6ತಿಂಗಳ ಕಾಲಾವಕಾಶ:ಧರಣಿ ಅಂತ್ಯ

7

6ತಿಂಗಳ ಕಾಲಾವಕಾಶ:ಧರಣಿ ಅಂತ್ಯ

Published:
Updated:

ಶಹಾಬಾದ: ಪಟ್ಟಣದ ಮಾರುಕಟ್ಟೆ ಪ್ರದೇಶದಲ್ಲಿ ಎಲ್ಲೆಂದರಲ್ಲಿ ತಲೆ ಎತ್ತಿರುವ ಮಾಂಸದಂಗಡಿಗಳ ಸ್ಥಳಾಂತರ ಕುರಿತಂತೆ ಶ್ರೀರಾಮಸೇನೆ ಕಳೆದ 12 ದಿನಗಳಿಂದ ನಡೆಸಿದ್ದ ಅಮರಣಾಂತ ಸರದಿ ಉಪವಾಸ ಧರಣಿ ಸತ್ಯಾಗ್ರಹ ಬುಧವಾರ ಮುಕ್ತಾಯಗೊಂಡಿದೆ.ನಗರಸಭೆ ಅಧ್ಯಕ್ಷ ಮಹಮದ ರಫೀಕ ಕಾರೋಬಾರಿ, ಉಪಾಧ್ಯಕ್ಷೆ ಗೀತಾ ಸಾಹೇಬಗೌಡ ಬೋಗುಂಡಿ, ಪೌರಾಯುಕ್ತ, ಕೆಲ ಸದಸ್ಯರು ಧರಣಿ ನಿರತರ ಬಳಿ ನಡೆಸಿದ ಸಂಧಾನ ಕೊನೆಗೂ ಯಶಸ್ಸು ಕಂಡಿದೆ.ನಗರಸಭೆ ಸರ್ವಸದಸ್ಯರ ತುರ್ತುಸಭೆಯಲ್ಲಿ ಈಚೆಗೆ ತೆಗೆದುಕೊಂಡಿದ್ದ ನಿರ್ಣಯವನ್ನು ಶ್ರೀರಾಮಸೇನೆ ಸಂಪೂರ್ಣ ತಳ್ಳಿಹಾಕಿದ ನಂತರ ಕಾರ್ಯಕರ್ತರ್ಬೊರು ವಿಷಸೇವಿಸಿ ಆತ್ಮಹತ್ಯೆಗೆ ಪ್ರಯತ್ನಿಸಿದ್ದ ಘಟನೆಯಿಂದ ಸಮಸ್ಯೆ ಇನ್ನಷು ಕ್ಲಿಷ್ಟವಾಗಿತ್ತು.ಸಂಧಾನದ ಫಲವಾಗಿ, ನಗರಸಭೆ ಆರು ತಿಂಗಳೊಳಗೆ ಮಾಂಸದಂಗಡಿ ಸ್ಥಳಾಂತರಕ್ಕೆ ಕಠಿಣ ಕ್ರಮ ತೆಗೆದುಕೊಳ್ಳಬೇಕು. ಅಕ್ರಮ ಮಾಂಸದಂಗಡಿಗಳನ್ನು ತೆಗೆದುಹಾಕಬೇಕು ಎಂದು ಒತ್ತಾಯಿಸಿ,ತಾತ್ವಿಕವಾಗಿ ಈ ಸಂಧಾನಕ್ಕೆ ಒಪ್ಪಲಾಗಿದ್ದು ನಗರಸಭೆ ನಿರ್ಣಯದಂತೆ ನಡೆಯದಿದ್ದಲ್ಲಿ ಮುಂದೆ ಉಗ್ರ ಹೋರಾಟ ಮಾಡಲಾಗುವುದು ಎಂದು ಶ್ರೀರಾಮಸೇನೆ ಜಿಲ್ಲಾ ಸಂಚಾಲಕ ಶೀತಲ್ ಜೈನ್ ‘ಪ್ರಜಾವಾಣಿ’ಗೆ ತಿಳಿಸಿದರು.ನಗರ ಅಧ್ಯಕ್ಷ ದಶರಥ ದೇಸಾಯಿ, ಉಪಾಧ್ಯಕ್ಷ ರಾಮು ಕುಸಾಳೆ, ಸಂತೋಷ ಪುಲಸೆ, ಸುಖದೇವ ಸಾಳುಂಕೆ, ರಮೇಶ ದಂಡಗೋಲಕರ್, ರಾಜು ಬೇವಿನಕಟ್ಟಿ, ವಿನೋದ ಯಾದವ, ಸಂತೋಷ ಹಂದ್ರಕಿ, ಉಮೇಶ, ಜಗನ್ನಾಥ ಸುಬೇದಾರ, ನಾಗನಾಥ ರ್ಯಾಪನೂರ ಉಪಸ್ಥಿತರಿದ್ದರು. ನಿರ್ಲಕ್ಷ: 12 ದಿನಗಳ ಧರಣಿಗೆ ತಾಲ್ಲೂಕಿನ ಹಿರಿಯ ಅಧಿಕಾರಿ ಸೇರಿದಂತೆ ಸಚಿವ ರೇವೂನಾಯಕ ಬೆಳಮಗಿ ಸಂಪೂರ್ಣ ಉದಾಸೀನತೆ ತೋರಿದ್ದು ಖಂಡನೀಯ ಎಂದು ಶ್ರೀರಾಮಸೇನೆ ಟೀಕಿಸಿದೆ. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry