ಶುಕ್ರವಾರ, ಜೂನ್ 18, 2021
24 °C

ಚುನಾವಣೆ: ಬಿಜೆಪಿ ಪೂರ್ವಸಿದ್ಧತಾ ಸಭೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗುಲ್ಬರ್ಗ: ಮುಂಬರುವ ಈಶಾನ್ಯ ಪದವೀಧರ ಮತಕ್ಷೇತ್ರದ ಚುನಾವಣೆ ಕುರಿತಂತೆ ಬಿಜೆಪಿ ಕಾರ್ಯಾಲಯದಲ್ಲಿ ಮಂಗಳವಾರ ಪೂರ್ವಸಿದ್ಧತಾ ಸಭೆ ನಡೆಯಿತು.ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿ ಹಾಗೂ ಅಭ್ಯರ್ಥಿ ಅಮರನಾಥ ಪಾಟೀಲ ಮಾತನಾಡಿ, ನೋಂದಣಿ ಕೆಲಸವನ್ನು ತೀವ್ರಗತಿಯಲ್ಲಿ ಮಾಡಿ ಏಪ್ರಿಲ್ 30ರೊಳಗೆ ಮುಗಿಸಬೇಕು. ಪ್ರತಿ ಮಂಡಲದಲ್ಲಿನ ಬೂತ್‌ಗಳಿಗೆ ಇಬ್ಬರನ್ನು ಉಸ್ತುವಾರಿಗಳನ್ನಾಗಿ ನೇಮಿಸಬೇಕು ಎಂದರು.ಜಿಲ್ಲಾಧ್ಯಕ್ಷ ರಾಜಕುಮಾರ ಪಾಟೀಲ ತೇಲ್ಕೂರ ಮಾತನಾಡಿ, ಚುನಾವಣೆಯನ್ನು ಸವಾಲಾಗಿ ತೆಗೆದುಕೊಂಡು ಪಕ್ಷದ ಅಭ್ಯರ್ಥಿ ಗೆಲುವಿಗೆ ಶ್ರಮಿಸಬೇಕು ಎಂದು ಕಾರ್ಯಕರ್ತರಿಗೆ ಕರೆ ನೀಡಿದರು. ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶರಣಪ್ಪ ತಳವಾರ, ವಿವಿಧ ಕೆಲಸಗಳ ಉಸ್ತುವಾರಿ ವಹಿಸಿಕೊಂಡಿರುವ ಕಾರ್ಯಕರ್ತರು, ಮುಖಂಡರು ತಮ್ಮ ಕಾರ್ಯವನ್ನು ಸಮರ್ಥವಾಗಿ ನಿಭಾಯಿಸಬೇಕು ಎಂದು ಮನವಿ ಮಾಡಿದರು.ಪಕ್ಷದ ಅಭ್ಯರ್ಥಿ ಅಮರನಾಥ ಪಾಟೀಲ ಅವರು ಇದೇ 14ರಂದು ಸೇಡಂ, 15ರಂದು ಅಫಜಲಪುರ ಹಾಗೂ 16ರಂದು ಚಿತ್ತಾಪುರ ಮಂಡಲಗಳಿಗೆ ಭೇಟಿ ಕೊಡುವರು ಎಂದು ಸಭೆಗೆ ತಿಳಿಸಲಾಯಿತು.ಧರ್ಮಣ್ಣ ಇಟಗ, ಬಸವಣ್ಣಪ್ಪ ಗೌನಳ್ಳಿ, ಕೆ.ಬಿ.ವಿನೋದ, ಮಲ್ಲಿಕಾರ್ಜುನ ನಿಂಗದಳ್ಳಿ, ಮಹೇಶ ಪಾಟೀಲ ತರನಳ್ಳಿ, ಸಿದ್ಧಾರ್ಥ ಬಸರಿಗಿಡ, ಚಂದಮ್ಮ ಪಾಟೀಲ, ಶಶಿಧರ ಸುಗೂರ, ಶಶಿಕಲಾ ಟೆಂಗಳಿ ಸೇರಿದಂತೆ ವಿವಿಧ ಘಟಕಗಳ ಪದಾಧಿಕಾರಿಗಳು, ಕಾರ್ಯಕರ್ತರು ಸಭೆಯಲ್ಲಿ ಇದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.