಬಾ ಗಾಂಧಿ ಬಾಲಿಕಾ ವಸತಿ ಶಾಲೆ ಉದ್ಘಾಟಿಸಿ ಅವರು ಮಾತನಾಡಿದರು.ವಿದ್ಯಾರ್ಥಿನಿಯರು ಮಧ್ಯದಲಿಯ್ಲಾ ಶಾಲೆ ಬಿಡುವುದನ್ನು ತಪ್ಪಿಸಲು ಸರ್ಕಾರ ಹಲವಾರು ಕಾರ್ಯಕ್ರಮಗಳನ್ನು ಜಾರಿಗೆ ತಂದಿದ್ದು, ಅದರ ಮೊದಲ ಪ್ರಯತ್ನವಾಗಿ ಯಡ್ರಾಮಿಯಲ್ಲಿ ಈ ವಸತಿ ಶಾಲೆ ಪ್ರಾರಂಭಿಸಲಾಗುತ್ತಿದೆ, ಕಸ್ತೂರಬಾ ವಸತಿ ಶಾಲೆಯು ಸಂಪೂರ್ಣ ಉಚಿತವಾಗಿದ್ದು ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳುವಂತೆ ಮನವಿ ಮಾಡಿದರು.ಅಲ್ಪಸಂಖ್ಯಾತ ಮಕ್ಕಳಿಗಾಗಿ ಉರ್ದು ಶಾಲೆಗೆ ಕಂಪ್ಯೂಟರ್‌ಗಳನ್ನು ಕೊಡಿಸಲಾಗಿದೆ. ಮುಂಬರುವ ದಿನಗಳಲಿ ್ಲಇನ್ನಷ್ಟು ಶಾಲೆಗಳಿಗೆ ವಿಸ್ತರಿಸಲಾಗುವುದು ಎಂದರು.ಯಡ್ರಾಮಿ ಪದವಿ ಪೂರ್ವ ಕಾಲೇಜಿಗೆ ಸ್ವಂತ ಕಟ್ಟಡದ ಬಗ್ಗೆ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದ್ದು ಅದನ್ನು ಶೀಘ್ರದಲಿಯ್ಲಿ ಮಂಜೂರು ಮಾಡಿಸಿಕೊಡಲಾಗುವದು, ಯಡ್ರಾಮಿಯ ಸಮಗ್ರ ಅಭಿವೃದ್ಧಿಗಾಗಿ ಪಕ್ಷಬೇಧ ಮರೆತು ಶ್ರಮಿಸೋಣ. ಹಿಂದುಳಿದ ಪ್ರದೇಶ ಎನ್ನುವ ಹಣೆಪಟ್ಟಿ ಅಳಿಸಲು ಎಲ್ಲರ ಶ್ರಮ ಅಗತ್ಯವಿದೆ ಎಂದು ತಿಳಿಸಿದರು.ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಶಿವಪ್ರಭು ಪಾಟೀಲ್, ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ವಿಜಯಲಕ್ಮಿ ಆಂದೋಲಾ,  ಉಪ ನಿರ್ದೇಶಕ ಬಿ.ಎಸ್ ಪರಮೇಶ್ವರ, ಕ್ಷೇತ್ರ ಶಿಕ್ಷಣಾಧಿಕಾರಿ ರಾಮಕೃಷ್ಣ ಕುಲಕರ್ಣಿ, ಭೂಸೇನಾ ಅಧಿಕಾರಿ ಡೊಳ್ಳೆ, ಅಧಿಕಾರಿಗಳಾದ ಅಶೋಕ ತಾವಡೆ, ರುದ್ರಗೌಡ ಪಾಟೀಲ್ , ತಾಲ್ಲೂಕು  ಪಂಚಾಯಿತಿ ಸದಸ್ಯರಾದ ರೆಹಮತ್ ಬಿ, ತಾಲ್ಲೂಕು ಬಿಜೆಪಿ ಅಧ್ಯಕ್ಷ ಎಂ.ಬಿ. ಪಾಟೀಲ್ ಹರವಾಳ, ಶೀವಕುಮಾರ ಪಾಟೀಲ್, ಸುರೇಶ ಸುರಪುರ, ಮಲ್ಲಿಕಾರ್ಜುನ ಕುಸ್ತಿ, ಸಿದ್ದಣ್ಣ ಹೂಗಾರ, ಗ್ರಾಮ  ಪಂಚಾಯಿತಿ ಸದಸ್ಯರಾದ ಗೋಲ್ಲಾಳಪ್ಪ ಗೆಜ್ಜಿ ಪಾಲ್ಗೊಂಡರು.

ಅಧ್ಯಕ್ಷೆ ಮಲ್ಲಮ್ಮ ಯತ್ನಾಳ ಅಧ್ಯಕ್ಷತೆ ವಹಿಸಿದ್ದರು. ದ.ಮ. ಚೌದರಿ ಸ್ವಾಗತಿಸಿದರು. ರಮೇಶ ವಂದಿಸಿದರು,ಸೋಲಾರ ದೀಪ ವಿತರಣೆ: 10ನೇ ತರಗತಿಯಲ್ಲಿ ಕಲಿಯುತ್ತಿರುವ ಬಾಲಕಿಯರಿಗೆ ಗ್ರಾಮ ಪಂಚಾಯಿತಿ ವತಿಯಿಂದ ಸೋಲಾರ್ ದೀಪವನ್ನು ವಿತರಿಸಲಾಯಿತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.