ಶನಿವಾರ, ಜೂನ್ 12, 2021
24 °C

ಶಿಕ್ಷಕರು ದೇಶ ನಿರ್ಮಿಸುವ ಶಿಲ್ಪಿಗಳು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಿತ್ತಾಪುರ: ಸಮಾಜದ ಎಲ್ಲಾ ಕ್ಷೇತ್ರಗಳಿಗಿಂತ ಶಿಕ್ಷಣ ಕ್ಷೇತ್ರಕ್ಕೆ ಹೆಚ್ಚಿನ ಮಹತ್ವವಿದೆ. ದೇಶದ ಭವಿಷ್ಯವೇ ಶಿಕ್ಷಕರ ಕೈಯಲ್ಲಿ ಅಡಗಿರುತ್ತದೆ. ಶಿಕ್ಷಕರು ಎಂದರೆ ದೇಶವನ್ನು ನಿರ್ಮಾಣ ಮಾಡುವ ಮಹಾನ್ ಶಿಲ್ಪಿಗಳು ಎಂದು ಶಾಸಕ ವಾಲ್ಮೀಕ ನಾಯಕ ಹೇಳಿದರು.ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ತಾಲ್ಲೂಕು ಘಟಕ, ಪ್ರಾಥಮಿಕ ಮತ್ತು ಪ್ರೌಢ ಶಾಲಾ ಶಿಕ್ಷಕರ ಸಂಘದ ಸಂಯುಕ್ತಾಶ್ರಯದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ 2011-12ನೇ ಸಾಲಿನ ಉತ್ತಮ ಶಾಲೆ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಉದ್ಘಾಟಿಸಿ, ಶಾಲೆಗೆ ಬರುವ ವಿದ್ಯಾರ್ಥಿಗಳನ್ನು ತಮ್ಮ ಸ್ವಂತ ಮಕ್ಕಳೆಂದು ಭಾವಿಸಿ ವಿದ್ಯಾರ್ಥಿಗಳಲ್ಲಿ ತಾರತಮ್ಯ ಮಾಡದೆ ಗುಣಾತ್ಮಕ ಶಿಕ್ಷಣ ನೀಡಬೇಕು ಎಂದು ಶಿಕ್ಷಕರಿಗೆ ಕಿವಿ ಮಾತು ಹೇಳಿದರು.ಶಾಲೆಯ ಮುಖ್ಯಗುರು ಮತ್ತು ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ ಸದಸ್ಯರ, ಪಾಲಕ ಪೋಷಕರ ನಡುವೆ ಸುಮಧುರ ಬಾಂಧವ್ಯ ಹೊಂದಿರುವುದು ಶಿಕ್ಷಣ ಸುಧಾರಣೆ ದೃಷ್ಟಿಯಿಂದ ಬಹಳ ಮುಖ್ಯವಾಗಿದೆ. ಬಹುಮಾನ, ಪ್ರಶಸ್ತಿ ಕೊಡುವುದು ಸರ್ಕಾರದ ಕೆಲಸವಾಗಿದೆ. ಆದರೆ, ಇಲ್ಲಿನ ಸರ್ಕಾರಿ ನೌಕರರ ಸಂಘ ಮತ್ತು ಶಿಕ್ಷಕರ ಸಂಘದವರು ಉತ್ತಮ ಶಾಲೆಗಳನ್ನು ಆಯ್ಕೆ ಮಾಡಿ ಶಾಲೆಯ ಮುಖ್ಯಗುರು, ಗ್ರಾಮ ಪಂಚಾಯಿತಿ ಅಧ್ಯಕ್ಷ, ಎಸ್‌ಡಿಎಂಸಿ ಅಧ್ಯಕ್ಷರನ್ನು ಸತ್ಕರಿಸಿ, ಪ್ರಶಸ್ತಿ ಪತ್ರ ಕೊಡುತ್ತಿರುವುದು ಮಾದರಿ ಕಾರ್ಯಕ್ರಮ ಎಂದು ವಾಲ್ಮೀಕ ಬಣ್ಣಿಸಿದರು.ಕ್ಷೇತ್ರ ಶಿಕ್ಷಣಾಧಿಕಾರಿ ಜೆ. ಚವ್ಹಾಣ್‌ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾ ಅಧ್ಯಕ್ಷ ಬಿ.ಎಸ್. ದೇಸಾಯಿ, ಪ್ರಾಥಮಿಕ ಶಾಲಾ ಶಿಕ್ಷರ ಸಂಘದ ತಾಲ್ಲೂಕು ಅಧ್ಯಕ್ಷ ಶಾಮರಾವ ಗಾರಂಪಳ್ಳಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಚನ್ನವೀರಯ್ಯ ಸ್ವಾಮಿ, ಕ್ಷೇತ್ರ ಸಮನ್ವಯಾಧಿಕಾರಿ ಸಿದ್ಧವೀರಯ್ಯ ರುದ್ರನೂರು, ತಾಪಂ ಗ್ರಾಮೀಣ ಉದ್ಯೋಗ ವಿಭಾಗದ ಸಹಾಯಕ ನಿರ್ದೇಶಕ ಲಕ್ಷ್ಮಣ್ ಶೃಂಗೇರಿ, ಮುಖಂಡ ಶರಣಪ್ಪ ನಾಶಿ ಮುಖ್ಯ ಅತಿಥಿಗಳಾಗಿದ್ದರು.ಜಿಲ್ಲಾ ಉಪ ಸಮನ್ವಯಾಧಿಕಾರಿ ಚನ್ನಬಸ್ಸಪ್ಪ ಮಧೋಳ ಅವರು ,ಶಾಲಾಭಿವೃದ್ಧಿಯಲ್ಲಿ ಗ್ರಾಮ ಪಂಚಾಯಿತಿ ಮತ್ತು ಎಸ್‌ಡಿಎಂಸಿ ಅಧ್ಯಕ್ಷರ ಪಾತ್ರ, ಕುರಿತು ವಿಶೇಷ ಉಪನ್ಯಾಸ ನೀಡಿದರು. ಸರ್ಕಾರಿ ನೌಕರರ ಸಂಘದ ತಾಲ್ಲೂಕು ಅಧ್ಯಕ್ಷ ವಿಜಯಕುಮಾರ ಲೊಡ್ಡಾನೋರ್ ಸ್ವಾಗತಿಸಿದರು. ಪ್ರೌಢ ಶಾಲಾ ಮುಖ್ಯಗುರುಗಳ ಸಂಘದ ತಾಲ್ಲೂಕು ಅಧ್ಯಕ್ಷ ಶ್ರೀಮಂತ ಹೊಸಮನಿ ಪ್ರಾಸ್ತಾವಿಕವಾಗಿ ಮಾತನಾಡಿದರು.

 

ಮುಖ್ಯಗುರು ವಿಜಯಕುಮಾರ ಜಮಖಂಡಿ ನಿರೂಪಿಸಿದರು. ಮುಖ್ಯಗುರು ರವಿಕುಮಾರ ವಂದಿಸಿದರು. 2011-12ನೇ ಸಾಲಿಗಾಗಿ ತಾಲ್ಲೂಕಿನ ದಿಗ್ಗಾಂವ್, ಮಂಗಲಗಿ ಗ್ರಾಮಗಳ ಪ್ರೌಢ ಶಾಲೆ, ದಿಗ್ಗಾಂವ, ಕಲ್ಲಹಿಪ್ಪರಗಾ, ಮಳಗ (ಕೆ), ಹುಳಂಡಗೇರಾ ತಾಂಡಾ, ಬಾಲು ನಾಯಕ ತಾಂಡಾ ಪ್ರಾಥಮಿಕ ಶಾಲೆಗಳಿಗೆ ಉತ್ತಮ ಶಾಲಾ ಪ್ರಶಸ್ತಿ ಪತ್ರ ನೀಡಿ, ಮುಖ್ಯಗುರು, ಗ್ರಾಮ ಪಂಚಾಯಿತಿ ಅಧ್ಯಕ್ಷ, ಎಸ್‌ಡಿಎಂಸಿ ಅಧ್ಯಕ್ಷರನ್ನು ಸನ್ಮಾನಿಸಲಾಯಿತು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.